ADVERTISEMENT

ಮಳೆ ನೀರು ಸಂಗ್ರಹ 35 ಸಾವಿರ ಜನರಿಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:15 IST
Last Updated 27 ಮಾರ್ಚ್ 2017, 20:15 IST
ಜಯನಗರದಲ್ಲಿರುವ ಮಳೆ ನೀರು ಸುಗ್ಗಿ ಕೇಂದ್ರ
ಜಯನಗರದಲ್ಲಿರುವ ಮಳೆ ನೀರು ಸುಗ್ಗಿ ಕೇಂದ್ರ   

ಬೆಂಗಳೂರು: ಸಾರ್ವಜನಿಕರಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜಲಮಂಡಳಿಯು ಜಯನಗರದ 5ನೇ ಬ್ಲಾಕ್‌ನಲ್ಲಿ 1.1 ಎಕರೆಯಲ್ಲಿ ನಿರ್ಮಿಸಿರುವ ‘ಸರ್ ಎಂ. ವಿಶ್ವೇಶ್ವರಯ್ಯ  ಮಳೆ ನೀರು ಸುಗ್ಗಿ ಕೇಂದ್ರ’ಕ್ಕೆ ಈಗ ಆರು ವರ್ಷ ತುಂಬಿದೆ.

ನಗರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು 2009ರಲ್ಲಿ ಕಡ್ಡಾಯ ಮಾಡಲಾಗಿತ್ತು. ಜನರಿಗೆ ಈ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ 2011ರ ಮಾರ್ಚ್‌ನಲ್ಲಿ ಈ ಕೇಂದ್ರ ಆರಂಭಿಸಲಾಗಿತ್ತು. ಮಳೆ ನೀರು ಸಂಗ್ರಹದ 26 ಮಾದರಿಗಳು ಇಲ್ಲಿವೆ.

ಮಂಡಳಿಯು ಇಲ್ಲಿಯವರೆಗೆ 1600 ಗುತ್ತಿಗೆದಾರರಿಗೆ ತರಬೇತಿ ನೀಡಿದೆ. 35 ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080– 26653666 ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.