ADVERTISEMENT

ಮನುಕುಲದ ಉಳಿವಿಗಾಗಿ ಪರಿಸರ ರಕ್ಷಣೆ ಅತ್ಯಗತ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:51 IST
Last Updated 19 ಜುಲೈ 2017, 10:51 IST

ಚಿಂತಾಮಣಿ: ಮನಕುಲದ ಉಳಿವಿಗಾಗಿ ಗಿಡಮರಗಳನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದರು. ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ‘ಸಸ್ಯ ಸಂತೆ’ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರ ಪರಿಸರ ಸಂರಕ್ಷಣೆ ಯೋಜನೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ರೈತರಿಗೆ ಸಸಿಗಳನ್ನು ನೀಡುತ್ತಿದೆ. ರೈತರು ತಮ್ಮ ಜಮೀನುಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ಜನರಿಗೆ ಅಗತ್ಯವಾದ ಉತ್ತಮ ಗಾಳಿ ಹಾಗೂ ಮಳೆ ಬರುತ್ತದೆ ಎಂದು ತಿಳಿಸಿದರು.

ಸಂತೆಯಲ್ಲಿ ಸುಮಾರು 3500 ಗಿಡಗಳನ್ನು ಮಾರಾಟ ಮಾಡಲಾಗಿದೆ. ರೈತರು ವ್ಯವಸಾಯದಷ್ಟೇ ಪ್ರಾಶಸ್ತ್ಯವನ್ನು ಗಿಡಮರಗಳಿಗೂ ಕೊಡಬೇಕು. ಗಿಡಗಳ ನೆಡುವುದರಿಂದ ಪ್ರಯೋಜನವಿಲ್ಲ, ನೆಟ್ಟ ಗಿಡಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ADVERTISEMENT

ರೈತ ಕುರುಬೂರು ಗುರುದತ್‌ ಮಾತನಾಡಿ, ಪರಿಸರ ರಕ್ಷಣೆಯ ಉದ್ದೇಶದಿಂದ ಸರ್ಕಾರವು ಸಸಿಯೊಂದಕ್ಕೆ ₹ 1 ಮತ್ತು ₹ 3ಕ್ಕೆ ನೀಡುತ್ತಿದೆ. ಸಸಿ ತಯಾರಿಸುವ ಖರ್ಚು ಸಿಗುವುದಿಲ್ಲ. ರೈತರು ಯೋಜನೆಯನ್ನು ಸದುಪ ಯೋಗ ಪಡಿಸಿಕೊಂಡು ಹೆಚ್ಚಿನ ಗಿಡಮರಗಳನ್ನು ಬೆಳೆಸಿ, ಪೋಷಣೆ ಮಾಡಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಮುನಿರೆಡ್ಡಿ, ಖಾಸಿಂ, ಸೊಣ್ಣಪ್ಪರೆಡ್ಡಿ, ಆನಂದರೆಡ್ಡಿ, ಶ್ರೀರಾಮಪ್ಪ, ಗಂಗಿರೆಡ್ಡಿ, ಮಹೇಶ್‌, ಈರಪ್ಪ ಸಸ್ಯ ಸಂತೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.