ADVERTISEMENT

‘ಪಕ್ಷದ ಸಿದ್ಧಾಂತ ಜನರಿಗೆ ತಲುಪಿಸಿ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 8:41 IST
Last Updated 12 ಜುಲೈ 2017, 8:41 IST

ಮೂಡಿಗೆರೆ: ಬಿಜೆಪಿ ಪಕ್ಷ ಸಿದ್ಧಾಂತವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿ ಸುವ ಕಾರ್ಯ ಆಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪಟ್ಟಣದ ರೈತಭವನದಲ್ಲಿ ಮಂಗಳ ವಾರ ದೀನ್‌ದಯಾಳ್‌ ಉಪಾಧ್ಯಾಯ ಅವರ ಜನ್ಮ ಶತಾಬ್ದಿ ಅಂಗವಾಗಿ ಬಿಜೆಪಿ ಕೈಗೊಂಡಿರುವ ವಿಸ್ತರಣಾ ಕಾರ್ಯಾ ಗಾರ ದಲ್ಲಿ ಅವರು ಮಾತನಾಡಿದರು.

‘ದೀನ್‌ದಯಾಳ್‌ ಉಪಾಧ್ಯಾಯರು ಪಕ್ಷಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರು ಸ್ಥಾಪಿಸಿದ ಪಕ್ಷದ ವಿಚಾರ ವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಪುಣ್ಯದ ಕೆಲಸ ಇದೀಗ ಪಕ್ಷದ ಕಾರ್ಯಕರ್ತರದು ಎಂದು ಅವರು ಹೇಳಿದರು.

ADVERTISEMENT

ಪಕ್ಷದ ತಾಲ್ಲೂಕು ಅಧ್ಯಕ್ಷ ದುಂಡುಗ ಪ್ರಮೋದ್‌ಕುಮಾರ್‌ ಮಾತನಾಡಿ, ‘ಬಿಜೆಪಿ ಕಾರ್ಯಕರ್ತರಿಗೆ ನಾಯಕತ್ವ ಗುಣವನ್ನು ಗಟ್ಟಿಗೊಳಿಸಿಕೊಳ್ಳಲು ವಿಸ್ತರಣಾ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದ್ದು, ತಮ್ಮನ್ನು ನಿಯೋಜಿಸಿರು ವೆಡೆಯಲ್ಲಿ ಉತ್ತಮ ನಾಯಕತ್ವ ಗುಣ ದಿಂದ ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆ ತರುವಮೂಲಕ ಪಕ್ಷವನ್ನು ವಿಸ್ತರಿಸ ಬೇಕು ಎಂದು ಅವರು ಹೇಳಿದರು.

ಇದುವರೆಗೂ ನಮ್ಮ ಕಾರ್ಯ ಕರ್ತರು ತಮ್ಮದೇ ಊರಿನಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಆದರೆ ಇದೀಗ ಬೇರೆ ಪ್ರದೇಶದಲ್ಲಿ ವಿಸ್ತರಕನಾಗಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್‌, ಉಪಾಧ್ಯಕ್ಷೆ ಸವಿತಾರಮೇಶ್‌, ಪಕ್ಷದ ಪದಾಧಿಕಾರಿಗಳಾದ ದೀಪಕ್‌ ದೊಡ್ಡಯ್ಯ, ದೇವರುಂದ ದಿನೇಶ್‌, ಶೇಷಗಿರಿ ಕಳಸ, ಕಣಚೂರು ವಿನೋದ್‌, ಗಜೇಂದ್ರ, ಕಲ್ಲುಹೊಲ ಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾ ಯಿತಿ ಹಾಗೂ ವಿವಿಧ ಗ್ರಾಮ ಪಂಚಾ ಯಿತಿಗಳ ಚುನಾಯಿತ ಪ್ರತಿನಿಧಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.