ADVERTISEMENT

‘ಸತ್ಯಾನ್ವೇಷಣೆಗೆ ಗುರುಗಳ ಮಾರ್ಗದರ್ಶನ ಅಗತ್ಯ’

ಬಸವೇಶ್ವರ ಶಿವಾಚಾರ್ಯರಿಗೆ ರೇಣುಕಾಚಾರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:45 IST
Last Updated 11 ಮಾರ್ಚ್ 2017, 6:45 IST
ರಂಭಾಪುರಿ ಪೀಠ(ಬಾಳೆಹೊನ್ನೂರು): 21ನೇ ಶತಮಾನ ಭಾರತೀಯರ ಶತ ಮಾನವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಮಾರ್ಗದರ್ಶಕರಾಗಲಿದ್ದಾರೆ.  ಸತ್ಯಾನ್ವೇ ಷಣೆಗೆ ಗುರು ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
 
ಶುಕ್ರವಾರ ನಡೆದ ಜಗದ್ಗುರು ರೇಣು ಕಾಚಾರ್ಯ ಜಯಂತಿ ಯುಗಮಾ ನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ, ಶಿಲಾಮಯ ಸೋಮೇಶ್ವರ ದೇವಸ್ಥಾನ, ರಂಭಾಪು ರೀಶ ನಿವಾಸ ಉದ್ಘಾಟನೆ ಹಾಗೂ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮದ ಗುರುಗಳು ಸತ್ಯದ ದಾರಿಯನ್ನು ತೋರಿಸುತ್ತಾರೆ.

ಪೀಠದಲ್ಲಿ ಸ್ವಾಮೀಜಿ 51 ದಿನ ನಡೆಸಿದ ಅತಿರುದ್ರ ಹಾಗೂ ಇಷ್ಟಲಿಂಗ ಪೂಜೆಯ ಫಲವಾಗಿ ಸಮೃದ್ಧ ಮಳೆಯಾಗಲಿ. ಸ್ವಾಮೀಜಿ ಅವರ ಇಚ್ಛೆಯಂತೆ ಪೀಠದಲ್ಲಿ ಆರಂಭಿಸಲು ಉದ್ದೇಶಿಸಿರುವ ಆಯು ರ್ವೇದ ಆಸ್ಪತ್ರೆಗೆ ಎಲ್ಲ ಸಹಕಾರ ನೀಡ ಲಾಗುವುದು ಎಂದರು.
 
ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತ ನಾಡಿ, ಮನುಕುಲದ ಕಲ್ಯಾಣಕ್ಕಾಗಿ ರೇಣುಕಾಚಾರ್ಯರು ಅವತರಿಸಿದ್ದರು. ಅವರು ಪ್ರಸ್ತುತಪಡಿಸಿದ ಧರ್ಮ ಸಿದ್ಧಾಂತ ಹಾಗೂ ಸಾಮಾಜಿಕ ಚಿಂತನೆ ಇಂದಿಗೂ ಜಾರಿಯಲ್ಲಿದೆ ಎಂದರು.
 
  ರಜತಮಹೋತ್ಸವದ ನೆನಪಿಗಾಗಿ ‘ಅಕ್ಷಯ’ ಎಂಬ ಅಭಿನಂದನಾ ಗ್ರಂಥ ವನ್ನು ಬಿ.ಎಸ್.ಯಡಿಯೂರಪ್ಪ ಬಿಡು ಗಡೆ ಮಾಡಿದರು. ವೀರಶೈವಾಮೃತಂ ಎಂಬ ಆಂಗ್ಲ ಕೃತಿಯನ್ನು  ಮಾಜಿ ಸಚಿವ ರಾಜುಗೌಡ ಬಿಡುಗಡೆಗೊಳಿಸಿದರು. ‘ಗುರುಸ್ಥಲದ ಗುಮ್ಮಟ’ ಎಂಬ ಧ್ವನಿ ಸುರಳಿಯನ್ನು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿಡುಗಡೆಗೊಳಿಸಿದರು.
 
