ADVERTISEMENT

ಟನ್‌ ಕಬ್ಬಿಗೆ ₹ 300 ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:04 IST
Last Updated 16 ಸೆಪ್ಟೆಂಬರ್ 2017, 5:04 IST
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸಭೆಯನ್ನುದ್ದೇಶಿಸಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸಭೆಯನ್ನುದ್ದೇಶಿಸಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು   

ಅಥಣಿ: ‘ಸಹಕಾರ ತತ್ವದ ಆಧಾರದ ಮೇಲೆ ಪ್ರಾರಂಭಗೊಂಡ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು 2016- ಮತ್ತು 17 ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಬೆಳೆಗಾರರಿಗೆ ಎರಡನೇ ಕಂತಾಗಿ ಪ್ರತಿ ಟನ್ ಕಬ್ಬಿಗೆ ₹300   ಬ್ಯಾಂಕ್‌ಗೆ ಖಾತೆಗೆ ಜಮಾ ಮಾಡಲಾಗುವುದು ಎಂದು  ಅಥಣಿ ಶಾಸಕ ಲಕ್ಷ್ಮಣ ಸವದಿ ಘೋಷಿಸಿದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 25 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು,ಕಬ್ಬು ಪೂರೈಕೆ ಮಾಡಿದ ರೈತರಿಗೆ ಮೊದಲ ಕಂತಾಗಿ ಪ್ರತಿ ಟನ್ ಕಬ್ಬಿಗೆ 2700 ರೂ. ನೀಡಲಾಗಿದ್ದು, ಈಗ ಎರಡನೇ ಕಂತಾಗಿ ಪ್ರತಿ ಟನ್ ಕಬ್ಬಿಗೆ 300 ರೂ. ಗಳನ್ನು ಘೋಷಿಸುವ ಮೂಲಕ ಉತ್ತರ ಕರ್ನಾಟಕದಲ್ಲಯೇ ಎಲ್ಲ ಸಕ್ಕರೆ ಕಾರ್ಖಾನೆಗಳು ನೀಡಿದ ದರಕ್ಕಿಂತ ಹೆಚ್ಚಿನ ದರವನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನೀಡಿದೆ ಎಂದರು. 

2017- ಮತ್ತು18 ನೇ ಸಾಲಿಗೆ ಮಳೆಯ ಕೊರತೆಯಿಂದ ಕಬ್ಬಿನ ಇಳುವರಿ ಅತ್ಯಲ್ಪವಿದ್ದು, ಉತ್ತಮ ಇಳುವರಿಯ ಕಬ್ಬನ್ನು ಕಾರ್ಖಾನೆಗೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ರಾಜ್ಯದಲ್ಲಿ 11 ಸಹಕಾರಿ ಸಕ್ಕರೆ ಕಾರ್ಖಾನೆಗಳು 70 ರಿಂದ 80 ಕೋಟಿ ರೂ ಹಾನಿಯಲ್ಲಿವೆ. ಆದರೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ 1.58 ಕೋಟಿ ರೂ ಲಾಭದಲ್ಲಿದೆ. ಇದಕ್ಕೆಲ್ಲ ಆಡಳಿತ ಮಂಡಳಿಯವರ ಪ್ರಾಮಾಣಿಕತೆ, ಕಾರ್ಮಿಕರ ಪರಿಶ್ರಮ ಹಾಗೂ ರೈತರ ನಂಬಿಗೆಯೇ ಕಾರಣ ಎಂದರು.ಸಕ್ಕರೆ ಉತ್ಪಾದನೆಯ ಜೊತೆಗೆ 27 ಮೇಗಾ ವ್ಯಾಟ್ ಸಾಮರ್ಥ್ಯದ ಸಹ ವಿದ್ಯುತ್ ಘಟಕ ಕೂಡ ಕಾರ್ಯಾರಂಭಗೊಂಡಿ ದೆ. ಕೆಲವರು ಕಾರ್ಖಾನೆಗೆ ಮಸಿ ಬಳೆಯುವ ಯತ್ನ ಮಾಡುತ್ತಿದ್ದಾರೆ ಎಂದರು.  ಈ ವೇಳೆ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿದರು.        

ಈ ವೇಳೆ ಉಪಾಧ್ಯಕ್ಷ ಜ್ಯೋತಗೌಡ ಪಾಟೀಲ, ನಿರ್ದೇಶಕರಾದ  ಗುರಬಸು ತೇವರಮನಿ, ಸಿ.ಎಚ್. ಪಾಟೀಲ, ಶಾಂತಿನಾಥ. ನಂದೇಶ್ವರ, ಗುಳಪ್ಪ ಜತ್ತಿ,  ಬಸವರಾಜ. ಹಂಜಿ, ವಿಶ್ವನಾಥ ಪೋಲಿಸ ಪಾಟೀಲ, ಶ್ರೀಮತಿ ಎನ್.ಎಮ್. ತೆಲಸಂಗ, ಶ್ರೀಮತಿ ಆರ್.ವ್ಹಿ.ಕುಲಕರ್ಣಿ ಆರ್. ಎ. ಪಟ್ಟಣ, ಎನ್.ಡಿ. ಯಕ್ಸಂಬಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್. ಪಾಟೀಲ, ಎಸ್.ಬಿ. ಗೋಟಖಿಂಡಿ, ವ್ಹಿ.ಪಿ. ಮನಗುಳಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.