ADVERTISEMENT

ಜೂನ್ 5ರಿಂದ ‘ಘಟ್ಟದತ್ತ ದಿಟ್ಟ ಹೆಜ್ಜೆ’ ಪರಿಸರ ಜಾಗೃತಿ ನಡಿಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:39 IST
Last Updated 24 ಮೇ 2017, 19:39 IST
ಬೆಂಗಳೂರು: ಸಾರಾ ಸಂಸ್ಥೆ, ಕೆ.ವಿ.ಸುಬ್ಬಣ್ಣ ರಂಗ ಸಮೂಹ, ನಾಡಚಾವಡಿ  ಸಹಯೋಗದೊಂದಿಗೆ ಪರಿಸರದ ಉಳಿವಿಗಾಗಿ 2017ರ ಜೂನ್ 5ರಿಂದ 10ರವರೆಗೆ ಜೋಗದಿಂದ ಶಿವಮೊಗ್ಗ ದವರೆಗೆ ‘ಘಟ್ಟದತ್ತ ದಿಟ್ಟ ಹೆಜ್ಜೆ’ ಎಂಬ 157 ಕಿ.ಮೀ. ಉದ್ಯದ ವಿಶಿಷ್ಟ ಜಾಗೃತಿ ನಡಿಗೆ ಆಯೋಜಿಸಲಾಗಿದೆ.
 
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪರಿಸರವಾದಿ ಅಖಿಲೇಶ್ ಚಿಪ್ಪಳಿ ಅವರು ಮಾತನಾಡಿ, ‘ಮಕ್ಕಳಿಂದ ಮಕ್ಕಳಿಗಾಗಿ  ಮಕ್ಕಳಿಗೋಸ್ಕರ ಎಂಬ ಘೋಷ ವಾಕ್ಯದೊಂದಿಗೆ ಜೂನ್ 5ರಂದು ಬೆಳಿಗ್ಗೆ  8ಕ್ಕೆ ಜೋಗದಿಂದ ಪ್ರಾರಂಭವಾಗುವ ಈ ನಡಿಗೆಯಲ್ಲಿ ನಾಡಿನ ಪರಿಸರ ಚಿಂತಕರು ಹಾಗೂ ಪರಿಸರ ಆಸಕ್ತರು ಭಾಗವಹಿಸಲಿದ್ದಾರೆ’ ಎಂದರು.
 
‘ಸಿರಿವಂತೆ, ಆಲಗೇರಿ ಮಂಡ್ರಿ, ಕೋಡೂರು, ಆನಂದಪುರಂ,  ಆಯನೂರು ಮಾರ್ಗವಾಗಿ  ಜೂನ್ 10 ರಂದು ಶಿವಮೊಗ್ಗ ತಲುಪಲಿದೆ’ ಎಂದು ತಿಳಿಸಿದರು. 
 
‘ಮಾರ್ಗ ಮಧ್ಯದಲ್ಲಿ ಪರಿಸರ ಜಾಗೃತಿ, ಕಾರ್ಯಾನುಷ್ಠಾನದ ಕುರಿತ ಚಿಂತನೆ, ಕಿರುಚಿತ್ರ ಪ್ರದರ್ಶನ, ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಮಾತುಕತೆ, ಚರ್ಚೆ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.