ADVERTISEMENT

ಅಜ್ಜಂಪುರ: 27ರಿಂದ 12ನೇ ಅಖಿಲ ಭಾರತ ಯಕ್ಷಗಾನ–-ಬಯಲಾಟ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:18 IST
Last Updated 19 ಜನವರಿ 2017, 5:18 IST
ಅಜ್ಜಂಪುರ: 27ರಿಂದ 12ನೇ ಅಖಿಲ ಭಾರತ ಯಕ್ಷಗಾನ–-ಬಯಲಾಟ ಸಾಹಿತ್ಯ ಸಮ್ಮೇಳನ
ಅಜ್ಜಂಪುರ: 27ರಿಂದ 12ನೇ ಅಖಿಲ ಭಾರತ ಯಕ್ಷಗಾನ–-ಬಯಲಾಟ ಸಾಹಿತ್ಯ ಸಮ್ಮೇಳನ   

ಅಜ್ಜಂಪುರ: ಇದೇ 27, 28 ಮತ್ತು 29 ರಂದು ಪಟ್ಟಣ ಸಮೀಪದ ಸಾಣೇಹಳ್ಳಿ ಯಲ್ಲಿ 12ನೆಯ ಅಖಿಲ ಭಾರತ ಯಕ್ಷ ಗಾನ - ಬಯಲಾಟ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಬುಧವಾರ ಸಾಣೇಹಳ್ಳಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ಇದೇ 27ರ ಬೆಳಗ್ಗೆ 10ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವನ್ನು ಡಾ.ಶ್ರೀ ಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮಿ, ಅಧ್ಯಕ್ಷತೆಯನ್ನು ಯಕ್ಷ ಗಾನ ಬಯಲಾಟದ ವಿದ್ವಾಂಸರಾದ ಡಾ.ಕೆ.ಆರ್. ದುರ್ಗಾದಾಸ್ ವಹಿಸಲಿ ದ್ದಾರೆ.  ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಭಾಗವಹಿಸುವರು.  

29ರಂದು ನಡೆಯುವ ಸಮಾ ರೋಪ ಸಮಾರಂಭದ ಸಾನ್ನಿಧ್ಯವನ್ನು ಕಾಸರಗೋಡಿನ  ಎಡನೀರು ಮಹಾ ಸಂಸ್ಥಾನದ ಕೇಶವಾನಂದ ಭಾರತಿ ಮಹಾಸ್ವಾಮಿ, ಅಧ್ಯಕ್ಷತೆಯನ್ನು ಹೊಸ ದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ವಹಿಸುವರು.

ಇದೇ ಸಂದರ್ಭದಲ್ಲಿ ಯಕ್ಷಗಾನದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕಲಾವಿದರನ್ನು ಪ್ರಶಸ್ತಿ ಫಲಕಗಳೊಂದಿಗೆ ಗೌರವಿಸಲಾಗುವುದು. ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಶಿವಕುಮಾರ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾ ಶ್ರಯದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.

ಪೂರ್ವಸಿದ್ಧತಾ ಸಭೆಯಲ್ಲಿ ಆಲ ಘಟ್ಟದ ಪರಮೇಶ್ವರಪ್ಪ, ಹೊಸ ದುರ್ಗದ ಮಾಜಿ ಶಾಸಕರಾದ ಇಲ್ಕಲ್ ವಿಜಯಕುಮಾರ್, ಎಸ್ ಕೆ ಪರಮೇಶ್ವ ರಯ್ಯ, ಕೆ ಎಸ್ ನವೀನ್, ಎಸ್. ಲಿಂಗ ಮೂರ್ತಿ, ತಡಗ ರಾಜಣ್ಣ, ಢಣಾಯಕ ಪುರ ಗಂಗಾಧರಪ್ಪ, ಸಿ ಕೆ ಸ್ವಾಮಿ, ಕೆ ಸಿ ಶಿವಮೂರ್ತಿ ಇದ್ದರು.

ಸಮ್ಮೇಳನದ ಲಾಭ ಪಡೆದುಕೊಳ್ಳ ಬೇಕೆಂದು ಬಯಸುವ ಆಸಕ್ತರು ಜನವರಿ 26 ರೊಳಗೆ ಎಸ್ ಕೆ ಪರಮೇಶ್ವರಯ್ಯ, ಕಾರ್ಯದರ್ಶಿ, ಶ್ರೀ ಶಿವಕುಮಾರ ಕಲಾ ಸಂಘ ಮೊ: 9448442847 ಅಥವಾ ಮಧು, ಶಿಕ್ಷಕರು, ಶ್ರೀ ಶಿವಕುಮಾರ ರಂಗ ಪ್ರಯೋಗಶಾಲೆ ಮೊ: 94483 98144 - ಸಾಣೇಹಳ್ಳಿ ಈ ದೂರವಾಣಿಗ ಳಿಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾ ಯಿಸಿಕೊಳ್ಳಬೇಕೆಂದು ಕಲಾಸಂಘದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.