ADVERTISEMENT

ಕಾಂಕ್ರಿಟ್‌ ರಸ್ತೆ ನಿರ್ಮಿಸಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 5:30 IST
Last Updated 21 ಸೆಪ್ಟೆಂಬರ್ 2017, 5:30 IST

ಬೀದರ್‌: ಶಹಾಗಂಜ್‌ನ ಲೇಬರ್‌ ಕಾಲೊನಿಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಈವರೆಗೂ ಡಾಂಬರೀಕರಣ ಮಾಡಿಲ್ಲ. ಸ್ಪಲ್ಪ ಮಳೆ ಸುರಿದರೂ ರಸ್ತೆ ತುಂಬ ಕೆಸರು ಆವರಿಸಿಕೊಳ್ಳುತ್ತದೆ. ವಾಹನಗಳು ಕೆಸರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ನಿತ್ಯ ಕೆಲಸ ಕಾರ್ಯಗಳಿಗೆ ಕಚೇರಿಗೆ ಹೋಗುವ ನೌಕರರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕೆಸರಲ್ಲೇ ಸಂಚರಿಸಬೇಕಾಗಿದೆ.

ಲೇಬರ್‌ ಕಾಲೊನಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಗಟಾರಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ನೀರು ಹರಿದು ಹೋಗುತ್ತಿಲ್ಲ. ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು.

ರಾತ್ರಿ ಬಸ್ ಓಡಿಸಿ
ಚಿಟಗುಪ್ಪ: ರಾತ್ರಿ 9 ಗಂಟೆಯ ನಂತರ ಹುಮನಾಬಾದ್‌ನಿಂದ ಚಿಟಗುಪ್ಪಗೆ ಬರಲು ಬಸ್‌ಗಳ ಸೌಲಭ್ಯ ಇಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ ಚಿಟಗುಪ್ಪ 12 ಕಿ.ಮೀ ಅಂತರದಲ್ಲಿದೆ. ರಾತ್ರಿ 10 ಗಂಟೆಗೆ ಹುಮನಾಬಾದ್‌ನಿಂದ ಚಿಟಗುಪ್ಪಗೆ ಬಸ್‌ ಸಂಚಾರ ಆರಂಭಿಸಿ ಪಟ್ಟಣದ ಜನರಿಗೆ ಅನುಕೂಲ ಮಾಡಿಕೊಡಬೇಕು.

ಕಸ ವಿಲೇವಾರಿ ಮಾಡಿ
ಹುಮನಾಬಾದ್: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಕಸ ಸಂಗ್ರಹವಾಗಿದೆ. ಗಾಳಿಗೆ ಪ್ಲಾಸ್ಟಿಕ್‌ ಹಾಳೆಗಳು ಅತ್ತಿತ್ತ ಹಾರಾಡಿ ಮತ್ತಷ್ಟು ಹೊಲಸು ಸೃಷ್ಟಿಯಾಗಿದ್ದು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ADVERTISEMENT

ನಿತ್ಯ ಘನತ್ಯಾಜ್ಯ ವಿಲೇವಾರಿ ಮಾಡುವಂತೆ ಪುರಸಭೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ತಕ್ಷಣ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.