ADVERTISEMENT

‘ಪುರುಷನ ನೆರಳಿನಿಂದ ಮಹಿಳೆ ಹೊರ ಬರಲಿ’

ಶ್ರಮಿಕ ಮಹಿಳೆಯರಿಗೆ ಉಡಿ ತುಂಬಿ ಸನ್ಮಾನ: ದೇಶಿ ಉಡುಗೆಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿನಿಯರು, ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:32 IST
Last Updated 9 ಮಾರ್ಚ್ 2017, 11:32 IST
‘ಪುರುಷನ ನೆರಳಿನಿಂದ ಮಹಿಳೆ ಹೊರ ಬರಲಿ’
‘ಪುರುಷನ ನೆರಳಿನಿಂದ ಮಹಿಳೆ ಹೊರ ಬರಲಿ’   
ರಾಮದುರ್ಗ: ಪುರುಷ ಪ್ರಧಾನ ಸಮಾ ಜದಲ್ಲಿ ಮಹಿಳೆಯರನ್ನು ಮುಂಚಿ ನಿಂದಲೂ ಕಡೆಗಣಿಸುತ್ತಲೇ ಬರಲಾಗಿದೆ. ತಾವು ಶಾಸಕರಾಗಿದ್ದರೂ ತಮ್ಮ ಪತಿ ತಮಗೆ ಸ್ವಾತಂತ್ರ್ಯ ನೀಡದೇ ತಮ್ಮದೇ ಹಕ್ಕು ಚಲಾಯಿಸುತ್ತಿದ್ದರು ಎಂಬುವುದು ಸೋಜಿಗದ ಸಂಗತಿಯಾಗಿತ್ತು ಎಂದು ಮಾಜಿ ಶಾಸಕಿ ಶಾರದಮ್ಮ ಪಟ್ಟಣ ಹೇಳಿದರು. 
 
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಮತ್ತು ಶಾಸಕ ಅಶೋಕ ಪಟ್ಟಣ ಅವರು ಜಂಟಿಯಾಗಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಶ್ವ ಮಹಿಳಾ ದಿನಾ ಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ಅಡೆತಡೆ ಗಳನ್ನು ತೊರೆದು ಮುಖ್ಯವಾಹಿನಿಗೆ ಬರಲು ಯತ್ನಿಸಬೇಕು. ಸಮಾಜದಲ್ಲಿ ಮಹಿಳೆ ಪುರುಷನಷ್ಟೇ ಸಮಾನ ಎಂಬು ವುದನ್ನು ಸಾಬೀತು ಪಡಿಸಬೇಕು ಎಂದು ಹೇಳಿದರು. 
 
ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ವನಿತೆಯರ ಆದರ್ಶ ಗಳನ್ನು ಇಂದಿನ ಮಹಿಳೆಯರು ಅಳವಡಿ ಸಿಕೊಳ್ಳಬೇಕು. ಮಹಿಳೆಯರಲ್ಲಿ ಇರುವ ಸೇವಾ ಮನೋಭಾವನೆ ಪುರಷರಲ್ಲಿ ಕಾಣುತ್ತಿಲ್ಲ. ಸಮಾಜವು ಮಹಿಳೆಯರಿಗೆ ಸರಿಯಾದ ಸ್ಥಾನಮಾನ ನೀಡಬೇಕು ಎಂದು ಅವರು ಪ್ರತಿಪಾದಿಸಿದರು. 
 
ಗಂಡ ಕುಡುಕನಾಗಿದ್ದರೂ ಮನೆತನ ವನ್ನು ನಡೆಸಿಕೊಂಡು ಹೋಗುವ ಜವಾ ಬ್ದಾರಿ ಮನೆಯ ಮಹಿಳೆಯ ಮೇಲೆ ಇರುತ್ತದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಬಲರಾಗಿ ಮಾಡಲು ಅನೇಕ ಸ್ವಸಹಾಯ ಸಂಘ ಸ್ಥಾಪಿಸುವ ಮೂಲಕ ಆತ್ಮಸ್ಥೈರ್ಯ ತುಂಬುತ್ತಿರು ವುದು ಶ್ಲಾಘನೀಯ ಧರ್ಮಸ್ಥಳ ಸಂಸ್ಥೆ ಯನ್ನು ಎಂದು ಬಣ್ಣಿಸಿದರು. 
 
