ADVERTISEMENT

ಹೊಟ್ಟೆಯೊಳಗೆ ಒಂದು ಕೆ.ಜಿ ಕೊಕೇನ್ ಸಾಗಣೆ ಯತ್ನ: ನೈಜೀರಿಯಾ ಪ್ರಜೆ ಬಂಧನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 20:03 IST
Last Updated 9 ಫೆಬ್ರುವರಿ 2016, 20:03 IST

ಬೆಂಗಳೂರು: ಹೊಟ್ಟೆಯಲ್ಲಿ ₹ 5 ಕೋಟಿ ಮೌಲ್ಯದ ಸುಮಾರು 1 ಕೆ.ಜಿ.ಯಷ್ಟು ಕೊಕೇನ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನೈಜೀರಿ ಯಾದ ಪ್ರಜೆಯೊಬ್ಬನನ್ನು ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್‌) ಬಂಧಿಸಿದ್ದಾರೆ.

ಇಮ್ಯಾನ್ಯುಯಲ್‌ (28) ಬಂಧಿತ. ಕೊಕೇನ್ ಗುಳಿಗೆಗಳು ತುಂಬಿದ್ದ 70 ನಿರೋಧ್‌ಗಳನ್ನು ನುಂಗಿದ್ದ ಈತ, ಫೆ. 8ರಂದು ಅಬುದಾಬಿಯಿಂದ ಕೆಐಎಎಲ್‌ಗೆ ಬೆಳಿಗ್ಗೆ 7.30ರ ಸುಮಾರಿಗೆ ಬಂದಿಳಿದ. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿ ದಾಗ,  ಹೊಟ್ಟೆಯೊಳಗೆ ಕೊಕೇನ್ ಗುಳಿಗೆಗಳು ಇರುವುದು ಗೊತ್ತಾಯಿತು. ಕೂಡಲೇ ಆತನನ್ನು ಬಂಧಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತರಲಾಯಿತು ಎಂದು ಅಧಿಕಾರಿಗಳು ಹೇಳಿದರು.

ಮಲ ವಿಸರ್ಜನೆಯ ಮೂಲಕವೇ ಆತನ ಹೊಟ್ಟೆಯಲ್ಲಿದ್ದ ಕೊಕೇನ್ ತುಂಬಿದ್ದ ನಿರೋಧ್ ಪಾಕೆಟ್‌ಗಳನ್ನು ಹೊರತೆಗೆ ಯಲಾಗಿದೆ. ಆತನ ಆರೋಗ್ಯ ಸದ್ಯ ಸುಧಾರಿಸಿದ್ದು, ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.