ADVERTISEMENT

ಪರವಾನಗಿ ಕಡ್ಡಾಯ: ಸಿದ್ದಲಿಂಗಯ್ಯ

ಹುಮನಾಬಾದ್‌: ಅಭ್ಯರ್ಥಿಗಳಿಗೆ ಚುನಾವಣಾ ನೀತಿ ಸಂಹಿತೆ ಮಾರ್ಗದರ್ಶಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:04 IST
Last Updated 13 ಫೆಬ್ರುವರಿ 2016, 7:04 IST

ಹುಮನಾಬಾದ್‌: ಜಿಲ್ಲಾ  ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಚುನಾವಣಾ ವೀಕ್ಷಕ ಮೇಜರ್‌ ಸಿದ್ದಲಿಂಗಯ್ಯ ಹೇಳಿದರು. ತಾ.ಪಂ ಹಾಗೂ ಜಿ.ಪಂ ಚುನಾವ ಣೆಗೆ  ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ನೀತಿ ಸಂಹಿತೆ ನೀಡುವ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಚುನಾವಣೆ ಪೂರ್ಣಗೊಳ್ಳುವವರೆಗೆ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ₹ 50ಸಾವಿರ, ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ₹1ಲಕ್ಷ ಮಾತ್ರ ಖರ್ಚು ಮಾಡಬೇಕು. ಕಾರು, ಬೈಕ್‌, ಪತ್ರಿಕಾ ಜಾಹೀರಾತು. ಕಟೌಟ್‌, ಬ್ಯಾನರ್‌, ಧ್ವಜ ಸೇರಿದಂತೆ ಚುನಾವಣೆ ಸಂಬಂಧಿತ ಪ್ರತಿಯೊಂದಕ್ಕೂ ಚುನಾವಣಾ ಆಯೋ ಗದಿಂದ ಪರವಾನಗಿ ಪಡೆಯಬೇಕು.

ವಿವಿಧ ಖರ್ಚು ವೆಚ್ಚ ಕುರಿತು ಪ್ರತಿದಿನ ಲೆಕ್ಕಪತ್ರ ಮಾಹಿತಿ ನೀಡಬೇಕು. ಚುನಾ ವಣೆ ಚಟುವಟಿಕೆಗೆ ಬಳಸುವ ಸ್ವಂತ ಅಥವಾ ಬಾಡಿಗೆ ಕಾರು ಮೊದಲಾದ ವಾಹನಗಳಲ್ಲಿ ನಿಯಮಾನುಸಾರ ಜನರು ಇರಬೇಕು. ನಿಯಮಬಾಹಿರವಾಗಿ  ಜನ ರನ್ನು ತುಂಬಿಕೊಂಡು ಹೋಗುವುದು ಕಾನೂನು ಪ್ರಕಾರ ಅಪರಾಧ ಎಂದು ಅವರು ಹೇಳಿದರು.

ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವುದು, ಎದುರಾಳಿ ಅಭ್ಯರ್ಥಿಗಳ ವ್ಯಕ್ತಿಯ ವೈಯಕ್ತಿಕ ವಿಷಯ ಆಧಾರವಾಗಿ ಇಟ್ಟುಕೊಂಡು ಟೀಕಿ ಮಾಡುವುದು ನಿಯಮ ಉಲ್ಲಂಘನೆ ಯಾಗುತ್ತದೆ. ನಿಯಮಾನು ಸಾರ ಬೆಳಿಗ್ಗೆ 7 ರಿಂದ ರಾತ್ರಿ 10ಗಂಟೆವರೆಗೆ ಫೆ.17ವರೆಗೆ ಪ್ರಚಾರ ಕಾರ್ಯವನ್ನು ಮುಗಸಬೇಕು.

ಚುನಾವಣೆಗೆ ಬೈಕ್‌ ಬಳಕೆ ಮಾಡುವವರ ಮೇಲೆ ಹದ್ದಿನ ಕಣ್ಣು  ಇಡಲಾಗುವುದು. ಪ್ರತಿ ಬೈಕ್‌ಗೆ ದಿನದ ಬಾಡಿಗೆ ₹300 ಹಾಗೂ ಚಾಲನೆ ಮಾಡುವ ವ್ಯಕ್ತಿಗೆ ₹100 ಭತ್ತ ಸೇರಿ ಪ್ರತೀ ಬೈಕ್‌ಗಾಗಿ ₹400ರಂತೆ ಲೆಕ್ಕ ನೀಡಬೇಕು. ಪಾದಯಾತ್ರೆ ಮೂಲಕ ಪ್ರಚಾರ ಕೈಗೊಳ್ಳುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ. ಒಟ್ಟಾರೆ ಚುನಾವಣೆ ವಿಷಯದಲ್ಲಿ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ನೀತಿ ಸಂಹಿತೆ ಪರಿಶೀಲನೆಗಾಗಿ  ಮೂರು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಅಪ್ಸರಮಿಯ್ಯ, ಬಬನರಾವ್‌ ಬಿರಾದಾರ, ಗಜೇಂದ್ರ ಕನಕಟಕರ್‌, ಅಂಕುಶ ಗೋಖಲೆ ಮೊದಲಾದವರು ನೀತಿ ಸಂಹಿತೆ ಕುರಿತು ಇರುವ ಗೊಂದಲ ನಿವಾರಿಸಿಕೊಂಡರು. ಚುನಾವಣಾ ಜಿಲ್ಲಾ ನೋಡಲ್‌ ಅಧಿಕಾರಿ ಕೆ.ಸಿ.ಸೂರ್ಯವಂಶಿ, ಜಿಲ್ಲಾ ಪಂಚಾಯಿತಿ ವಿಭಾಗ ಚುನಾವಣಾ ಅಧಿಕಾರಿ ಬರಗಿ ಮಠ್‌, ತಾಲ್ಲೂಕು ಪಂಚಾಯಿತಿ ಚುನಾವಣಾ ವಿಭಾಗ1ರ ಚುನಾವಣಾ ಅಧಿಕಾರಿ ತಹಶೀಲ್ದಾರ್‌ ಡಿ.ಎಂ.ಪಾಣಿ. ತಾ.ಪಂ ಚುನಾವಣಾ ವಿಭಾಗ 2ರ ಅಧಿಕಾರಿ ಡಾ.ಮಲ್ಲಿಕಾ ರ್ಜುನ, ಶಿವರಾಜ ಮದಕಟ್ಟಿ  ಮೊದಲಾದವರು ಕಾರ್ಯಾಗಾರದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.