ADVERTISEMENT

ಗೋಷ್ಠಿಗೆ ಕಿರಿದಾದ ಸಭಾಂಗಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:58 IST
Last Updated 22 ಜುಲೈ 2017, 19:58 IST

ಬೆಂಗಳೂರು: ಅಂಬೇಡ್ಕರ್‌ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಹಿಳಾ ಚಳವಳಿ ಕುರಿತ ಗೋಷ್ಠಿಗೆ ಕಿರಿದಾದ ಸಭಾಂಗಣ ನೀಡಲಾಗಿದೆ ಎಂದು ಲೇಖಕಿಯರು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿ ಬಿ.ಟಿ. ಲಲಿತಾನಾಯಕ್  ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಗೆ ಮುಖ್ಯ ಸಭಾಂಗಣದ ಎಡಭಾಗದಲ್ಲಿ ಸಣ್ಣ ಸಭಾಂಗಣ ನಿಗದಿ ಮಾಡಲಾಗಿತ್ತು. ವಿಷಯ ಮಂಡಿಸುವವರೂ ಸೇರಿ 20 ಜನ ಕುಳಿತುಕೊಳ್ಳಲು ಮಾತ್ರ ಅವಕಾಶ ಇತ್ತು. ಉಳಿದವರು ನಿಂತುಕೊಂಡೆ ಭಾಷಣ ಕೇಳಿದರು. ಇನ್ನೂ ಕೆಲವರು ನೆಲದಲ್ಲೆ ಕುಳಿತರು.

ಅಕೈ ಪದ್ಮಶಾಲಿ ಮಾತನಾಡಿ, ‘ಗೋರಕ್ಷಣೆಯ ಹೆಸರಿನಲ್ಲಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಇದಕ್ಕೆ ಪರೋಕ್ಷವಾಗಿ ಪ್ರಧಾನಿ ನರೇಂದ್ರಮೋದಿ ಅವರ ಬೆಂಬಲವೂ ಇದೆ. ಅವರಿಗೆ ನನ್ನ ಧಿಕ್ಕಾರವಿದೆ’ ಎಂದು ಹೇಳಿದರು.

ADVERTISEMENT

ಬಿ.ಟಿ.ಲಲಿತಾನಾಯಕ್ ಮಾತನಾಡಿ, ‘ಅಕೈ ಅವರ ಅಭಿಪ್ರಾಯವನ್ನು ನಾನು ಅನುಮೋದಿಸುತ್ತೇನೆ. ಮೋದಿ ಅವರಿಗೆ ನನ್ನ ಧಿಕ್ಕಾರವೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.