ADVERTISEMENT

ನಾಟಕ ಅಕಾಡೆಮಿ ಕೈಪಿಡಿಗೆ ಮಾಹಿತಿ ಕೊಡಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 20:13 IST
Last Updated 22 ಜನವರಿ 2018, 20:13 IST

ಬೆಂಗಳೂರು: ರಂಗಶಾಲೆ ಹಾಗೂ ವಿವಿಧ ವಿಶ್ವವಿದ್ಯಾಲಯಗಳಲ್ಲಿ ರಂಗಭೂಮಿಯ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪದವಿ, ಪಿ.ಎಚ್‌.ಡಿ ಪಡೆದಿರುವವರ ಕುರಿತು ಕರ್ನಾಟಕ ನಾಟಕ ಅಕಾಡೆಮಿ ಕೈಪಿಡಿ ತರಲಿದೆ.

ಅಭ್ಯರ್ಥಿಗಳು ತಮ್ಮ ಬಗ್ಗೆ ವಿವರವಾದ ಮಾಹಿತಿಯನ್ನು ಫೆಬ್ರುವರಿ 15ರ ಒಳಗೆ ಅಕಾಡೆಮಿಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಕರ್ನಾಟಕ ನಾಟಕ ಅಕಾಡೆಮಿ, ಜೆ.ಸಿ.ರಸ್ತೆ, ಕನ್ನಡ ಭವನ. ಬೆಂಗಳೂರು–560002. ದೂ. 080–22237484.

ADVERTISEMENT

ಬಿಜೆಪಿ ಶಾಸಕರ ಅನರ್ಹತೆಗೆ ಒತ್ತಾಯ

ರಾಯಪುರ (ಪಿಟಿಐ): ಲಾಭದಾಯಕ ಹುದ್ದೆ ಹೊಂದಿರುವ ಛತ್ತೀಸ್‌ಗಡದ ಆಡಳಿತಾರೂಢ ಬಿಜೆಪಿಯ 11 ಶಾಸಕರನ್ನು ಅನರ್ಹಗೊಳಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಸೋಮವಾರ ಒತ್ತಾಯಿಸಿದೆ.

‘ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಅಗತ್ಯ’

ನವದೆಹಲಿ: ಪ್ರಜಾಪ್ರಭುತ್ವದ ಉಳಿಯಬೇಕಾದರೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಅವರು ಮಾತನಾಡಿದರು.

ಪವನ್‌ ಕಲ್ಯಾಣ್ ಯಾತ್ರೆ ಆರಂಭ

ಕರೀಂನಗರ: ನಟ ಮತ್ತು ಜನಸೇನಾ ಪಕ್ಷದ ಸಂಸ್ಥಾಪಕ ಕೆ. ಪವನ್‌ ಕಲ್ಯಾಣ್‌ ಸೋಮವಾರ ತೆಲಂಗಾಣದಲ್ಲಿ ಮೊದಲ ರಾಜಕೀಯ ಯಾತ್ರೆಯನ್ನು ಆರಂಭಿಸಿದ್ದಾರೆ.

ರಾಜ್ಯದಾದ್ಯಂತ ಯಾತ್ರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.‘ಚಲೋ ರೆ ಚಲೋ’ ಹೆಸರಿನ ಮೂರು ದಿನಗಳ ಯಾತ್ರೆ ಕರೀಂನಗರ ಜಿಲ್ಲೆಯಲ್ಲಿ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.