ADVERTISEMENT

ನನ್ನ ನೋಡಿ ಮತ ಹಾಕಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 6:07 IST
Last Updated 15 ನವೆಂಬರ್ 2017, 6:07 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು. ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ, ಶಾಸಕ ಬಸವರಾಜ ಹೊರಟ್ಟಿ, ಎ.ಎಸ್‌. ಪಾಟೀಲ ನಡಹಳ್ಳಿ, ಎನ್‌.ಎಚ್‌. ಕೋನರೆಡ್ಡಿ, ಬಾಬಾಗೌಡ ಪಾಟೀಲ, ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು. ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ, ಶಾಸಕ ಬಸವರಾಜ ಹೊರಟ್ಟಿ, ಎ.ಎಸ್‌. ಪಾಟೀಲ ನಡಹಳ್ಳಿ, ಎನ್‌.ಎಚ್‌. ಕೋನರೆಡ್ಡಿ, ಬಾಬಾಗೌಡ ಪಾಟೀಲ, ಉಪಸ್ಥಿತರಿದ್ದರು   

ಬೆಳಗಾವಿ: ‘ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ನೀವು ನನ್ನನ್ನು ನೋಡಿ ಮತ ನೀಡಿ. 20 ತಿಂಗಳ ಅವಧಿಯಲ್ಲಿ ನಾನೇನು ಮಾಡಿದ್ದೇನೆ ಎನ್ನುವುದನ್ನು ನೋಡಿದ್ದೀರಿ. ಐದು ವರ್ಷಗಳ ಪೂರ್ಣಾವಧಿ ಸಿಕ್ಕರೆ ಇನ್ನೂ ಏನೇನು ಮಾಡಬಲ್ಲೆ ಎನ್ನುವುದನ್ನು ನೋಡಲಿಕ್ಕಾದರೂ ಅವಕಾಶ ನೀಡಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೋರಿದರು.

‘ಬಿಜೆಪಿ, ಕಾಂಗ್ರೆಸ್‌ಗೆ ಅವಕಾಶ ನೀಡಿದ್ದೀರಿ. ಈಗ ನಮ್ಮ ಪಕ್ಷಕ್ಕೊಮ್ಮೆ ಬಹುಮತ ನೀಡಿ’ ಎಂದು ಅವರು ನಗರದಲ್ಲಿ ಮಂಗಳವಾರ ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕರ್ತರ ಹಾಗೂ ರೈತರ ಸಮಾವೇಶದಲ್ಲಿ ಮನವಿ ಮಾಡಿದರು.

ಈ ಭಾಗದ ಪ್ರಮುಖ ಕುಡಿಯುವ ನೀರು ಪೂರೈಕೆ ಯೋಜನೆಯಾದ ಮಹದಾಯಿ ಬಗ್ಗೆ ಬಿಜೆಪಿಯವರಿಗೆ ಆಸಕ್ತಿ ಇಲ್ಲ. ಸಚಿವ ಜಾರ್ಜ್‌ ರಾಜೀ ನಾಮೆಗೆ ಒತ್ತಾಯಿಸಿ ವಿಧಾನ ಮಂಡಲದ ಕಲಾಪ ನಡೆಯಲು ಬಿಡು ತ್ತಿಲ್ಲ. ರೈತರ ಸಮಸ್ಯೆ, ಮಹದಾಯಿ ಯೋಜನೆಗಿಂತ ಯಾವುದೋ ಒಬ್ಬ ಸಚಿವನ ರಾಜೀನಾಮೆ ಅವರಿಗೆ ಮುಖ್ಯವಾಯಿತೇ? ಎಂದು ಪ್ರಶ್ನಿಸಿದರು.

ADVERTISEMENT

ಚಿಕ್ಕಮಗಳೂರಿನಲ್ಲಿ ಡಿವೈಎಸ್ಪಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಲಪ್ಪ ಹಂಡಿಬಾಗ್‌ ರಾಜ್ಯದಲ್ಲಿರುವ ಭ್ರಷ್ಟ ವ್ಯವಸ್ಥೆಗೆ ಬೇಸರಿಸಿ ಆತ್ಮಹತ್ಯೆಗೆ ಶರಣಾದರು. ಅವರು ಇದೇ ಜಿಲ್ಲೆಯವರಾಗಿದ್ದರು. ಅಲ್ಲದೇ, ಮುಖ್ಯಮಂತ್ರಿಯವರ ಹಾಲುಮತ ಸಮುದಾಯಕ್ಕೆ ಸೇರಿದವರು. ತಮ್ಮ ಸಮುದಾಯದವರನ್ನು ರಕ್ಷಿಸಿಕೊಳ್ಳದ ಮುಖ್ಯಮಂತ್ರಿಯವರು ರಾಜ್ಯದ 6.5 ಕೋಟಿ ಜನರ ರಕ್ಷಣೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಬಾಬಾಗೌಡ ಸೇರ್ಪಡೆ: ಕಾಂಗ್ರೆಸಿನಿಂದ ಉಚ್ಛಾಟಿತರಾದ ಬಾಗಲಕೋಟೆ ಜಿಲ್ಲೆಯ ದೇವರಹಿಪ್ಪರಗಿ ಶಾಸಕ, ಎ.ಎಸ್‌. ಪಾಟೀಲ ನಡಹಳ್ಳಿ ಜೆಡಿಎಸ್‌ ಸೇರ್ಪಡೆಯಾದರು. ಇವರ ಜೊತೆ ಇವರ ಸಹೋದರ ಶಾಂತಗೌಡ ಪಾಟೀಲ, ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರೂ ಸೇರ್ಪಡೆಯಾದರು.

