ADVERTISEMENT

ವಾರಕ್ಕೊಮ್ಮೆ ಟ್ಯಾಪಿಂಗ್ನಿಂದ ಅಧಿಕ ಇಳುವರಿ

​ಪ್ರಜಾವಾಣಿ ವಾರ್ತೆ
Published 18 ಮೇ 2017, 6:19 IST
Last Updated 18 ಮೇ 2017, 6:19 IST

ನರಸಿಂಹರಾಜಪುರ: ವಾರಕ್ಕೊಮ್ಮೆ ರಬ್ಬರ್ ಟ್ಯಾಪಿಂಗ್ ಮಾಡುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ರಬ್ಬರ್ ಮಂಡಳಿಯ ಸಹಾಯಕ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ತಿಳಿಸಿದರು.

ಇಲ್ಲಿ ರೋಟರಿ ಹಾಲ್ ನಲ್ಲಿ ಬುಧವಾರ ತಾಲ್ಲೂಕು ರಬ್ಬರ್ ಉತ್ಪಾದಕ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಉತ್ಕೃಷ್ಟತೆ ಯಲ್ಲಿ ಉತ್ಕೃಷ್ಟ ತೋಟ ಇಳುವರಿಯಲ್ಲಿ ಅತ್ಯುತ್ಪಾದನೆಯ ಗುರಿ ಅಭಿಯಾನ 2017’ ಎಂಬ ಮಾಹಿತಿ ಕಾರ್ಯಾಗಾರ ದಲ್ಲಿ ಮಾತನಾಡಿದರು.

ಕೂಲಿಕಾರ್ಮಿಕರ ಕೊರತೆಯಿರುವುದರಿಂದ  ವಾರಕ್ಕೊಮ್ಮೆ ಟ್ಯಾಪಿಂಗ್  ಮಾಡುವುದರಿಂದ  ಕೂಲಿಯ ಉಳಿತಾಯವಾಗಲಿದೆ ಎಂದರು.

ADVERTISEMENT

ಉತ್ತೇಜಕ ಔಷಧಿಯನ್ನು ಹಚ್ಚಿ ವಾರಕ್ಕೊಂದು ಟ್ಯಾಪಿಂಗನ್ನು ಮಾಡುವಾಗ. ದಿನ ಬಿಟ್ಟು ದಿನ ಟ್ಯಾಪಿಂಗ್ ಮಾಡುವ ಸಂದರ್ಭದಲ್ಲಿ ಲಭಿಸುವಷ್ಟು ಅಥವಾ ಅದಕ್ಕಿಂತ ಹೆಚ್ಚು ವಾರ್ಷಿಕ ಇಳುವರಿ ಲಭಿಸುತ್ತದೆ. ಇಳುವರಿ ಕಡಿಮೆಯಾದಾ ಹಳೆಯ ಮರಗಳ ಇಳುವರಿ ಸಾಮರ್ಥ್ಯ ಶೇಕಡ 50ಷ್ಟು ಹೆಚ್ಚಿಸಲು ಟ್ಯಾಪಿಂಗ್ ರೀತಿ ನಿಯಂತ್ರಿತ ಮೇಲ್ಮುಖ ಟ್ಯಾಪಿಂಗ್, ಹೊಸ ತೊಗಡೆಯ ಮೇಲ್ಭಾಗದಲ್ಲಿರುವ ಅಸಲೀ ತೊಗಟೆಯಲ್ಲಿ ಸುತ್ತಳತೆಯ ನಾಲ್ಕರಲ್ಲೊಂದು ಭಾಗವನ್ನು ಮಾರ್ಕ್ ಮಾಡಿ ಪರಿಷ್ಕರಿಸಿದ ಗೂಜ್ ಕತ್ತಿಯ ಮೂಲಕ ಟ್ಯಾಪಿಂಗ್ ಮಾಡಬೇಕು ಎಂದರು.

