ADVERTISEMENT

ನಗರ ಜಿಲ್ಲೆಯಲ್ಲಿ 8.40 ಲಕ್ಷ ಮತದಾರರು

ಜಿಲ್ಲಾ ಪಂಚಾಯ್ತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:39 IST
Last Updated 10 ಫೆಬ್ರುವರಿ 2016, 19:39 IST
ಹೆಬ್ಬಾಳ ಉಪ ಚುನಾವಣೆಯ ಭದ್ರತೆಗೆ ನಿಯೋಜಿಸಲಾಗಿರುವ ಗಡಿ ಭದ್ರತಾ ಪಡೆಯ ಯೋಧರು ಸಂಜಯನಗರದಲ್ಲಿ ಬುಧವಾರ ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ
ಹೆಬ್ಬಾಳ ಉಪ ಚುನಾವಣೆಯ ಭದ್ರತೆಗೆ ನಿಯೋಜಿಸಲಾಗಿರುವ ಗಡಿ ಭದ್ರತಾ ಪಡೆಯ ಯೋಧರು ಸಂಜಯನಗರದಲ್ಲಿ ಬುಧವಾರ ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಇದೇ 13ರಂದು ನಡೆಯುವ ಮತದಾನದಲ್ಲಿ 8,40,449 ಮತದಾರರು ಮತ ಚಲಾಯಿಸಲಿದ್ದಾರೆ.

ಒಟ್ಟು 878 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 312 ಸೂಕ್ಷ್ಮ ಮತ್ತು 230 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ವಿ.ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಚುನಾವಣಾ ತರಬೇತಿಗೆ ಗೈರುಹಾಜರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಫೆ.12ರಂದು ಬೆಳಿಗ್ಗೆ 7ರಿಂದ 12ರ ಮಧ್ಯರಾತ್ರಿ 12 ಗಂಟೆಯ ವರೆಗೆ ಹಾಗೂ 22ರ ರಾತ್ರಿ 10ರಿಂದ 23ರ ಮಧ್ಯರಾತ್ರಿ 12 ಗಂಟೆಯ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.

ಮತ ಎಣಿಕೆ: ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕುಗಳ ಮತ ಎಣಿಕೆ ಟಿ.ದಾಸರಹಳ್ಳಿಯ ಕಾಳಹಸ್ತಿನಗರದ ಸರ್ಕಾರಿ ಪ್ರೌಢಶಾಲೆ,  ಬೆಂಗಳೂರು ದಕ್ಷಿಣ ತಾಲ್ಲೂಕಿನ ಮತ ಎಣಿಕೆ ಜಯನಗರದ  ನ್ಯಾಷನಲ್ ಕಾಲೇಜು, ಪೂರ್ವ ತಾಲ್ಲೂಕಿನ ಮತ ಎಣಿಕೆ ದೂರವಾಣಿನಗರದ ವಿದ್ಯಾಮಂದಿರ ಪ್ರೌಢಶಾಲೆ, ಆನೇಕಲ್ ತಾಲ್ಲೂಕಿನ ಮತ ಎಣಿಕೆ ಆನೇಕಲ್‌ನ ಅತ್ತಿಬೆಲೆ ರಸ್ತೆಯ ಸರ್ಕಾರಿ ಎ.ಎಸ್.ಬಿ. ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.