ಬಾಬಾಗೌಡ ಪಾಟೀಲ ಮಾತನಾಡಿ, ‘ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ನಾವು ಸ್ಥಳೀಯ ಅಭ್ಯರ್ಥಿಗಳನ್ನು ನೋಡಿ ಮತ ಹಾಕುವುದು ಬೇಡ, ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ನೋಡಿ ಮತ ಹಾಕಬೇಕಾಗಿದೆ’ ಎಂದರು.

ಲಿಂಗಾಯತ– ವೀರಶೈವ ವಿಷಯ ನಮಗೆ ಬೇಡ. ನೀವು ಮನೆಯಲ್ಲಿ ಯಾವುದಾದರೂ ಆಚರಣೆ ಮಾಡಿಕೊಳ್ಳಿ. ರಾಜಕೀಯದಲ್ಲಿ ಇದನ್ನು ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಬಸವರಾಜ ಹೊರಟ್ಟಿ, ಶಾಸಕ ಎನ್‌.ಎಚ್‌. ಕೋನರೆಡ್ಡಿ, ಪಿ.ಜಿ.ಆರ್‌. ಸಿಂಧ್ಯ ಮಾತನಾಡಿದರು.

ಗಡಿ ಸಮಸ್ಯೆ– ಮುಗಿದ ಅಧ್ಯಾಯ;‘ಮಹಾರಾಷ್ಟ್ರ– ಬೆಳಗಾವಿ ಗಡಿ ಸಮಸ್ಯೆಯು ಮುಗಿದ ಹೋದ ಅಧ್ಯಾಯವೆಂದು ದಿವಂಗತ ಪ್ರಧಾನಿ ಮೊರಾರ್ಜಿ ದೇಸಾಯಿ ಹೇಳಿದ್ದರು. ಪುನಃ ಪುನಃ ಗಡಿ ಸಮಸ್ಯೆಯನ್ನು ಕೆಣಕುವ ಮೂಲಕ ಎಂಇಎಸ್‌ ಗಡಿ ರಾಜಕೀಯ ಮಾಡುತ್ತಿದೆ. ಇವರಿಗೆ ನಾವೇನು ಅನ್ಯಾಯ ಮಾಡಿದ್ದೇ

‘ನಾಯಕ ಸಮಾಜಕ್ಕೆ ಶಕ್ತಿ ತುಂಬಿದ್ದೇ ನಾನು’
‘ಸತೀಶ ಜಾರಕಿಹೊಳಿ ಅವರನ್ನು ಸಚಿವನಾಗಿ ಮಾಡಿದ್ದು ನಾನು. ಬಾಲಚಂದ್ರ ಜಾರಕಿಹೊಳಿ ಅವರಿಗೆ ರಾಜಕೀಯ ಶಕ್ತಿ ತುಂಬಿದ್ದು ನಾನು. ಇಡೀ ನಾಯಕ ಸಮಾಜಕ್ಕೆ ಶಕ್ತಿ ತುಂಬಿದೇವು. ಆದರೆ, ಲಾಭ ಪಡೆದುಕೊಂಡವರಿಗೆ ಕನಿಷ್ಠ ಕೃತಘ್ನತೆಯೂ ಇಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕಿಡಿಕಾರಿದರು.

ನಾಯಕ ಜನಾಂಗವನ್ನು ಎಸ್‌.ಟಿ ಸಮುದಾಯಕ್ಕೆ ಸೇರಿಸಿದ್ದೆವು. ಅದರ ಫಲವಾಗಿ ಇಂದು ಹಲವರು ರಾಜಕೀಯವಾಗಿ ಹಾಗೂ ಇತರ ಕ್ಷೇತ್ರಗಳಲ್ಲಿಯೂ ಬೆಳೆದಿದ್ದಾರೆ. ಇದೇ ರೀತಿ ಮುಸ್ಲಿಂ ಸಮುದಾಯದವರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಿದ್ದೆ. ನಾನು ಜಾತಿವಾದಿ ಆಗಿದ್ದಿದ್ದರೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.