ADVERTISEMENT

ಮಾಡಿ ತೋರಿಸುವ ಸರ್ಕಾರ ನಮ್ಮದು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:23 IST
Last Updated 6 ನವೆಂಬರ್ 2017, 5:23 IST
ಸಚಿವ ರಮೇಶ ಜಾರಕಿಹೊಳಿ ಮುಗಳಖೋಡದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಭಾನುವಾರ ಭೇಟಿಯಾದರು
ಸಚಿವ ರಮೇಶ ಜಾರಕಿಹೊಳಿ ಮುಗಳಖೋಡದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಭಾನುವಾರ ಭೇಟಿಯಾದರು   

ಮುಗಳಖೋಡ: ‘ಕಾಂಗ್ರೆಸ್‌ ಸರ್ಕಾರ ಕೇವಲ ಮಾತನಾಡುವುದಿಲ್ಲ. ಅಭಿವೃದ್ಧಿ ಯನ್ನು ಮಾಡಿ ತೋರಿಸುತ್ತಿದೆ. ಜನರ ಹಿತಾಸಕ್ತಿಯನ್ನು ಅರಿತು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಪಟ್ಟಣದಲ್ಲಿ ಶನಿವಾರ ನಡೆದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಡಚಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತಂದದ್ದು ಕಾಂಗ್ರೆಸ್‌ ಸರ್ಕಾರವೇ ಹೊರತು ಹಾಲಿ ಶಾಸಕ ಪಿ. ರಾಜೀವ ಅಲ್ಲ. ಸರ್ಕಾರದ ಸಾಧನೆ ಗಳನ್ನು ಕಿರುಹೊತ್ತಿಗೆಯಲ್ಲಿ ಮುದ್ರಿಸ ಲಾಗಿದ್ದು, ಅವುಗಳನ್ನು ಮನೆ ಮನೆಗೆ ವಿತರಿಸಲಾಗುವುದು’ ಎಂದರು.

ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ, ‘ಮುಂಬರುವ ಚುನಾವಣೆಯಲ್ಲಿ ಕುಡಚಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲು ಕಾರ್ಯಕರ್ತರು ಈಗಿನಿಂದಲೇ ಶ್ರಮಿಸ ಬೇಕು’ ಎಂದು ಸೂಚಿಸಿದರು. ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಕಾಂತಾ ನಾಯಿಕ ಮಾತ ನಾಡಿದರು. ಕಾರ್ಯಕರ್ತರು ಪಟ್ಟಣದ ಅಗಸಿ ಬಾಗಿಲಿನಿಂದ ಯಲ್ಲಾಲಿಂಗೇಶ್ವರ ಮಠ ದವರೆಗೆ ಬೈಕ್ ಮೆರವಣಿಗೆ ನಡೆಸಿದರು.

ADVERTISEMENT

ಮುಖಂಡರಾದ ಸಂಜಯ ಕುಲಿಗೋಡ, ಮಾರುತಿ ಗೋಕಾಕ, ಅಶೋಕ ಕೊಪ್ಪದ, ಭೀಮಸಿ ಬನಶಂಕರಿ, ಅಶೋಕ ಬಾಗಿ, ಪ್ರಕಾಶ ಆದಪ್ಪಗೋಳ, ಪರಪ್ಪ ಕುಲಿಗೋಡ, ಗೋಪಾಲ ತೇರದಾಳ, ಸಿದ್ದಪ್ಪ ಬಳಿಗಾರ, ಬಸವರಾಜ ತೇರದಾಳ, ರಾಜು ನಾಯಿಕ, ಲಕ್ಷ್ಮಣ ಗೋಕಾಕ, ಅಣ್ಣಪ್ಪ ಸೊಂಟನ್ನವರ ಇದ್ದರು. ಬಿ.ಐ. ಬನಶಂಕರಿ ಕಾರ್ಯಕ್ರಮ ನಿರೂಪಿಸಿದರು.

ಸ್ವಾಮೀಜಿ ಆಶೀರ್ವಾದ ಪಡೆದ ಸಚಿವ: ಪಟ್ಟಣದ ಯಲ್ಲಾಲಿಂಗೇಶ್ವರ ಮಠವು ಗುರುತಿಸಲಾಗದ ಮಟ್ಟಿಗೆ ಬೆಳೆದುನಿಂತಿದೆ. ಅದಕ್ಕೆ ಮುರುಘ ರಾಜೇಂದ್ರ ಸ್ವಾಮೀಜಿ ಅವರ ಪರಿ ಶ್ರಮವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಮಠಕ್ಕೆ ಭಾನುವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.