ADVERTISEMENT

ಆಸ್ಪತ್ರೆ ದಿನಗೂಲಿ ನೌಕರರ ನೇಮಕಾತಿಯಲ್ಲಿ ಅವ್ಯವಹಾರ

ಮೂಡಿಗೆರೆ: ತಾಲ್ಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:44 IST
Last Updated 25 ಮೇ 2017, 5:44 IST

ಮೂಡಿಗೆರೆ: ತಾಲ್ಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗೆ ದಿನಗೂಲಿ ನೌಕರರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ನೇಮಕಾತಿಯನ್ನು ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ.ಸಿ. ರತನ್‌ ತಾಲ್ಲೂಕು ವೈದ್ಯಾಧಿ ಕಾರಿ ಡಾ. ಸುಂದ್ರೇಶ್‌ ಅವರನ್ನು ನೇಮಕಾತಿ ವಿಚಾರವಾಗಿ ಪ್ರಶ್ನಿಸಿದರು.

ಡಾ. ಸುಂದ್ರೇಶ್‌ ಉತ್ತರಿಸಿ ತಾಲ್ಲೂಕಿನ ವಿವಿಧ ಆಸ್ಪತ್ರೆಗಳಿಗೆ 15 ನೌಕರರ ಅಗತ್ಯವಿದ್ದು, ಶಾಸಕ ಬಿ.ಬಿ. ನಿಂಗಯ್ಯ ಅವರು 5 ಅಭ್ಯರ್ಥಿಗಳನ್ನು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್‌. ಪ್ರಭಾಕರ್‌  ಹಾಗೂ ಅಮಿತಾಮುತ್ತಪ್ಪ ಅವರು ತಲಾ 2 ಅಭ್ಯರ್ಥಿಗಳನ್ನು ನೇಮಿ ಸುವಂತೆ ಸೂಚಿಸಿದ್ದು, ಅವರನ್ನು ನೇಮಕ ಮಾಡಲಾಗಿದೆ ಎಂದು ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ.ಸಿ. ರತನ್‌ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸ್ಥಳೀಯ ಅಭ್ಯರ್ಥಿಗಳಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಆದ್ಯತೆ ನೀಡಿ ನೇಮಕಾತಿ ಮಾಡಬೇಕು ಎಂದು ನೇಮಕಾತಿ ನಿಯಮದಲ್ಲಿದ್ದು, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾ ಬಿಟ್ಟಿ ನೇಮಕಾತಿ ಮಾಡಲಾಗಿದೆ.

ಕುಂದೂರು ಆಸ್ಪತ್ರೆಗೆ ಬಣಕಲ್‌ ಆಸ್ಪತ್ರೆ ಯ ಸಿಬ್ಬಂದಿಯೊಬ್ಬರ ಶಿಫಾರಸ್ಸಿನ ಮೇರೆಗೆ ಹಣ ಪಡೆದು ಬಣಕಲ್‌ ಅಭ್ಯರ್ಥಿಯೊಬ್ಬರನ್ನು ನೇಮಕಗೊಳಿಸ ಲಾಗಿದೆ. ಅಲ್ಲದೇ ರಾಜಕೀಯ ಶಿಫಾರಸ್ಸು ಮಾಡಿದವರಿಗೆ ಮಾತ್ರ ಕೆಲಸ ನೀಡುವು ದಾದರೆ ಪ್ರಾಮಾಣಿಕವಾಗಿ ಓದಿದ ಅಭ್ಯರ್ಥಿಗಳು ಇಲಾಖೆಗೆ ಸೇರುವುದಾ ದರೂ ಹೇಗೆ ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಗಳು ಸೂಚಿಸಿದ ಅಭ್ಯರ್ಥಿ ಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿ ಹುದ್ದೆ ನೀಡಲಾಗಿದೆ. ಆದ್ದರಿಂದ ಕೂಡಲೇ ನೇಮಕಾತಿಯನ್ನು ಸ್ಥಗಿತ ಗೊಳಿಸಿ ಹೊಸದಾಗಿ ಅರ್ಜಿ ಸ್ವೀಕರಿಸಿ ಅರ್ಹ ವ್ಯಕ್ತಿಗಳಿಗೆ ಹುದ್ದೆ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲ್ಲೂಕಿನ ಸಾಧನೆ ಅತ್ಯಂತ ಕಳಪೆಯಾ ಗಿದ್ದು, ಕಳಪೆಯಾಗಲು ಕಾರಣವನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕುಗ್ಗಲು ಕಾರಣಗಳೇನು ಎಂಬುದನ್ನು ಕೂಡಲೇ ಪರಿಶೀಲನೆ ನಡೆಸಬೇಕು.

ಸರ್ಕಾರಿ ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಸೀಟು ಲಭ್ಯವಾ ಗುವಂತೆ ಮಾಡಬೇಕು. ಇದಕ್ಕಾಗಿ ಪ್ರತಿ ಹಳ್ಳಿಗಳಿಗೂ ಧ್ವನಿವರ್ಧಕದ ಮೂಲಕ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

ತಾಲ್ಲೂಕಿನಲ್ಲಿ ಕೊಳವೆಬಾವಿ ನಿರ್ಮಾಣವು ದಂಧೆಯಾಗಿ ಪರಿಣಮಿ ಸಿದೆ. ರಾಜಕೀಯ ವ್ಯಕ್ತಿಗಳು ಸೂಚಿಸಿ ಕಡೆಯೆಲ್ಲಾ ಅಧಿಕಾರಿಗಳು ಕಮೀಷನ್‌ ಆಸೆಗಾಗಿ ಕೊಳವೆ ಬಾವಿ ನಿರ್ಮಿಸಿ ಬಿಲ್‌ ಮಾಡಲಾಗಿದೆ. ತಾಲ್ಲೂಕಿನಲ್ಲಿ ಕೊಳವೆ ಬಾವಿ ನಿರ್ಮಿಸಿರುವುದರ ಬಗ್ಗೆ ತನಿಖೆ ನಡೆಯಬೇಕು ಎಂದರು.

ಮೆಸ್ಕಾಂ ಇಲಾಖೆಯು ಮಳೆಗಾಲ ಪ್ರಾರಂಭವಾ ಗುವುದರೊಳಗೆ ಜಂಗಲ್‌ ತೆರವುಗೊ ಳಿಸಿ ಮಳೆಗಾಲದಲ್ಲಿ ವಿದ್ಯುತ್ ವ್ಯತಯ ವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಕಾರ್ಯನಿರ್ವ ಹಣಾಧಿಕಾರಿ ಗುರುದತ್‌ ಇದ್ದರು.

*
ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ  ಫಲಿತಾಂಶ ಕುಸಿದಿರುವುದಕ್ಕೆ ಸೂಕ್ತ ಕ್ರಮವಾಗಬೇಕು’
-ಕೆ.ಸಿ. ರತನ್‌,
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.