ADVERTISEMENT

ಅಪಹರಣ ಪ್ರಕರಣ: ಮೂವರು ಬಾಲಕರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:36 IST
Last Updated 16 ಫೆಬ್ರುವರಿ 2017, 19:36 IST
ಬೆಂಗಳೂರು: ಹದಿನೈದು ವರ್ಷದ ಬಾಲಕಿಯನ್ನು ಅಪಹರಿಸಿ ಆಂಧ್ರಪ್ರದೇಶದ ಮಡಕಶಿರ ತಾಲ್ಲೂಕಿನ ಮನೆಯೊಂದರಲ್ಲಿ ಕೂಡಿಟ್ಟಿದ್ದ ಆರೋಪದ ಮೇಲೆ 16 ವರ್ಷದ ಮೂವರು ಬಾಲಕರನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 
ಈ ಸಂಬಂಧ ಫೆ.9ರಂದು ಬಾಲಕಿ ಪೋಷಕರು ದೂರು ಕೊಟ್ಟಿದ್ದರು. ‘ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದ ಮಗಳು, ಸಂಜೆಯಾದರೂ ವಾಪಸಾಗಿಲ್ಲ. ಮೂವರು ಸ್ಥಳೀಯ ಹುಡುಗರೇ ಆಕೆಯನ್ನು ಅಪಹರಿಸಿರುವ ಅನುಮಾನವಿದೆ’ ಎಂದು ದೂರಿದ್ದರು.
 
‘ಆ ಹುಡುಗರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿಕೊಂಡು, ಪತ್ತೆಕಾರ್ಯ ಪ್ರಾರಂಭಿಸಲಾಯಿತು. ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಅವರ ಮೊಬೈಲ್‌ಗಳು ಮಡಕಶಿರ ವ್ಯಾಪ್ತಿಯ ಟವರ್‌ನಿಂದ ಸಂಪರ್ಕ ಪಡೆಯುತ್ತಿದ್ದವು. ಬುಧವಾರ ಬೆಳಿಗ್ಗೆ ಅಲ್ಲಿಗೆ ತೆರಳಿದ್ದ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿ, ಆ ಮೂವರನ್ನೂ ವಶಕ್ಕೆ ಪಡೆದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
 
‘ಬಂಧಿತರ ಪೈಕಿ ಒಬ್ಬಾತ, ಸಂತ್ರಸ್ತೆಯನ್ನು ಪ್ರೀತಿ ಮಾಡುತ್ತಿದ್ದ. ಅದಕ್ಕೆ ಆಕೆ ಒಪ್ಪಿಕೊಂಡಿರಲಿಲ್ಲ. ಹೀಗಾಗಿ, ಸಂಚು ರೂಪಿಸಿ ಅಪಹರಿಸಿದ್ದರು ಎನ್ನಲಾಗಿದೆ. ಬಾಲಕಿಯ ಹೇಳಿಕೆ ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ), ಅತ್ಯಾಚಾರ (ಐಪಿಸಿ 376) ಹಾಗೂ ಅಪಹರಣ (363) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.