ADVERTISEMENT

ಮೈತ್ರಿ ದೃಷ್ಟಿ ಪುನರ್ವಸತಿ ಸಂಚಾರಿ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಮೈತ್ರಿ ದೃಷ್ಟಿ ಪುನರ್ವಸತಿ ಸಂಚಾರಿ ವಾಹನದ ಒಳಭಾಗದ ಸೌಲಭ್ಯವನ್ನು ಶಂಕರ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಆರ್‌.ವಿ.ರಮಣಿ  ಮತ್ತು ಮೈಕ್ರೋಸಾಫ್ಟ್‌ ಸಂಸ್ಥೆ ಭಾರತ ಶಾಖೆಯ ನಿರ್ದೇಶಕಿ ಚಿತ್ರಾ ಸೂದ್ ವೀಕ್ಷಿಸಿದರು- – ­ಪ್ರಜಾವಾಣಿ ಚಿತ್ರ
ಮೈತ್ರಿ ದೃಷ್ಟಿ ಪುನರ್ವಸತಿ ಸಂಚಾರಿ ವಾಹನದ ಒಳಭಾಗದ ಸೌಲಭ್ಯವನ್ನು ಶಂಕರ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಆರ್‌.ವಿ.ರಮಣಿ ಮತ್ತು ಮೈಕ್ರೋಸಾಫ್ಟ್‌ ಸಂಸ್ಥೆ ಭಾರತ ಶಾಖೆಯ ನಿರ್ದೇಶಕಿ ಚಿತ್ರಾ ಸೂದ್ ವೀಕ್ಷಿಸಿದರು- – ­ಪ್ರಜಾವಾಣಿ ಚಿತ್ರ   

ಬೆಂಗಳೂರು:  ದೇಶದ ಮೊದಲ ಮೈತ್ರಿ ದೃಷ್ಟಿ ಪುನರ್ವಸತಿ ಸಂಚಾರಿ ವಾಹನಕ್ಕೆ ನಗರದ ವರ್ತೂರು ಬಳಿಯ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು. ಮೈಕ್ರೋಸಾಫ್ಟ್ ಸಹಯೋಗದಲ್ಲಿ  ಶಂಕರ ಕಣ್ಣಿನ ಆಸ್ಪತ್ರೆ ಈ ವಾಹನವನ್ನು ಸಿದ್ಧಪಡಿಸಿದೆ. ಈ ವಾಹನಕ್ಕೆ ಸುಮಾರು ₹50 ಲಕ್ಷ ವೆಚ್ಚಮಾಡಲಾಗಿದೆ.

ಗ್ರಾಮಾಂತರ ಪ್ರದೇಶದಲ್ಲಿ ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅವರೂ ಇರುವ ಸ್ಥಳಕ್ಕೆ ತೆರಳಿ ಉಚಿತವಾಗಿ ಚಿಕಿತ್ಸೆ ನೀಡುವುದು ಸಂಸ್ಥೆಯ ಉದ್ದೇಶ.

‌ಮೈತ್ರಿ ಯೋಜನೆಯಡಿ ಪ್ರಾರಂಭಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ತೆರಳಿ ಅಲ್ಲಿನ ದೃಷ್ಟಿಹೀನ ಮಕ್ಕಳಿಗೆ ಚಿಕಿತ್ಸೆ ನೀಡುವುದು ಸಂಸ್ಥೆಯ ಉದ್ದೇಶ. ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಗೂ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

‘ನನ್ನ ಮಗನಿಗೆ ದೃಷ್ಟಿ ಸಮಸ್ಯೆಯಿದೆ. ಎಸ್‌ಎಸ್‌ಎಲ್‌ಸಿವರೆಗೂ ಓದಿಸಿದ್ದೇವೆ. ಕಂಪ್ಯೂಟರ್‌ನಲ್ಲಿ ಅವನಿಗೆ ಹೆಚ್ಚಿನ ಆಸಕ್ತಿ ಇದ್ದರೂ ಕಲಿಕೆ  ಸಾಧ್ಯವಾಗಿರಲಿಲ್ಲ. ಆದರೆ ಮೈತ್ರಿ ದೃಷ್ಟಿ ಪುನರ್ವಸತಿ ಸಂಚಾರಿ ವಾಹನದ ಸೇವೆಯಿಂದ ಸದ್ಯ ನನ್ನ ಮಗ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಾನೆ’ ಎಂದು ಪದ್ಮಾ ಎಂಬುವವರು ಪ್ರಜಾವಾಣಿ ತಿಳಿಸಿದರು.

ವಾಹನದ ವಿಶೇಷತೆ: ಶಂಕರ ಕಣ್ಣಿನ ಆಸ್ಪತ್ರೆಯಲ್ಲಿರುವಂತೆ ಮೈತ್ರಿ ವಾಹನದಲ್ಲೂ  ಸಮಾಲೋಚನೆ, ಆರಂಭಿಕ ಚಿಕಿತ್ಸಾಲಯ, ಗಣಕಯಂತ್ರ ತರಬೇತಿ, ವಿಶೇಷ ಕೌಶಲ್ಯಗಳ ತರಬೇತಿ, ಮನೆ ನಿರ್ವಹಣೆ ಎಂಬ ಐದು ಪ್ರತ್ಯೇಕ ಕೊಠಡಿಗಳಿವೆ.

ಇಲ್ಲಿ ಹಂತಹಂತವಾಗಿ ರೋಗಿಗಳ ಸಮಸ್ಯೆಯನ್ನು ಅರಿತು ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಇತರರಂತೆ ನಾವು ಜೀವಿಸಬಹುದೆಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ತುಂಬಲು ಅಗತ್ಯವಾದ ತರಬೇತಿ ನೀಡುತ್ತೇವೆ ಎಂದು ಚಿಕಿತ್ಸಾ ಸಹಾಯಕ ಧನಂಜಯ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.