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜಿಲ್ಲಾ ಮುಖ್ಯಸ್ಥ ಸುರೇಶ ಮ್ಯೂಲಿ ಮಾತ ನಾಡಿ, ಮಹಿಳೆಯರ ಸಬಲೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಜಿಲ್ಲೆಯಲ್ಲಿ ಬಹುತೇಕ ಮಹಿಳೆಯರು ಸಂಘದ ವ್ಯಾಪ್ತಿಯಲ್ಲಿ ಸದಸ್ಯರಾಗಿ ಆರ್ಥಿ ಕವಾಗಿ ಸಬಲರಾಗುತ್ತಿದ್ದಾರೆ. ಅವರನ್ನು ಸ್ವಯಂ ಉದ್ಯೋಗ ಮಾಡುವಂತೆ ಪ್ರೇರೆಪಿಸುತ್ತಿದ್ದೇವೆ ಎಂದು ಹೇಳಿದರು.
 
ಅಸಂಘಟಿತ ಮಹಿಳಾ ಕಾರ್ಮಿಕ ರಾಗಿರುವ ಅಂಗನವಾಡಿ ಕಾರ್ಯಕರ್ತೆ ಯರ, ಸಹಾಯಕಿಯರ ಹಾಗೂ ಆಶಾ ಕಾರ್ಯಕರ್ತೆಯರ ಉದ್ಯೋಗ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯವರ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.
 
‘ಸ್ವಚ್ಛತೆಯಡೆಗೆ ಒತ್ತು ನೀಡಿ’
ಬೈಲಹೊಂಗಲ: ‘ಸುತ್ತಮುತ್ತಲಿನ ಪ್ರತಿ ಯೊಂದು ಹಳ್ಳಿ, ಪಟ್ಟಣ ಪ್ರದೇಶಗಳು ಸೌಂದರ್ಯಯುತವಾಗಿ, ಉತ್ತಮ ವಾತಾವರಣದಿಂದ ಕೂಡಿರಬೇಕಾದರೆ ಎಲ್ಲರು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಸುಭಾಸ ಸಂಪಗಾಂವ ಹೇಳಿದರು. 
 
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತ ಕೋತ್ತರ ಅಧ್ಯಯನ ಕೇಂದ್ರ ಹಾಗೂ ತಾಲ್ಲೂಕು ಪಂಚಾಯ್ತಿ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ನಡೆದ ‘ಸ್ವಚ್ಛ ಶಕ್ತಿ 2017 ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಚ್ಛತೆಗೆ ಮಹತ್ವ ನೀಡಿವೆ. ಅದೇ ರೀತಿ ಪ್ರತಿಯೊಬ್ಬ ನಾಗರಿಕರು ಸ್ವಚ್ಛ, ಸುಂದರ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ನಡೆಸ ಬೇಕು. ವಿಶ್ವ ಮಹಿಳಾ ದಿನಾಚರಣೆ ಯಂದು ಸ್ವಚ್ಛ ಶಕ್ತಿ ಸಪ್ತಾಹ ನಡೆಸುತ್ತಿರು ವುದು ಸಂತಸ ತಂದಿದೆ ಎಂದರು.
 
