ADVERTISEMENT

ಗುಣಮಟ್ಟದ ಶಿಕ್ಷಣ ನೀಡಿ: ಸಜ್ಜನ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:00 IST
Last Updated 24 ಮಾರ್ಚ್ 2017, 9:00 IST

ಭಾಲ್ಕಿ: ಶಾಲೆಯಲ್ಲಿ ದೊರೆಯುವ ಗುಣಾತ್ಮಕ ಶಿಕ್ಷಣದ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿನಾಥ ಸಜ್ಜನ್‌ ನುಡಿದರು.

ಪಟ್ಟಣದ ಸತ್ಯನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲೆಯ 54ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಬೇಕಾದರೆ ಶಿಕ್ಷಕರು ಪಠ್ಯದಲ್ಲಿರುವ ವಿಷಯದ ಜತೆಗೆ ಸಾಮಾನ್ಯ ಜ್ಞಾನದ ಮಾಹಿತಿ ನೀಡಬೇಕಾದದ್ದು ಅತಿ ಅವಶ್ಯ ಎಂದು ಹೇಳಿದರು.

ಸತ್ಯನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವೀಂದ್ರ ಸಿರ್ಸೆ, ನಿರ್ದೇಶಕ ಸುಧಾಕರ ಜಾಧವ, ಸುಭಾಷ ಶೆಡೋಳೆ, ಶರಣಯ್ಯಾ ಮಠಪತಿ ಮಾತನಾಡಿದರು.
ಪಾಲಕರ ಪ್ರತಿನಿಧಿ ಸೂರ್ಯಕಾಂತ ಅಹಮದಾಬಾದೆ, ತಾನಾಜಿರಾವ ಸೂರ್ಯವಂಶಿ, ಸಿಆರ್‌ಪಿ ಬಸವರಾಜ ಬಡದಾಳೆ, ಬಿಆರ್‌ಪಿ ದತ್ತು ಮುಧಾಳೆ, ವಸಂತಾ ಪಾಟೀಲ, ಉದಯಕುಮಾರ, ಮುಖ್ಯಶಿಕ್ಷಕ ಡಿ.ಡಿ.ಶಿಂಧೆ, ಎಂ.ಬಿ.ಕಲಶೆಟ್ಟೆ, ಎಸ್‌.ಆರ್‌.ಗಾದಗೆ ಇದ್ದರು. ಬಾಲಾಜೀರಾವ ಮೇತ್ರೆ ಪ್ರಾಸ್ತಾವಿಕ ಮಾತನಾಡಿದರು. ಆರ್‌.ಎಂ.ಸ್ವಾಮಿ ನಿರೂಪಿಸಿದರು. ಸುನಂದಾ ಜಾಧವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.