ADVERTISEMENT

ಕಷ್ಟ ಎದುರಿಸುವ ಶಕ್ತಿ ಹಾಸ್ಯಕ್ಕೆ ಇದೆ

ಸೇವಾದೀಕ್ಷೆ ಸ್ವೀಕಾರ, ತಿಂಗಳ ಅತಿಥಿ ಕಾರ್ಯಕ್ರಮ: ದುಂಡಿರಾಜ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 7:11 IST
Last Updated 23 ಜುಲೈ 2016, 7:11 IST

ಕಡೂರು: ಹಾಸ್ಯ ಮನೋಭಾವನೆ ಇದ್ದರೆ ಎಂಥ ಸಂಧರ್ಭದಲ್ಲಿಯೂ ಯಾವುದೇ ಕಷ್ಟವನ್ನಾದರೂ ಸಮರ್ಥ ವಾಗಿ ಎದುರಿಸಬಹುದು. ಹಾಸ್ಯಕ್ಕೆ ಅಂಥ ಶಕ್ತಿಯಿದೆ ಎಂದು ಖ್ಯಾತ ಚುಟುಕು ಕವಿ ಎಚ್.ದುಂಡಿರಾಜ್ ತಿಳಿಸಿದರು.

ಗುರುವಾರ ಕಡೂರಿನ ಪಾಂಡು ರಂಗ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಏರ್ಪಡಿಸಿದ್ದ ಹೋಬಳಿ ಘಟಕಗಳ ಸೇವಾದೀಕ್ಷೆ ಸ್ವೀಕಾರ, ತಿಂಗಳ ಅತಿಥಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಭವಿಷ್ಯದಲ್ಲಿ ಉನ್ನತ ಉದ್ಯೋಗ ಸಿಗುವುದಿಲ್ಲವೆಂಬ ಭಾವನೆಯಿಂದ ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ. ಆ ಭಾವನೆ ತಪ್ಪೆನ್ನಲಾಗದು. ಏಕೆಂದರೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಭದ್ರತೆಯ ಭಾವನೆಯನ್ನು ಸರ್ಕಾರ ನೀಡಿಲ್ಲ. ಹಾಗಾಗಿ ಪೋಷಕರು ಮನೆಯಲ್ಲಾದರೂ ಮಕ್ಕಳಿಗೆ ಕನ್ನಡ ಸಂಸ್ಕೃತಿ ಕಲಿಸುವ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿಯೇ ಮುಂದುವರೆಯಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಕನ್ನಡ ಮಾಧ್ಯಮದಲ್ಲಿ ಓದಿದವರೇ ಕನ್ನಡದ ಪ್ರಖ್ಯಾತ ಸಾಹಿತಿಗಳಾಗಿದ್ದಾರೆ. ಕನ್ನಡ ಭಾಷೆಯ ಅಳಿವು ಉಳಿವು ಕನ್ನಡಿಗರ ಮೇಲೆ ಅವಲಂಬಿಸಿದೆ. ಕನ್ನಡ ಭಾಷೆಯನ್ನುಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಇಂಥ ಕಾರ್ಯ ಕ್ರಮಗಳ ಮೂಲಕ ಕನ್ನಡಿಗರಲ್ಲಿ ಸಾಹಿ ತ್ಯಾಸಕ್ತಿ ಬೆಳೆಸುತ್ತಿರುವುದು ನೆಮ್ಮದಿ ತಂದಿದೆ. ಕಡೂರು ಘಟಕ ಮುಚ್ಚಿ ಹೋಗಿದ್ದ ಕನ್ನಡ ಶಾಲೆಯನ್ನು ಪುನರಾರಂಭಗೊಳಿಸುವಲ್ಲಿ ಮುಂದಾಗಿ ರುವುದು ಮಾದರಿ ಕಾರ್ಯಕ್ರಮ ಮತ್ತು ರಾಜ್ಯಕ್ಕೆ ಅನುಕರಣೀಯ ಎಂದರು.

