ADVERTISEMENT

ಗಾಂಧೀಜಿ ವ್ಯಕ್ತಿತ್ವ ರೂಪಿಸಿದ ಗುರು ಕಸ್ತೂರಬಾ: ಮಲ್ಲೇಪುರಂ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಬೆಂಗಳೂರು: ‘ಕಸ್ತೂರಬಾ ಅವರಿಲ್ಲದೆ ಗಾಂಧೀಜಿ ಅವರು ಅಪೂರ್ಣ’ ಎಂದು ಲೇಖಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು. 

ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಲೀಲಾ ವಾಸುದೇವ್‌ ಅವರ ‘ಮಕ್ಕಳ ಕಸ್ತೂರಬಾ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಅವರ ಬಗ್ಗೆ ಸಾಕಷ್ಟು ಕೃತಿಗಳು‌ ಬಂದಿವೆ. ಆದರೆ, ಅವರ ಪತ್ನಿ ಕಸ್ತೂರಬಾ ಅವರ ಬಗ್ಗೆ ಅಷ್ಟಾಗಿ ಲೇಖನಗಳು, ಪುಸ್ತಕಗಳು ರಚನೆಯಾಗಿಲ್ಲ. ಕಸ್ತೂರಬಾ ಅವರು ಗಾಂಧೀಜಿ ಅವರ ವ್ಯಕ್ತಿತ್ವವನ್ನು ರೂಪಿಸಿದ ಗುರು ಎಂದರು.

ಕಸ್ತೂರಬಾ ಅವರ ಕುರಿತು ಮಕ್ಕಳಿಗಾಗಿ ಕನ್ನಡದಲ್ಲಿ ಬಂದಿರುವ ಮೊದಲ ಕೃತಿ ‘ಮಕ್ಕಳ ಕಸ್ತೂರಬಾ’. ಕಸ್ತೂರ ಬಾ ಅವರ ಆದರ್ಶಗಳು, ವಿಚಾರಗಳನ್ನು ಅತ್ಯಂತ ಸರಳವಾಗಿ ಈ ಕೃತಿ ಮೂಲಕ ಹೇಳಲಾಗಿದೆ ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಮಾತನಾಡಿ, ‘ಕಸ್ತೂರಬಾ ಮೊದಲ ಸತ್ಯಾಗ್ರಹಿ. ಅವರು ಗಾಂಧೀಜಿ ಅವರಿಗೆ ಸತ್ಯಾಗ್ರಹದ ಪಾಠ ಕಲಿಸಿದವರು. ಮಕ್ಕಳು ಉತ್ತಮ ಮಾರ್ಗದಲ್ಲಿ ನಡೆಯಬೇಕಾದರೆ ಈ ಕೃತಿ ಮಕ್ಕಳಿಗೆ ತಲುಪಬೇಕು’ ಎಂದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.