ADVERTISEMENT

‘ಕಲುಷಿತ ಆಹಾರದಿಂದ ದುಷ್ಪರಿಣಾಮ’

ಚನ್ನಮ್ಮನ ಕಿತ್ತೂರಿನಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:00 IST
Last Updated 2 ಫೆಬ್ರುವರಿ 2017, 6:00 IST

ಚನ್ನಮ್ಮನ ಕಿತ್ತೂರು: ‘ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಇದರಿಂದ ಮನುಷ್ಯ ಬಹು ಅಂಗಗಳ ತೊಂದರೆ ಅನುಭವಿಸುವಂತಾಗಿದೆ’ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಳವಳಪಟ್ಟರು.

ಸ್ಥಳೀಯ ಕೃಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಬೆಳಗಾವಿ ನೇತ್ರದರ್ಶನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಂಟಿಯಾಗಿ ಮಂಗಳವಾರ ಆಯೋಜಿ ಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಣ್ಣುಗಳು ಶರೀರದ ಪ್ರಧಾನ ಅಂಗವಾಗಿದ್ದು ಆಹಾರದ ದುಷ್ಪರಿ ಣಾಮದಿಂದಾಗಿ ಯೌವನಾವಸ್ಥೆ ಯಲ್ಲಿಯೇ  ವ್ಯಕ್ತಿ ಕನ್ನಡಕ ಧರಿಸುವ ಪ್ರಸಂಗ ಎದುರಾಗುತ್ತಿದೆ. ಆದ್ದರಿಂದ ಕಣ್ಣು ರಕ್ಷಣೆ ಸಲುವಾಗಿ ಆಯೋಜಿಸುವ ಇಂಥ ಉಚಿತ ಶಿಬಿರದ ಪ್ರಯೋಜನ ವನ್ನು ಪಡೆದುಕೊಂಡು ಚಿಕ್ಕ ವಯಸ್ಸಿ ನಲ್ಲಿ ಎದುರಾಗುವ ದೃಷ್ಟಿದೋಷವನ್ನು ತಪ್ಪಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಮರಣಾನಂತರ ದೇಹದಾನದ ಜಾಗೃತಿಯೂ ಇಂದು ಹೆಚ್ಚಾಗುತ್ತಿದ್ದು ಇದರಿಂದ ಮತ್ತೊಬ್ಬರ ಜೀವನಕ್ಕೆ ಅನುಕೂಲವಾಗುತ್ತದೆ. ಸತ್ತ ನಂತರ ಶರೀರ ಹೂಳುವುದು ಬಿಟ್ಟು ದೇಹದಾನ ಮಾಡಿದರೆ ಅದರಿಂದ ಇನ್ನೊಬ್ಬರಿಗೆ ಒಳಿತಾಗುವುದು’ ಎಂದರು.

ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ಮಹಾಂತೇಶ ದೊಡಗೌಡ್ರ ‘ಮಾತನಾಡಿ ಕಣ್ಣಿನ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸು ವುದು ಅಗತ್ಯವಾಗಿದೆ’ ಎಂದರು. ಸಂಘದ ಅಧ್ಯಕ್ಷೆ ಉಮಾದೇವಿ ವಿಶ್ವನಾಥ ಬಿಕ್ಕಣ್ಣವರ, ಉಪಾಧ್ಯಕ್ಷ ರಾಜಶೇಖರ ಇನಾಮದಾರ, ನಿರ್ದೇಶಕ ರಾದ ಉದಯ ಇಂಗಳೆ, ಜಗದೀಶ ಘಟನಟ್ಟಿ, ವಿಶ್ವನಾಥ ಹಿರೇಮಠ, ಮಡಿವಾಳೆಪ್ಪ ದುರಗಾಡಿ, ಶಿವಪುತ್ರಯ್ಯ ಲದ್ದೀಮಠ, ಸುಶೀಲಾ ಗುಂಡ್ಲೂರ, ಶಿವಪ್ಪ ಹಂಚಿನಮನಿ, ಬಸವರಾಜ ಮಂಗಳಗಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಜ್ಜಯ್ಯ ಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಉದಯ ಇಂಗಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.