ADVERTISEMENT

ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒತ್ತುವರಿ ತೆರವು

₨ 100 ಕೋಟಿ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 20:09 IST
Last Updated 31 ಅಕ್ಟೋಬರ್ 2014, 20:09 IST

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿ ಗಡೇನಹಳ್ಳಿ ಗ್ರಾಮದ ಸರ್ವೆ ನಂ.22ರಲ್ಲಿ ಅಕ್ರಮ-ವಾಗಿ ಒತ್ತುವರಿ ಮಾಡಿ ಕೊಂಡಿದ್ದ 20 ಎಕರೆ ಜಾಗವನ್ನು ತೆರವುಗೊಳಿಸಿದ ಜಿಲ್ಲಾಡಳಿತ, ಸುಮಾರು ₨ 100 ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾ-ರದ ವಶಕ್ಕೆ ಪಡೆದುಕೊಂಡಿತು.

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸರ್ವೆಕಾರ್ಯ ನಡೆಸಿದಾಗ,  ಶೈಲಜಾ, ಲಲಿತಮ್ಮ, ಜಾನ್‌ ಆದಿಲ್‌, ಜೀನಾ ಪಿಂಟೋ, ಎಲಿಜಬೆತ್‌, ಸಿ.ತಂಗ-ಪುರಿ ಹಾಗೂ ಮಂಜುನಾಥ್‌ ಎಂಬುವ-ವರು ಅಕ್ರಮವಾಗಿ ಜಮೀನನ್ನು ಮಂಜೂರು ಮಾಡಿಸಿಕೊಂಡಿರುವುದು ಕಂಡುಬಂದಿದ್ದರಿಂದ ಜಾಗವನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕು ತಹಶೀಲ್ದಾರ್‌ ಬಾಳಪ್ಪ ಹಂದಿಗುಂದ ತಿಳಿಸಿದರು.

ಒಟ್ಟು ವಿಸ್ತೀರ್ಣ 74 ಎಕರೆ 34 ಗುಂಟೆ ಜಾಗದಲ್ಲಿ ಎ.ಟಿ.ರಾಮಸ್ವಾಮಿ ವರದಿಯ ಪ್ರಕಾರ 34 ಎಕರೆ 15 ಗುಂಟೆ ಜಾಗ ಒತ್ತುವರಿಯಾಗಿದೆ. ಈಗ 20 ಎಕರೆ ಜಾಗವನ್ನು ತೆರವು-ಗೊಳಿಸಲಾಗಿದ್ದು, ಇನ್ನುಳಿದ ಒತ್ತುವರಿದಾರರಿಗೆ ನೋಟಿಸ್‌ ನೀಡಲಾಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.