ADVERTISEMENT

ಜನವರಿಗೆ ಸಮುದಾಯ ಭವನಗಳ ಉದ್ಘಾಟನೆ-ಸಂಸದ ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 8:12 IST
Last Updated 3 ಸೆಪ್ಟೆಂಬರ್ 2017, 8:12 IST

ಯಳಂದೂರು: ಪಟ್ಟಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವಾಲ್ಮೀಕಿ ಸಮುದಾಯ ಭವನಗಳನ್ನು ಜನವರಿ ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಸಮುದಾಯ ಭವನಗಳ ಕಾಮಗಾರಿಯನ್ನು ಅವರು ಶುಕ್ರವಾರ ಪರಿಶೀಲಿಸಿ, ಮಾತನಾಡಿದರು. ಎಸ್ಇಪಿ ಹಾಗೂ ಟಿಎಸ್ಪಿ ಯೋಜನೆಯಡಿ ತಾಲ್ಲೂಕು ಮಟ್ಟದ ಸಮುದಾಯ ಭವನಗಳಿಗೆ ತಲಾ ₹ 1.5 ಕೋಟಿ ವಿಶೇಷ ಅನುದಾನ ನೀಡಿದೆ.

ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ವಾಲ್ಮೀಕಿ ಸಮುದಾಯ ಭನವದ ಕಾಮಗಾರಿ ನಿಧಾನವಾಗಿದೆ. ಸಾಮೂಹಿಕ ಶೌಚಾಲಯ, ಅಡುಗೆ ಮನೆ ಹಾಗೂ ಕೊಠಡಿಗಳ ನಿರ್ಮಾಣ ಕ್ರಿಯಾಯೋಜನೆ ಸಿದ್ದಪಡಿಸಬೇಕು. ಅಂಬೇಡ್ಕರ್ ಸಮುದಾಯ ಭವನದಲ್ಲೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಬಾಗಿಲು, ಕಿಟಕಿಗಳ ಗಾಜುಗಳನ್ನು ದುರಸ್ತಿ ಪಡಿಸಬೇಕು.

ಸುಣ್ಣಬಣ್ಣ ಬಳಿದು ಉಳಿದಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಭೂ ಸೇನಾ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕ ಎಸ್. ಜಯಣ್ಣ, ತಾ.ಪಂ. ಅಧ್ಯಕ್ಷ ನಂಜುಂಡಯ್ಯ, ಸದಸ್ಯ ವೆಂಕಟೇಶ್, ಪ.ಪಂ. ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ, ಸದಸ್ಯರಾದ ವೈ.ವಿ. ಉಮಾಶಂಕರ್, ಜೆ. ಶ್ರೀನಿವಾಸ್, ವೈ.ಎನ್. ಮುರುಳೀಕೃಷ್ಣ, ಅಂಬಳೆ ಗ್ರಾ.ಪಂ. ಅಧ್ಯಕ್ಷ ಶಿವರಾಮು, ಮುಖಂಡರಾದ ವಡಗೆರೆದಾಸ್, ಮುಡಿಗುಂಡ ಶಾಂತರಾಜು, ಕಂದಹಳ್ಳಿ ಮಹೇಶ್, ಮಹೇಶ್, ವೈ.ಜಿ. ರಂಗನಾಥ, ಜೆಇ ನಂದೀಶ್, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಸುಂದರೇಶ್‌ ಮೂರ್ತಿ, ಎಇಇ ಮಹದೇವಪ್ರಸಾದ್ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.