ADVERTISEMENT

‘ಈಡೇರದ ಸಂವಿಧಾನದ ಆಶಯ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:29 IST
Last Updated 6 ಫೆಬ್ರುವರಿ 2017, 5:29 IST

ಚಿಕ್ಕಮಗಳೂರು: ‘ದೇಶದಲ್ಲಿ ಜಾತೀ ಯತೆ ಹೆಮ್ಮರವಾಗಿ ಬೇರೂರಿದ್ದು, ಅಂಬೇಡ್ಕರ್‌ ಅವರ ಸಂವಿಧಾನದ ಆಶಯಗಳು ಇನ್ನೂ ಈಡೇರಿಲ್ಲ’ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪಳ್ಳಿ ಅಭಿಪ್ರಾಯಪಟ್ಟರು.

ನಗರ ಅಂಬೇಡ್ಕರ್‌ ಭವನದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಮತ್ತು ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.

ಜಾತೀಯತೆ ಮನಸ್ಸುಗಳನ್ನು ತೊಲಗಿಸಬೇಕು. ದೇಶದಲ್ಲಿ ಬೇರೂ ರಿರುವ ಜಾತೀಯತೆ ಕಿತ್ತೊಗೆಯಲು ಕಾನೂನು ಬದ್ಧ ಮುಂದಡಿ ಇಟ್ಟ ಅಂಬೇಡ್ಕರ್‌  ಆಶಯಗಳು ಇದು ವರೆಗೂ ಈಡೇರಿಲ್ಲ. ಜಾತಿಯ ನಿರ್ಮೂ ಲನೆಗೆ ಸಂಸತ್ತಿಗೆ ಆಯ್ಕೆಯಾದ ಯಾವೊಬ್ಬ ಜನಪ್ರತಿನಿಧಿ ಒಕ್ಕೂರಲ ಧ್ವನಿ ಎತ್ತುವಲ್ಲಿ ವಿಫಲರಾ ಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಜಾತೀವಾದಿ ಸಂಘ ಟನೆಗಳು ಹೆಚ್ಚುತ್ತಿದ್ದು, ದತ್ತಪೀಠದ ಹೆಸರಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳುವ ಕೀಳು ಮಟ್ಟದ ರಾಜಕಾರಣ ನಡೆಸು ತ್ತಿದ್ದಾರೆ. ವಿವಿಧ ಕೋಮುಗಳ ನಡುವೆ ಉಳಿ ಹಿಂಡುತ್ತಿದ್ದಾರೆ. ಇಂತಹ ರಾಜಕೀಯ ಮಾತುಗಳಿಗೆ ಬಲಿಯಾಗ ಬಾರದು. ಸಂವಿಧಾನ ಹಕ್ಕುಗಳಿಗೆ ಸಂಘಟಿತ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಸಮಿತಿಯ ರಾಜ್ಯ ಸಮಿತಿ ಸದಸ್ಯ ಹೆಬ್ಬಾಲೆ ಲಿಂಗರಾಜು ಮಾತನಾಡಿ, ಸಂಘಟಿತ ಹೋರಾಟ ನಡೆಸುವ ಮೂಲಕ ಅಂಬೇಡ್ಕರ್‌ ಆಶಯಗಳನ್ನು ಈಡೇರಿಸಬೇಕು. ಜಾತಿ ಕೂಪದ ಅನುಭವಗಳು ಅವರನ್ನು ಜಾತೀಯತೆ ವಿರುದ್ಧ ಹೋರಾಡಲು ಅಂಬೇಡ್ಕರ್‌ಗೆ ಪ್ರೇರಣೆ ನೀಡಿದವು. ಪ್ರಾಣಿಗಳಿಗೆ ಸಿಗುತ್ತಿದ್ದ ಬೆಲೆ ಮನುಷ್ಯರಿಗೆ ಇರಲಿಲ್ಲ. ಇವೆಲ್ಲವನ್ನು ಮನಗಂಡು ದಲಿತರು, ಶೋಷಿತರು, ನಿರ್ಗತಿಕರ ನೆಮ್ಮದಿ ಜೀವನ ನಡೆಸಲು ತನ್ನ ಜೀನವನ ಮುಡಿಪಿಟ್ಟ ಮಹಾನ್‌ ತ್ಯಾಗಿ ಅವರು ಎಂದು ಸ್ಮರಿಸಿದರು.

ವಂಶಪರಂಪರೆ ಜೀತ ಪದ್ಧತಿಗೆ ಶಾಶ್ವತ ನಿರ್ಮೂಲನೆಯಾಗಬೇಕು. ಮನುಷ್ಯತ್ವದ ಮಾನವೀಯ ಗಣ ಅಳ ವಡಿಸಿಕೊಳ್ಳಬೇಕು. ಮಾನವ ಹಕ್ಕುಗಳು, ಭ್ರಷ್ಟಾಚಾರದ ವಿರುದ್ಧ ಹೋರಾ ಡಬೇಕು. ಸಮಿತಿಯ ಪದಾಧಿಕಾರಿಗಳು ಕಾರ್ಯಕರ್ತರಿಗೆ ಸಂಘಟನೆ ಬಗ್ಗೆ ಅರಿವು  ಮೂಡಿಸಬೇಕು ಎಂದರು.

ರಾಜ್ಯ ಸಂಘಟನಾ ಸಂಚಾಲಕರಾದ ಡಿ.ಎ.ಶ್ರೀನಿವಾಸ್‌, ಗುರು ಪ್ರಸಾದ್‌, ಜಿಲ್ಲಾ ಸಂಘಟನಾ ಸಂಚಾಲಕ ಯಲ ಗುಂಡಿಗೆ ಹೊನ್ನಪ್ಪ, ಮಹೇಶ್‌, ಪುಟ್ಟಸ್ವಾಮಿ, ಎಂ.ರಮೇಶ್‌, ಎ.ಎಸ್‌. ಮೋಹನ್‌ ಕುಮಾರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.