ADVERTISEMENT

ಕಾಡುಪ್ರಾಣಿ ಹಾವಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 7:17 IST
Last Updated 18 ಡಿಸೆಂಬರ್ 2017, 7:17 IST

ಗುಂಡ್ಲುಪೇಟೆ: ಕಾಡುಪ್ರಾಣಿಗಳು ದಿನನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬೆಳೆ ಉಳಿಸಿಕೊಳ್ಳಲು ಹರಸಹಾಸ ಪಡುವಂತಾಗಿದೆ ಎಂದು ತಾಲ್ಲೂಕಿನ ಅಂಕಹಳ್ಳಿ ರೈತರು ದೂರಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕುಂದಕೆರೆ ವಲಯ ಸಮೀಪದ ಅಂಕಹಳ್ಳಿ ಗ್ರಾಮದ ಸುತ್ತಲಿನ ಪ್ರದೇಶದ ಜಮೀನುಗಳಲ್ಲಿ ಆನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ.

ರಾತ್ರಿ ವೇಳೆ ಗುಂಪುಗಟ್ಟಿ ಬರುವ ಪ್ರಾಣಿಗಳು ಫಸಲುಗಳನ್ನು ನಾಶ ಮಾಡುತ್ತಿವೆ. ಇತ್ತೀಚೆಗೆ ಗ್ರಾಮದ ಪುಟ್ಟಸಿದ್ದಯ್ಯ, ಸಿದ್ದಯ್ಯ, ಸೀನಯ್ಯ, ಸಿದ್ದಯ್ಯ, ಗೋಪಮ್ಮ, ಬಸವಯ್ಯ ಅವರ ಜಮೀನಿಗೆ ದಾಳಿ ಮಾಡಿ ಟೊಮೆಟೊ, ತೊಗರಿ, ಮೆಣಸಿ, ಹುರುಳಿ, ಉಚ್ಚೆಳ್ಳು ಮುಂತಾದ ಬೆಳೆಗಳನ್ನು ನಾಶಮಾಡಿವೆ ಎಂದು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.