ವರ್ಷದಲ್ಲಿ 100 ಟ್ಯಾಪಿಂಗ್ ದಿನಗಳನ್ನು ಬಿಟ್ಟರೆ ಮರದ ಬೆಳವಣಿಗೆಗೆ ಅವಕಾಶವಾ ಗುತ್ತದೆ ರಬ್ಬರ್ ತೋಟದಲ್ಲಿ ಇಳುವರಿ ಕಡಿಮೆಯಾಗುವುದಕ್ಕೆ  ಟ್ಯಾಪರ್ ಗಳಲ್ಲಿ ನುರಿತತೆ ಇಲ್ಲವಾಗಿರು ವುದು.ಹಾಗಾಗಿ  ಪ್ರಧಾನ ಮಂತ್ರಿ  ಕೌಶಲ್ ವಿಕಾಸ್ ಯೋಜನೆ ಯಡಿ ಟ್ಯಾಪರ್ ಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ.

30 ಟ್ಯಾಪರ್ ಗಳ ಒಂದು ಗುಂಪಿಗೆ 3ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆ. ₹500 ಧನಸಹಾಯ ನೀಡಲಾಗುತ್ತದೆ. ಅಲ್ಲದೆ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ 22 ಸಾವಿರ ಟ್ಯಾಪರ್ ಗಳಿಗೆ ತರಬೇತಿ ನೀಡಲು ₹6.50 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ರಬ್ಬರ್ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಜಾನಕೀರಾಂ, ಮಾತನಾಡಿ ವೈಜ್ಞಾನಿಕವಾಗಿ ರಬ್ಬರ್ ಟ್ಯಾಪಿಂಗ್ ಮಾಡುವವರ ಕೊರತೆಯಿರುವುದರಿಂದ  ಬೆಳೆಗಾರರ ಸಂಘದ ಮಾದರಿಯಲ್ಲಿಯೇ ಟ್ಯಾಪಿಂಗ್ ಮಾಡುವವರ ಸಂಘವನ್ನು ಸ್ಥಾಪಿಸಿ ಅವರಿಗೆ ಸೂಕ್ತ ತರಬೇತಿ ಕೊಡಿಸುವ ಕೆಲಸ ಸಂಘ ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆವಹಿಸಿದ್ದ  ತಾಲ್ಲೂಕು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ವಿ.ವಿಜಯ ಮಾತನಾಡಿ, ಪಟ್ಟಣಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದಾಗ ಕೇರಳ ಮಾದರಿಯಲ್ಲಿ ರಬ್ಬರ್ ಗೆ ₹150 ಬೆಲೆ ನಿಗಧಿ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ. ಎಂದರು.

ಸಂಘದ ಹೋರಾಟದ ಫಲವಾಗಿ ಕುಂದಾಪುರದಲ್ಲಿ ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ಶಿವಮೊಗ್ಗದಲ್ಲಿ  ಆರಂಭವಾಗಿದೆ. ಆದರೆ ಇಲ್ಲಿನ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ರಬ್ಬರ್ ಮಂಡಳಿ ಕ್ಷೇತ್ರಾಧಿಕಾರಿ ಬಿಜೇಶ್, ಸಂಘದ ನಿರ್ದೇಶಕ ಎಚ್,ಬಿ.ರಘುವೀರ್, ಲೋಕೇಶ್ ಇದ್ದರು.

**

ರೈತರು ಕೃಷಿಯಲ್ಲಿ ಪ್ರಗತಿಯ ಬಗ್ಗೆ ಆಶಾವಾದ ಇಟ್ಟುಕೊಂಡು ಪ್ರಗತಿಯ ಬಗ್ಗೆ ಚಿಂತನೆ ಮಾಡಬೇಕು
-ಶ್ರೀಕಾಂತ್
ರಬ್ಬರ್ ಮಂಡಳಿ ಸಹಾಯಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.