ಡಾ.ಸಂಗಮೇಶ ಸವದತ್ತಿಮಠ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಾದ ಡಿ.ಎನ್.ಜೀವರಾಜ್ ಸಿ.ಟಿ.ರವಿ, ಎಚ್.ಬಿ.ರಾಜಗೋಪಾಲ್, ಕಲಬುರ್ಗಿ ಬಿ.ಜಿ.ಪಾಟೇಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ಉಪಾ ಧ್ಯಕ್ಷ ಎಸ್.ಎನ್.ರಾಮಸ್ವಾಮಿ,ಸದಸ್ಯೆ ಕವಿತಾಲಿಂಗರಾಜು.ಎಸ್.ಪರಮಶಿವಯ್,ಶಿವಗಂಗಾ ಕ್ಷೇತ್ರದ ವಲಯ ಶಾಂತ ಮುನಿ ಶಿವಾಚಾರ್ಯ, ಡಾ.ಚೆನ್ನವೀರ ಉತ್ತಂಗಿ, ಸಂಗಮೇಶ್ ಉತ್ತಂಗಿ ಇದ್ದರು.
 
ಕಸ್ತೂರಿರಂಗನ್ ವರದಿ ರಾಜ್ಯಕ್ಕೆ ಮರಣಶಾಸನ: ಯಡಿಯೂರಪ್ಪ
ಬಾಳೆಹೊನ್ನೂರು: ಕರ್ನಾಟಕದ ಆರೇಳು ಜಿಲ್ಲೆಗಳನ್ನು ಕಸ್ತೂರಿ ರಂಗನ್ ವರದಿಯಿಂದ ಕೈ ಬಿಡುವಂತೆ ಒತ್ತಾಯಿಸಿ, ರಾಜ್ಯದ ಸಂಸದರು ಕೇಂದ್ರದ ಪರಿಸರ ಸಚಿವರು ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ರಂಭಾಪುರಿ ಪೀಠಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಸ್ತೂರಿ ರಂಗನ್ ವರದಿ ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ. ಕೇರಳ ಸರ್ಕಾರ ಮಾತ್ರ ಹತ್ತಾರು ಬಾರಿ ಕೇಂದ್ರ ಸರ್ಕಾರವನ್ನು ಮತ್ತು ಕೇಂದ್ರದ ಸಚಿವರನ್ನು ಸಂಪರ್ಕಿಸಿ ಯೋಜನೆ ಜಾರಿಗೊಳಿಸದಂತೆ ವಿನಾಯಿತಿ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದೆ. ಆದರೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಮಗೆ ಯಾವುದೇ ವಿನಾಯಿತಿ ದೊರೆತಿಲ್ಲ ಎಂದರು.

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ದೈವಬಲ, ಜನಬಲವಿದೆ. ಸಿದ್ದರಾಮಯ್ಯ ಅವರ ಅನಿಷ್ಟ ಸರ್ಕಾರ ಯಾವಾಗ ತೊಲಗುತ್ತೋ ಎನ್ನುವಷ್ಟು ಜನರಲ್ಲಿ ಬೇಸರ ಮೂಡಿಸಿದೆ. ಈ ಚುನಾವಣೆಯು ಅಭ್ಯರ್ಥಿಯ ವಿರುದ್ಧ ಅಲ್ಲ. ಸಿದ್ದರಾಮಯ್ಯ ಅವರ ಜನವಿರೋಧಿ ನೀತಿ ವಿರುದ್ಧ ಜನಾದೇಶ ನೀಡುವುದಾಗಿದೆ ಎಂದರು.
 
* ವೀರಶೈವ ಧರ್ಮಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ಜಾತಿ ಜಂಜಡಗಳನ್ನು ದೂರಮಾಡಿ ಸಾಮ ರಸ್ಯ, ಭಾವೈಕ್ಯತೆ ನೆಲೆಗೊಳ್ಳುವಲ್ಲಿ ಹಿರಿಯರು ಶ್ರಮಿಸಿದ್ದಾರೆ.
-ರಂಭಾಪುರಿ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.