ADVERTISEMENT

ಸಂಭ್ರಮದ ಗಿರಿಜಾ ಕಲ್ಯಾಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:33 IST
Last Updated 31 ಜನವರಿ 2017, 7:33 IST
ಸಂಭ್ರಮದ ಗಿರಿಜಾ ಕಲ್ಯಾಣ ಮಹೋತ್ಸವ
ಸಂಭ್ರಮದ ಗಿರಿಜಾ ಕಲ್ಯಾಣ ಮಹೋತ್ಸವ   

ಕೊಳ್ಳೇಗಾಲ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ವಿಶಾಲಾಕ್ಷ್ಮಿ ಸಮೇತ ವಿಶ್ವನಾಥಸ್ವಾಮಿ ದೇವಾ ಲಯದ ಜೀರ್ಣೋದ್ಧಾರ, ಅಷ್ಟ ಬಂಧನ, ಕುಂಭಾಭಿಷೇಕ ಕಾರ್ಯಕ್ರಮ ಗಳು ಭಾನುವಾರ ನೆರವೇರಿತು.

ಸೋಮವಾರ ‘ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ’ ಅಷ್ಟಾವಧಾನ ಸೇವೆ ವಿಜೃಂಭಣೆಯಿಂದ ನಡೆಸಲಾಯಿತು. ಕುಂಭಾಭಿಷೇಕ ಮಹೋತ್ವದ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಹಾಗೂ ವರ್ಣಮಯ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು.

ಕೃಷ್ಣ ದೀಕ್ಷಿತರು, ಆನಂದ್‌ ದೀಕ್ಷಿತರು, ದರ್ಶನ್‌ಶರ್ಮ, ಶಂಕರ ನಾರಾಯಣ ಜೋಯಿಸರು, ಪ್ರಧಾನ ಅರ್ಚಕ ಕೃಷ್ಣಕುಮಾರಶರ್ಮ, ಎಚ್‌. ಎಸ್‌.ಪಶುಪತಿ ಶರ್ಮ, ನಟರಾಜಶರ್ಮ, ಎನ್‌.ಎಸ್‌. ಕುಮಾರಸ್ವಾಮಿ ಶರ್ಮ, ಕೆ. ಸೋಮಶೇಕರ ಶರ್ಮ ಅವರ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ದೇವಾಲಯ ಮ್ಯಾನೇಜಿಂಗ್‌ ಟ್ರಸ್ಟಿ ಎಸ್‌.ಪಿ.ಪಶುಪತಿ, ಪರಮೇಶ್ವರಯ್ಯ, ಟ್ರಸ್ಟಿಗಳಾದ ಎಸ್‌.ದೇವರಾಜು, ಡಾ.ಸಿ. ಪರಮೇಶ್ವರಯ್ಯ, ಡಾ.ಎಂ. ಆರ್‌.ವೀರ ಭದ್ರಶೆಟ್ಟಿ, ಕೆ.ವೇಣುಗೋಪಾಲ್‌, ಎ.ಕೆ.ವಿಶ್ವನಾಥ, ಎ.ವಿ.ಚಂದ್ರಶೇಖರ ಹಾಗೂ ವ್ಯವಸ್ಥಾಪಕ ಎ.ಪಿ.ಚೆನ್ನವೀರ ಶೆಟ್ಟಿ ಇತರರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.