ADVERTISEMENT

‘ವೈದಿಕ ಧರ್ಮಕ್ಕಿಂತ ಪ್ರಾಚೀನ ಜೈನ ಧರ್ಮ’

ಜ್ವಾಲಾಮಾಲಿನಿ ಮಹಿಳಾ ಮಂಡಳಿ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:41 IST
Last Updated 16 ಜನವರಿ 2017, 5:41 IST
‘ವೈದಿಕ ಧರ್ಮಕ್ಕಿಂತ ಪ್ರಾಚೀನ ಜೈನ ಧರ್ಮ’
‘ವೈದಿಕ ಧರ್ಮಕ್ಕಿಂತ ಪ್ರಾಚೀನ ಜೈನ ಧರ್ಮ’   

ಕಳಸ: ತೀರ್ಥಂಕರ ಮಹಾವೀರರು ಜೈನ ಧರ್ಮದ ಸ್ಥಾಪಕ ಎಂಬ ತಪ್ಪು ಮಾಹಿತಿ ಶಾಲಾ ಪಠ್ಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದ್ದು, ಆದರೆ ಮಹಾವೀರನಿಗಿಂತ ಸಾವಿರಾರು ವರ್ಷಗಳ ಹಿಂದೆಯೇ ಜೈನ ಧರ್ಮ ಅಸ್ತಿತ್ವದಲ್ಲಿ ಇತ್ತು ಎಂದು ಎಲ್‌ಐಸಿಯ ಆಡಳಿತಾಧಿಕಾರಿ ರಾಜ್ಯಶ್ರೀ ಹಂಪನಾ ಅಭಿಪ್ರಾಯಪಟ್ಟರು.

ಪಟ್ಟಣದ ಮಹಾವೀರ ಭವನದಲ್ಲಿ ಭಾನುವಾರ ನಡೆದ ಜ್ವಾಲಾಮಾಲಿನಿ ಮಹಿಳಾ ಮಂಡಳಿಯ ದಶಮಾ ನೋತ್ಸವದ ಸಂದರ್ಭದಲ್ಲಿ ಅವರು ಉಪನ್ಯಾಸ ನೀಡಿದರು.

ದೇಶದ ಉದ್ದಗಲಕ್ಕೂ ನಡೆದ ಉತ್ಖನನದ ಸಂದರ್ಭದಲ್ಲಿ ದೊರೆತ ವಿಗ್ರಹಗಳು ಮತ್ತು ಶಾಸನಗಳು ಜೈನ ಧರ್ಮದ ಪ್ರಾಚೀನತೆ ಬಗ್ಗೆ  ಸಾಕ್ಷ್ಯ ಹೇಳುತ್ತವೆ ಎಂದರು. 

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ನವರತ್ನ ಇಂದು ಕುಮಾರ್‌ ಮಾತನಾಡಿ, ಕಳಸದಂತಹ ಮಲೆನಾಡಿನ ಕಟ್ಟ ಕಡೆಯ ಊರಿನಲ್ಲಿ ಜೈನ ಮಹಿಳೆಯರ ಬಲ ವಾದ ಸಂಘಟನೆ ಇರುವುದು ಅಚ್ಚರಿ ಮತ್ತು ಸಂತಸ ಎಂದರು.

ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಕೇಸರಿ ರತ್ನರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು. ಜ್ವಾಲಾಮಾಲಿನಿ ಮಹಿಳಾ ಮಂಡಳಿ ಅದ್ಯಕ್ಷೆ ಮನೋ ರಾಧಿನಿ ಧರಣೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾಫಿ ಬೆಳೆಗಾರ ಕೆ.ಸಿ.ಧರ ಣೇಂದ್ರ, ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ, ಜೈನ್‌ ಮಿಲನ್‌ ಅಧ್ಯಕ್ಷ ಧರ್ಮಪಾಲ್‌, ಪದ್ಮಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಸುಷ್ಮಾ ರಾಜೇಂದ್ರ ಮತ್ತಿತರರು ಇದ್ದರು.

ದಶಮಾನೋತ್ಸವದ ಪ್ರಯುಕ್ತ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಏರ್ಪಡಿ ಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾ ಯಿತು. ಮಕ್ಕಳು ಮತ್ತು ಮಹಿಳೆಯರು ನೃತ್ಯ ಪ್ರದರ್ಶನ ಹಾಗೂ ಜ್ವಾಲಾಮಾಲಾ ಮಹಿಳಾ ಮಂಡಳಿ ಸದಸ್ಯೆಯರು ನಟಿಸಿದ ’ಕನಕ ಜ್ವಾಲೆ’ ಎಂಬ ಪೌರಾಣಿಕ ನಾಟಕ ಎಲ್ಲರ ಗಮನ ಸೆಳೆಯಿತು.

*
ಆರ್ಯರು ಭಾರತಕ್ಕೆ ಬರುವ ಮೊದಲೇ ದೇಶದಲ್ಲಿ ಜೈನ ಧರ್ಮ ಇತ್ತು.ವೈದಿಕ ಧರ್ಮಕ್ಕಿಂತ ಜೈನ ಧರ್ಮವೇ ಪ್ರಾಚೀನ.
-ರಾಜ್ಯಶ್ರೀ ಹಂಪನಾ,
ಎಲ್‌ಐಸಿಯ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT