ADVERTISEMENT

ರೂಪದರ್ಶಿಯ ವಿಡಿಯೊ ತೆಗೆದ ಆರೋಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:34 IST
Last Updated 28 ಜುಲೈ 2016, 19:34 IST

ಬೆಂಗಳೂರು: ಮೊಬೈಲ್‌ನಲ್ಲಿ ರಹಸ್ಯವಾಗಿ ರೂಪದರ್ಶಿಯೊಬ್ಬರ ರೂಪವನ್ನು ಚಿತ್ರೀಕರಿಸಲು ಯತ್ನಿಸಿದ ಆರೋಪದ ಮೇಲೆ ಕಬ್ಬನ್‌ಪಾರ್ಕ್‌ ಪೊಲೀಸರು ಆಟೊ ಚಾಲಕನೊಬ್ಬನನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದ 28 ವರ್ಷದ ರೂಪದರ್ಶಿ, ಆಟೊದ ನೋಂದಣಿ ಸಂಖ್ಯೆಪ್ರಕಟಿಸಿದ್ದರು. ಅದನ್ನು ಆಧರಿಸಿ ಚಾಲಕನನ್ನು ಪತ್ತೆ ಮಾಡಿದ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

‘ಜುಲೈ 24ರ ರಾತ್ರಿ ರಿಚ್ಮಂಡ್ ಟೌನ್‌ನಿಂದ ಆಟೊದಲ್ಲಿ ಮನೆಗೆ ಹೊರಟಿದ್ದೆ. ಸ್ವಲ್ಪ ದೂರ ಸಾಗಿದ ಬಳಿಕ ಮೊಬೈಲ್‌ ಕಂಪಿಸಿದಂತೆ ಶಬ್ದವಾಯಿತು. ಎಲ್ಲಿಂದ ಸದ್ದು ಬರುತ್ತಿದೆ ಎಂದು ಮೇಲೆ ನೋಡಿದಾಗ ಕಂಬಿಗೆ ಮೊಬೈಲ್ ಸಿಕ್ಕಿಸಿಡಲಾಗಿತ್ತು. ಅದನ್ನು ಪರಿಶೀಲಿಸಿದಾಗ ಮೊಬೈಲ್ ವಿಡಿಯೊ ಮೋಡ್‌ನಲ್ಲಿತ್ತು. ಬಳಿಕ  ಅದರಲ್ಲಿದ್ದ ಎಲ್ಲ ವಿಡಿಯೊಗಳನ್ನು ಅಳಿಸಿ ಬೇರೆ ಆಟೊದಲ್ಲಿ ತೆರಳಿದೆ’ ಎಂದು ಆ ಮಹಿಳೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.