ADVERTISEMENT

ಮಣ್ಣಿನ ಫಲವತ್ತತೆಯಿಂದ ಉತ್ತಮ ಬೆಳೆ

ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:29 IST
Last Updated 5 ಮೇ 2017, 8:29 IST

ಸಂತೇಮರಹಳ್ಳಿ: ಮಣ್ಣಿನ ಫಲವತ್ತತೆ ಕಾಪಾಡಿಕೊಂಡಾಗ ಮಾತ್ರ ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯ ಎಂದು ರಾಷ್ಟ್ರೀಯ ಕೃಷಿ ವಿಜ್ಞಾನಿ ಅರಸು ಮಲ್ಲಯ್ಯ ರೈತರಿಗೆ ಸಲಹೆ ನೀಡಿದರು.

ಇಲ್ಲಿನ ರೈತಸಂಪರ್ಕ ಕೇಂದ್ರದ ಮುಂಭಾಗ ಗುರುವಾರ ನಡೆದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಏಕಬೆಳೆ ಹಾಗೂ ರಸಾಯನಿಕ ಗೊಬ್ಬರ ಬಳಸಿ ಬೆಳೆ ತೆಗೆಯುವುದರಿಂದ ಭೂಮಿಯಲ್ಲಿ ಫಲವತ್ತತೆ ಹಾಳಾಗಿ ಉತ್ತಮ ಬೆಳೆ ತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ಬಹು ಬೆಳೆ ಬೆಳೆದು ಸಾವಯವ ಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದರು.

ಬೆಳೆದಿರುವ ಮಾಹಿತಿ ತಂತ್ರಜ್ಞಾನ ಗಳನ್ನು ಕೃಷಿಯ ಅಭಿವೃದ್ಧಿಗೆ ಬಳಸಿಕೊಳ್ಳ ಬೇಕು. ಇಂದಿನ ಆಧುನಿಕ ಯುಗದಲ್ಲಿ ಟಿವಿ, ಮೊಬೈಲ್ ಬಳಕೆಯಿಂದ ಮನುಷ್ಯ ರಲ್ಲಿ ಸೋಮಾರಿತನ ಹೆಚ್ಚಾಗಿದೆ. ಪ್ರಾಣಿ ಹಾಗೂ ಸಸ್ಯ ಸಂಪತ್ತನ್ನು ಉಳಿಸಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.

ಕೃಷಿ ವಿಷಯ ತಜ್ಞ ಯೋಗೀಶ್ ಮಾತನಾಡಿ, ಮಣ್ಣಿಗೆ ಸೂಕ್ತವಾದ ತಳಿ ಗಳನ್ನು ಬೆಳೆದಾಗ ಹೆಚ್ಚುವರಿ ಇಳುವರಿ ಪಡೆಯಲು ಸಾಧ್ಯ. ರೈತರು ವಿಜ್ಞಾನಿ ಗಳಿಂದ ಮಣ್ಣು ಪರೀಕ್ಷೆ ಮಾಡಿಸಬೇಕು. ಈ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಬೇಕು. ಹಸಿರೆಲೆ ಗೊಬ್ಬರ ವ್ಯವಸಾಯಕ್ಕೆ ಉತ್ತಮವಾವಾಗಿದೆ.

ಇದರಿಂದ ನೀರು ಬೇಗ ಹಿಂಗುವುದಿಲ್ಲ. ಜತೆಗೆ ಮಣ್ಣು ಸಡಿಲವಾಗುತ್ತದೆ. ಬಿತ್ತನೆ ಬೀಜ ಗಳನ್ನು ಬಿತ್ತುವ ಮೊದಲು 2 ವಾರಕ್ಕಿಂತ ಮುಂಚಿತವಾಗಿ ಗೊಬ್ಬರ ವನ್ನು ಭೂಮಿಗೆ ಹಾಕಬೇಕು. ಜತೆಗೆ ಬೀಜೋಪಚಾರ ಮಾಡಿ ಬಿತ್ತನೆ ನಡೆಸುವುದು ಸೂಕ್ತ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ರವೀಶ್ ಮಾತನಾಡಿ, ಕೃಷಿ ಇಲಾಖೆ ಯಿಂದ ಸಿಗುವ ಸವಲತ್ತುಗಳು ಹಾಗೂ ಮಾಹಿತಿಗಳು ರೈತರಿಗೆ ಸರಿಯಾದ ರೀತಿ ಯಲ್ಲಿ ಸಿಗುತ್ತಿಲ್ಲ. ಇಂತಹ ಕಾರ್ಯಕ್ರಮ ಗಳ ಮೂಲಕ ರೈತರಿಗೆ ಕೃಷಿ ಅಧಿಕಾರಿ ಗಳು ಅನುಕೂಲ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ಸುಧಾ, ಜಿ.ಸಿ. ಮಹದೇವಸ್ವಾಮಿ, ಬಾಗಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರಭಾಮಣಿ, ಎಪಿಎಂಸಿ ಉಪಾಧ್ಯಕ್ಷ ಮಹದೇವಸ್ವಾಮಿ, ನಿರ್ದೇಶಕ ಶಂಕರ ಮೂರ್ತಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಪಿ.ತಮ್ಮಣ್ಣ, ಕೃಷಿನಿರ್ದೇಶಕಿ ಸುಂದ್ರಮ್ಮ, ಕೃಷಿ ಅಧಿಕಾರಿ ಲೀಲಾವತಿ, ಎಚ್.ಸಿ. ಮಹೇಶ್‌ಕುಮಾರ್, ಅಶೋಕ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.