ADVERTISEMENT

ಸುಧಾ ಕರಂಗಟೆ, ಮೆಲ್ವಿನ್‌ಗೆ ವಿಶ್ವ ಕೊಂಕಣಿ ಪುಸ್ತಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2016, 19:52 IST
Last Updated 23 ಸೆಪ್ಟೆಂಬರ್ 2016, 19:52 IST

ಮಂಗಳೂರು: ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2016ಕ್ಕಾಗಿ ಗೋವಾದ ಖ್ಯಾತ ಲೇಖಕಿ  ಸುಧಾ ಕರಂಗಟೆ ಬರೆದಿರುವ ‘ಕಪಯಾಳೆಂ’ ಕಾದಂಬರಿ ಆಯ್ಕೆಯಾಗಿದೆ.

ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರಕ್ಕಾಗಿ ಮಂಗಳೂರಿನ ಖ್ಯಾತ ಕವಿ, ಲೇಖಕ ಮೆಲ್ವಿನ್ ರಾಡ್ರಿಗಸ್‌ ಅವರ ‘ದೇವಿ ನಿನ್ಕಾಸಿ’ ಕವನ ಸಂಕಲನ ಆಯ್ಕೆಗೊಂಡಿದೆ.

ಹಿರಿಯ ಕೊಂಕಣಿ ಸಂಶೋಧಕ, ಅನುವಾದಕ ಗೋವಾದ ಅರವಿಂದ ಭಾಟೀಕರ ಅವರು ‘ವಿಶ್ವ ಕೊಂಕಣಿ ಜೀವನ ಸಿದ್ಧಿ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.  

ಈ ಮೂರೂ ಪ್ರಶಸ್ತಿಗಳು ತಲಾ ₹ 1 ಲಕ್ಷ ನಗದು ಒಳಗೊಂಡಿವೆ, ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.