ADVERTISEMENT

ಚಾಮರಾಜನಗರ: ಮತ ಸಂದೇಶದ ರೇಷ್ಮೆ ಸೀರೆಯಲ್ಲಿ ಮಿಂಚಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:25 IST
Last Updated 26 ಏಪ್ರಿಲ್ 2024, 15:25 IST
<div class="paragraphs"><p>ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌, ಸಹಾಯಕ ಚುನಾವಣಾಧಿಕಾರಿ ಸವಿತ, ಜಿಲ್ಲಾ ಸ್ವೀಪ್‌ ನೋಡೆಲ್‌ ಅಧಿಕಾರಿ ಲಕ್ಷ್ಮಿ ಅವರು ರೇಷ್ಮೆ ಸೀರೆಯಲ್ಲಿ ಮುದ್ರಿಸಿದ್ದ ಮತ ಜಾಗೃತಿ ಸಂದೇಶ ಪ್ರದರ್ಶಿಸಿದರು</p></div>

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌, ಸಹಾಯಕ ಚುನಾವಣಾಧಿಕಾರಿ ಸವಿತ, ಜಿಲ್ಲಾ ಸ್ವೀಪ್‌ ನೋಡೆಲ್‌ ಅಧಿಕಾರಿ ಲಕ್ಷ್ಮಿ ಅವರು ರೇಷ್ಮೆ ಸೀರೆಯಲ್ಲಿ ಮುದ್ರಿಸಿದ್ದ ಮತ ಜಾಗೃತಿ ಸಂದೇಶ ಪ್ರದರ್ಶಿಸಿದರು

   

ಚಾಮರಾಜನಗರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು ಶುಕ್ರವಾರ ಕೈಮಗ್ಗದ ರೇಷ್ಮೆ ಸೀರೆಗಳಲ್ಲೂ ಮತದಾನ ಜಾಗೃತಿ ಸಂದೇಶವನ್ನು ಮುದ್ರಿಸಿತ್ತು.

ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಲಕ್ಷ್ಮಿ ಹಾಗೂ ಚಾಮರಾಜನಗರ ಸಹಾಯಕ ಚುನಾವಣಾಧಿಕಾರಿ ಸವಿತಾ ಸೇರಿದಂತೆ ಉನ್ನತ ಅಧಿಕಾರಿಗಳು ಶುಕ್ರವಾರ ಈ ಸೀರೆಗಳನ್ನು ಧರಿಸಿ ಮಿಂಚಿದರು. ‘ಚುನಾವಣಾ ಪರ್ವ.. ದೇಶದ ಗರ್ವ’ ಎಂಬ ಸಂದೇಶವನ್ನು ಸೀರೆಗಳಲ್ಲಿ ಮುದ್ರಿಸಲಾಗಿದೆ.

ADVERTISEMENT

ಮತ ಜಾಗೃತಿ ಸಂದೇಶ ಬರೆದಿದ್ದ ರೇಷ್ಮೆ ಸೀರೆ ಧರಿಸಿ ಕರ್ತವ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು, ನಗರದ ಪಿಡಬ್ಲ್ಯುಡಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 80ರಲ್ಲಿ ಹಕ್ಕು ಚಲಾಯಿಸಿದರು. ಅವರಿಗೆ ಲಕ್ಷ್ಮಿ, ಸವಿತ ಸಾಥ್ ನೀಡಿದರು.

‘ಕೊಳ್ಳೇಗಾಲದ ನೇಕಾರ ಕೃಷ್ಣಮೂರ್ತಿ ಅವರಿಂದ 10 ಸೀರೆಗಳನ್ನು ಖರೀದಿಸಿದ್ದೇವೆ. ಮತದಾನದ ಅರಿವು ಮೂಡಿಸಲು ಸ್ವೀಪ್ ಸಮಿತಿ ಮಾಡಿರುವ ಪ್ರಯತ್ನ ಇದು’ ಎಂದು ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.