ಪ್ರಾಚಾರ್ಯ ಪ್ರೊ.ಆರ್.ಎಸ್.ಮರಿ ಗೌಡರ ಅಧ್ಯಕ್ಷತೆ ವಹಿಸಿದ್ದರು. ಬೈಲವಾಡ ಪಿಯು ಕಾಲೇಜಿನ ಉಪನ್ಯಾಸಕಿ ವಿರೂ ಪಾಕ್ಷಿ ಅಂಗಡಿ ಉಪನ್ಯಾಸ ನೀಡಿದರು. ಸ್ವಚ್ಛ ಭಾರತ ಮಿಷನ್ ಯೋಜನೆಯ ತಾಲ್ಲೂಕು ಸಂಯೋಜಕ ಎಸ್.ವಿ.ಹಿರೇ ಮಠ, ಉಪನ್ಯಾಸಕ, ಉಪನ್ಯಾಸಕಿ ಯರು, ವಿದ್ಯಾರ್ಥಿನಿಯರು ಇದ್ದರು. ಎಲ್ಲ ವಿದ್ಯಾರ್ಥಿನಿಯರು, ಉಪನ್ಯಾಸಕಿಯರು ದೇಶಿ ಸಂಸ್ಕೃತಿಯ ಉಡುಗೆ ತೊಟ್ಟು ಕಂಗೊಳಿಸಿದರು.
 
‘ಶಿಕ್ಷಣದಿಂದ ಸುಭದ್ರ ಬದುಕು’
ಹಾರೂಗೇರಿ: ಇಂದು ವ್ಯವ್ಯಸ್ಥೆ ಅರಿತು ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗ ಬೇಕು. ಉನ್ನತ ಶಿಕ್ಷಣ ಮಹಿಳೆಯ ಬದುಕನ್ನು ಸುಭದ್ರವಾಗಿ ರೂಪಿಸುತ್ತದೆ. ಪ್ರಾಚೀನ ಕಾಲದಿಂದ ಮಹಿಳೆ ಶೋಷ ಣೆಗೆ ಒಳಗಾಗುತ್ತಾ ಬಂದಿದ್ದು, ಇದನ್ನು ಮೆಟ್ಟಿ ನಿಂತು ನಾವು ಉನ್ನತ ಸಾಧನೆ ಮಾಡಬೇಕಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕಿ ಸ್ಮೀತಾ ಗಣಿ ಹೇಳಿದರು.
 
ಇಲ್ಲಿಯ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿ.ಸಿ.ಎ. ಮಹಾವಿದ್ಯಾಲಯಗಳ ಆಶ್ರಯ ದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. 
 
ವಿಶ್ವ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಸ್ತ್ರೀಯರು ಬದಲಾವ ಣೆಗಾಗಿ ಆತ್ಮಸ್ಥೈರ್ಯ, ವಿಶ್ವಾಸವನ್ನು ಅಳವಡಿಸಿಕೊಂಡು ಸಮಾಜದಲ್ಲಿ ದಿಟ್ಟ ಹೆಜ್ಜೆಯನ್ನಿಡಬೇಕು ಎಂದು ಉಪ ನ್ಯಾಸಕಿ ಬಿ.ಎ.ಕಠಾರೆ ಸಲಹೆ  ನೀಡಿದರು.  ಪ್ರಾಚಾರ್ಯ ಡಾ.ಎ.ಡಿ.ಟೊನಗೆ, ಎ.ವಿ.ಮೆಂಡಿಗೇರಿ, ಎಲ್ಲ ಉಪ ನ್ಯಾಸಕರು, ವಿದ್ಯಾರ್ಥಿನಿಯರು ಇದ್ದರು. 
ಧರ್ಮಶ್ರೀ ಎತ್ತಿನಮನಿ ನಿರೂಪಿಸಿ ದರು. ಪ್ರೊ.ಕೆ.ಬಿ.ಘಟಕಾಂಬಳೆ ವಂದಿಸಿದರು.
 