ನಗುವಿದ್ದಲ್ಲಿ ಆರೋಗ್ಯವಿರುತ್ತದೆ. ಹಾಸ್ಯ ಮನೋಭಾವನೆಯಿದ್ದಲ್ಲಿ ಮನ ಸ್ತಾಪವಿರುವುದಿಲ್ಲ. ಜೀವನದ ಸವಾಲು ಗಳನ್ನು ನಗುನಗುತ್ತಲೇ ಎದುರಿಸಬೇಕು ಎಂದು ತಮ್ಮದೇ ಸ್ವರಚಿತ ಹನಿಗವ ನಗಳನ್ನು ಪ್ರೇಕ್ಷಕರನ್ನು ರಂಜಿಸಿದರು.

ಪ್ರಾಸ್ತಾವಿಕವಾಗಿ ಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು, ನುಡಿಯ ವಿಷಯದಲ್ಲಿ ಸದಾ ಕ್ರಿಯಾಶೀಲವಾಗಿ ರುತ್ತದೆ. ಕಡೂರಿನ ವಿಷಯದಲ್ಲಿ ಶಾಶ್ವತ ನೀರಾವರಿ ವಿಚಾರವಾಗಿ ಹೋರಾಟಕ್ಕೆ ಸದಾ ಮಂಚೂಣಿಯಲ್ಲಿರುತ್ತದೆ.

ತಾಲ್ಲೂ ಕಿನ ಬಾಣನಹಳ್ಳಿಯಲ್ಲಿ ಮುಚ್ಚಿಹೋಗಿದ್ದ ಪ್ರಾಥಮಿಕ ಶಾಲೆಯನ್ನು ಪುನರಾರಂಭಿ ಸಿದ್ದು, ತಾಲ್ಲೂಕಿನಾದ್ಯಂತ ಪರಿಷತ್ತಿನ ರಾಯಭಾರಿ ಹಿರೇಮಗಳೂರು ಕಣ್ಣನ್ ಅವರ ಸಾರಥ್ಯದಲ್ಲಿ ಪರಿಷತ್ತಿನ ನಡೆ-ಶಾಲೆಯ ಕಡೆಗೆ ಎಂಬ ಕಾರ್ಯ ಕ್ರಮವನ್ನು ರೂಪಿಸಲಾಗಿದೆ. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ  ವಾತಾವರಣ ನಿರ್ಮಾ ಣದಲ್ಲಿ ಸಾರ್ವಜನಿಕರಿಗೆ ಹೊರೆಯಾಗ ದಂತೆ ಕಸಾಪ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಾಜಿ ಸಾಸಕ ಡಾ.ವೈ.ಸಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.ಕಸಬಾ ಹೋಬಳಿ ಘಟಕದ ಅಧ್ಯಕ್ಷರಾಗಿ ಪ್ರಕಾಶ್, ನಗರ ಘಟಕದ ಅಧ್ಯಕ್ಷರಾಗಿ ಎ.ಮಣಿ ಸೇವಾ ದೀಕ್ಷೆ ಸ್ವೀಕರಿಸಿದರು. ಜಿಲ್ಲಾ ಕಸಾಪದ ಕೆ.ಜಿ.ಶ್ರೀನಿವಾಸ ಮೂರ್ತಿ ಪ್ರತಿಜ್ಞಾವಿಧಿ ಬೋಧಿಸಿದರು. ತಾಲ್ಲೂಕು ಕಸಾಪದ ಹಿರಿಯ ಉಪಾಧ್ಯಕ್ಷ ಬಿಳಿಗಿರಿ ವಿಜಯ್ ಕುಮಾರ್, ಸಾಂಸ್ಕೃತಿಕ ಕಾರ್ಯ ದರ್ಶಿ ಟಿ.ಎಸ್.ಪ್ರಶಾಂತ್, ಜಿ.ಬಿ.ಆನಂದ ಮೂರ್ತಿ, ವಿರೂಪಾಕ್ಷಪ್ಪ, ನಿಕಟಪೂರ್ವ ಅಧ್ಯಕ್ಷ ಎಂ.ಅರ್.ಪ್ರಕಾಶ್, ಕರವೇ ಅಧ್ಯಕ್ಷ ಸಿದ್ದಪ್ಪ, ರುದ್ರೇಗೌಡ, ಹಿರಿಯ ವಕೀಲ ಎ.ಆರ್.ಶ್ರೀನಿವಾಸಯ್ಯ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.