ADVERTISEMENT

ಜಿ.ಪಂ ಅಧ್ಯಕ್ಷರಾಗಿ ಶಿವಮ್ಮ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 8:54 IST
Last Updated 13 ಏಪ್ರಿಲ್ 2018, 8:54 IST

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶುಕ್ರವಾರ ಶಿವಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಅಶ್ವಿನಿ ಮತ್ತು ಶಿವಮ್ಮ ಮಾತ್ರ ಅರ್ಹರಾಗಿದ್ದರು. ಇಬ್ಬರ ಮಧ್ಯೆ ಉಳಿದಿರುವ ಅವಧಿಯನ್ನು ಸಮಾನವಾಗಿ ಹಂಚಿಕೊಳ್ಳುವ ಕುರಿತು ಒಪ್ಪಂದವಾಗಿದೆ. ಹೀಗಾಗಿ ಶಿವಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದರು.

23 ಸದಸ್ಯರ ಪೈಕಿ ಕಾಂಗ್ರೆಸ್ ನ 13 ಮಂದಿ ಹಾಗೂ ಬಿಜೆಪಿಯ ಮೂವರು ಚುನಾವಣಾ  ಸಭೆಗೆ ಹಾಜರಾಗಿದ್ದರು.  ಬಿಜೆಪಿಯ 6 ಮಂದಿ  ಸದಸ್ಯರು ಸಭೆಗೆ ಗೈರಾಗಿದ್ದರು.

ADVERTISEMENT

ಅಧ್ಯಕ್ಷರಾಗಿದ್ದ ರಾಮಚಂದ್ರ ರಾಜೀನಾಮೆ‌ ಸಲ್ಲಿಸಿ ಬಿಜೆಪಿ ಸೇರಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.