ಹೋಟೆಲಿನಲ್ಲಿ ದುಡಿಯುವ  ಮಹಿಳೆಗೆ ಗೌರವ
ಚಿಕ್ಕೋಡಿ:
ಪಟ್ಟಣದ  ಅಲ್ಲಮಪ್ರಭು  ಅನ್ನದಾನ  ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಹಂಪಣ್ಣವರ ಕ್ಲಾಥ್‌ ಎಂಪೋರಿಯಂ ಸಹಯೋಗದಲ್ಲಿ ಅನ್ನದಾನ ಸಮಿತಿ ಸದಸ್ಯೆಯರು ಪಟ್ಟಣದಲ್ಲಿ ಹೊಟೇಲ್‌ ಉದ್ಯಮ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಡ ಮಹಿಳೆಯರಿಗೆ ಅರಶಿನ- ಕುಂಕುಮ, ಸೀರೆ-–ರವಿಕೆ ನೀಡಿ, ಉಡಿ ತುಂಬಿ ಸತ್ಕರಿಸುವ ಮೂಲಕ ಅಂತರ ರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಿದರು.

ಅನ್ನದಾನ ಸಮಿತಿ ಕಾರ್ಯದರ್ಶಿ ಸುನಂದಾ ಹುಕ್ಕೇರಿ, ‘ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯ ಪಾತ್ರ ಅತೀ ಮಹತ್ವದ್ದಾಗಿದೆ. ಮಹಿಳೆಯು ಒಲಿ ದರೆ ನಾರಿ, ಮುನಿದರೆ ಮಾರಿ. ಯಾವುದೇ ವ್ಯಕ್ತಿ ಅಥವಾ ಕುಟುಂಬದ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಎಲ್ಲರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದರು.

ಸಮಿತಿ ಸಂಸ್ಥಾಪಕ ಚಂದ್ರಕಾಂತ ಹುಕ್ಕೇರಿ, ಸದಸ್ಯರಾದ ಪದ್ಮಶ್ರೀ ಹುಕ್ಕೇರಿ, ಐಶ್ವರ್ಯ ಹುಕ್ಕೇರಿ, ಅವಿ ನಾಶ ಔಂದಕರ, ಉದಯ ಠಗರೆ, ದಲಿತ ವಿದ್ಯಾರ್ಥಿ ಒಕ್ಕೂಟದ ಪದಾ ಧಿಕಾರಿಗಳಾದ ಜೀವನ ಮಾಂಜ ರೇಕರ, ಉದಯ ವಾಘ್ಮೋರೆ,  ಉದ್ಯಮಿ ಸದಾಶಿವ ಶೆಟ್ಟಿ, ವಿಠ್ಠಲ ಶೆಟ್ಟಿ, ಕೃಷ್ಣಾ ಮಾಳಿ, ಹೋಟೆಲ್ ಉದ್ಯೋಗಿ ಮಹಾಂತೇಶ ಬಡಿಗೇರ, ಶಿವಲಿಂಗ ಬಡಿಗೇರ, ರಾಜು ಕಾಂಬಳೆ  ಇದ್ದರು.

* ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹಿಳೆಯರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಹಿಳೆ ತನ್ನನ್ನು ತಾನು ಗುರುತಿಸಿಕೊಳ್ಳಬೇಕಾಗಿದೆ
ಲಕ್ಷ್ಮಿ ಆರಿಬೆಂಚಿ, ಜಾನಪದ ಕಲಾವಿದೆ
 
* ರಾಜ್ಯ ಸರ್ಕಾರದ ಜನಪರ ಮಹಿಳಾ ಸಬಲೀಕರಣ ಕಾರ್ಯಕ್ರಮ ರೂಪಿಸಿದೆ. ಯೋಜನೆಗಳ ಪ್ರಯೋಜನ ಪಡೆದು  ಸಮಾಜದ ಮುಖ್ಯವಾಹಿನಿಗೆ ಬರಬೇಕು
ಅಶೋಕ ಪಟ್ಟಣ, ವಿಧಾನ ಸಭೆಯ ಮುಖ್ಯಸಚೇತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.