ADVERTISEMENT

ಬಾಬಾರಾಮದೇವ ಭೇಟಿ: ಮಠದಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 7:26 IST
Last Updated 19 ಜುಲೈ 2017, 7:26 IST

ಹುಕ್ಕೇರಿ: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿಶ್ವವಿಖ್ಯಾತ ಯೋಗಗುರು ಬಾಬಾ ರಾಮದೇವ ಅವರಿಗೆ ಪ್ರತಿಷ್ಠಿತ ‘ರೇಣುಕ ಶ್ರೀ’ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿರು ವುದು ಎಲ್ಲ ಯೋಗ ಶಿಕ್ಷಕರು ಹಾಗೂ ಯೋಗಪಟುಗಳಿಗೆ ಗೌರವ ಸಮರ್ಪಿಸಿದಂತಾಗಿದೆ ಎಂದು ಪತಂಜಲಿ ಯೋಗ ಪೀಠದ ಕರ್ನಾಟಕ ಘಟಕದ ಮುಖ್ಯಸ್ಥ ಭಂವರಲಾಲ್ ಆರ್ಯ ಹೇಳಿದರು.

ಅವರು ಮಂಗಳವಾರ ಸ್ಥಳೀಯ ಹಿರೇಮಠದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಸಿದ್ಧತಾ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಇದೊಂದು ಅಪರೂಪದ ಸಮಾರಂಭ. ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರಣ ಆ ಸಮಾರಂಭದ ಯಶಸ್ಸಿಗಾಗಿ ಶ್ರಮಿಸಲು ವಿಶೇಷ ಕಾರ್ಯಪಡೆ ರಚಿಸಲಾಗುತ್ತಿದೆ.

ಸಮಾರಂಭದ ಪೂರ್ವಭಾವಿಯಾಗಿ ಗ್ರಾಮೀಣ ಮಟ್ಟ ದಲ್ಲಿ ಪಂಚಾಯ್ತಿವಾರು ಯೋಗ ಶಿಬಿರ ಹಮ್ಮಿಕೊಂಡು ಜನರಲ್ಲಿ ಮತ್ತು ಯುವ ಸಮೂಹಕ್ಕೆ ಯೋಗದ ಮಹತ್ವ ತಿಳಿಸಿ ಕೊಡಲು ನಿರ್ಧರಿಸಲಾಗಿದೆ ಎಂದರು.  ಜಿಲ್ಲೆಯಾದ್ಯಂತ ಇಂತಹ ಶಿಬಿರ ನಡೆಯಲಿದ್ದು, ಅಲ್ಲಿ ಪಾಲ್ಗೊಳ್ಳುವ ಶಿಬಿ ರಾರ್ಥಿಗಳು ಸಮಾರಂಭದ ಯಶಸ್ಸಿಗೆ ಶ್ರಮಿಸುತ್ತಾರೆ ಎಂದು ತಿಳಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಬಾಬಾ ರಾಮ ದೇವರ ಪ್ರಶಸ್ತಿ ಪ್ರದಾನ ಸಮಾರಂಭದ ನಿಮಿತ್ತ ಇದೇ 20ರಂದು ಸಂಜೆ 6 ಗಂಟೆಗೆ ನಿಡಸೋಶಿ ಪಂಚಮ ಶಿವ ಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಂಸದ ರಮೇಶ್ ಕತ್ತಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಜಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಚಂಬಣ್ಣ ತಾರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.