ADVERTISEMENT

‘ದಂಧೆ ಮಾಡುತ್ತಿಲ್ಲ, ನಾವು ಕಾರ್ಮಿಕರು’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST
‘ನ್ಯಾಯಕ್ಕಾಗಿ ನಾವು’ ಸಂಘಟನೆಯ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಲೈಂಗಿಕ ವೃತ್ತಿ– ಒಂದು ಸಂವಾದ’ದಲ್ಲಿ ಚಿಂತಕ ಡಾ.ಕೆ.ಮರುಳಸಿದ್ದಪ್ಪ, ‘ನ್ಯಾಯಕ್ಕಾಗಿ ನಾವು’ ಸಂಘಟನೆಯ ರಾಜ್ಯ ಘಟಕ ಅಧ್ಯಕ್ಷ ಇಂದೂಧರ ಹೊನ್ನಾಪುರ ಹಾಗೂ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ಚರ್ಚಿಸಿದರು                 –ಪ್ರಜಾವಾಣಿ ಚಿತ್ರ
‘ನ್ಯಾಯಕ್ಕಾಗಿ ನಾವು’ ಸಂಘಟನೆಯ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಲೈಂಗಿಕ ವೃತ್ತಿ– ಒಂದು ಸಂವಾದ’ದಲ್ಲಿ ಚಿಂತಕ ಡಾ.ಕೆ.ಮರುಳಸಿದ್ದಪ್ಪ, ‘ನ್ಯಾಯಕ್ಕಾಗಿ ನಾವು’ ಸಂಘಟನೆಯ ರಾಜ್ಯ ಘಟಕ ಅಧ್ಯಕ್ಷ ಇಂದೂಧರ ಹೊನ್ನಾಪುರ ಹಾಗೂ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ಚರ್ಚಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ಸಮಾಜದಲ್ಲಿ ನಮ್ಮನ್ನು ಹೀನಾಯವಾಗಿ ಕಾಣಲಾಗುತ್ತಿದೆ. ಮಾಂಸ ದಂಧೆ ಮಾಡುತ್ತಿದ್ದೇವೆ ಎಂದು ಅವಹೇಳನ ಮಾಡಲಾಗುತ್ತಿದೆ. ನಾವು ಯಾವುದೇ ದಂಧೆ ಮಾಡುತ್ತಿಲ್ಲ, ನಾವು ಕಾರ್ಮಿಕರು’ ಎಂದು ‘ಕರ್ನಾ ಟಕ ಲೈಂಗಿಕ ಕಾರ್ಯಕರ್ತರ ಸಂಘ ಟನೆ’ಯ ಪ್ರಧಾನ ಕಾರ್ಯದರ್ಶಿ ಭಾರತಿ ಅಳಲು ತೋಡಿಕೊಂಡರು.

‘ನ್ಯಾಯಕ್ಕಾಗಿ ನಾವು’ ಸಂಘಟನೆಯ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಲೈಂಗಿಕ ವೃತ್ತಿ– ಒಂದು ಸಂವಾದ’ದಲ್ಲಿ ಅವರು ಲೈಂಗಿಕ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಟಿಟ್ಟರು.

‘ನಾನು ಆರಂಭದಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೆ. ದಿನಕ್ಕೆ ₨100 ಕೂಲಿ ಸಿಗುತ್ತಿತ್ತು. ಈ ನಡುವೆ ಪತಿ ತೀರಿಕೊಂಡರು. ಜೀವನ ನಿರ್ವಹಣೆ ಕಷ್ಟವಾಯಿತು. ಮನೆ ಮಾಲೀಕರು ಬಾಡಿಗೆಯನ್ನೂ ಜಾಸ್ತಿ ಮಾಡಿದರು. ಹೀಗಾಗಿ ಅನಿವಾರ್ಯವಾಗಿ ಈ ವೃತ್ತಿಗೆ ಇಳಿದೆ’ ಎಂದರು.

‘ಲೈಂಗಿಕ ಕಾರ್ಯಕರ್ತರ ಸಂಘ ಟನೆ’ಯ ಉಪಾಧ್ಯಕ್ಷ ಮನೋಹರ ಯಲವರ್ತಿ ಮಾತನಾಡಿ, ‘ಸಮಾಜ ದಲ್ಲಿ ಲೈಂಗಿಕ ಕಾರ್ಯಕರ್ತರ ಬಗ್ಗೆ ತಪ್ಪು ಕಲ್ಪನೆ ಇದೆ’ ಎಂದರು.

‘ನ್ಯಾಯಕ್ಕಾಗಿ ನಾವು’ ಸಂಘಟನೆಯ ರಾಜ್ಯ ಘಟಕ ಅಧ್ಯಕ್ಷ ಇಂದೂಧರ ಹೊನ್ನಾಪುರ ಮಾತನಾಡಿ, ‘ಲೈಂಗಿಕ ವೃತ್ತಿ ಬಗ್ಗೆ ತಪ್ಪು ಕೆಲಸ ಎಂಬ ಭಾವನೆ ಇದೆ. ಹುಸಿ ಮೌಲ್ಯಗಳನ್ನು ಅವರ ಮೇಲೆ ಹೇರಲಾಗುತ್ತಿದೆ. ಕಾನೂನು ಪಾಲಕರು ಲೈಂಗಿಕ ಕಾರ್ಯಕರ್ತರ ನಿರಂತರ ಶೋಷಣೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ನ್ಯಾಯಕ್ಕಾಗಿ ನಾವು’ ಸಂಘದ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್‌, ವಿಮೋಚನಾ ಬೆಂಗಳೂರು ಸಂಘಟ ನೆಯ ಶಕುನ್‌ ಬೆಂಗಳೂರು, ಪ್ರೊ. ಎನ್‌. ವಿ. ನರಸಿಂಹಯ್ಯ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.