ADVERTISEMENT

2020 ರೈತರ ವರ್ಷವೆಂದು ಘೋಷಿಸಲು ಪ್ರಧಾನಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:43 IST
Last Updated 22 ಮಾರ್ಚ್ 2017, 6:43 IST

ಅಜ್ಜಂಪುರ: ಕೃಷಿ ಅಭಿವೃದ್ಧಿ ಮತ್ತು ರೈತರ ಶ್ರೇಯೋಭಿವೃದ್ಧಿಗಾಗಿ 2020 ನ್ನು ‘ರೈತರ ವರ್ಷ’ ವಾಗಿ ಘೋಷಿಸುವಂತೆ ಮನವಿ ಮಾಡಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಪಟ್ಟಣದ ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಾನಂದ್ ಪತ್ರ ಬರೆದು ನಿವೇದಿಸಿಕೊಂಡಿದ್ದಾರೆ.

ಭಾರತ ಹಳ್ಳಿಗಳ ದೇಶ. ಬಹುಪಾಲು ಜನರಿಗೆ ಇಂದಿಗೂ ಕೃಷಿಯೇ ಬದುಕಿನ ಆಧಾರ. ಪರಂಪರಾನುಗತ ಬೇಸಾಯ ಪದ್ದತಿ, ಮಾನ್ಸೂನ್ ಮಳೆಯನ್ನೇ ನಂಬಿದ ಕೃಷಿ ಪದ್ಧತಿಯನ್ನು ಮುಂದು ವರೆಸಿದ್ದಾರೆ. ಪರಿಣಾಮ ಕಳೆದ ಹಲವು ವರ್ಷಗಳಿಂದ ಆವರಿಸಿರುವ ತೀವ್ರ ಬರಗಾಲ ಬೆಳೆಯನ್ನು ಬರಿದಾಗಿಸಿದೆ.

ಬೆಳೆ ನಷ್ಟದಿಂದ ತತ್ತರಿಸಿ, ಸಾಲದ ಸುಳಿಯಲ್ಲಿ ಸಿಲುಕಿರುವ ಕೆಲವು ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಹಲ ವರು ಕೃಷಿಯಿಂದ ವಿಮುಖವಾಗಿ, ನಿರುದ್ಯೋಗಿಗಳಾಗಿ ಸಮಯವನ್ನು ವ್ಯರ್ಥವಾಗಿ ಕಳೆ ಯುತ್ತಿದ್ದಾರೆ.

ಇಂತಹವರಿಗೆ ಕೃಷಿಯಲ್ಲಿಯೇ ಲಾಭ ಗಳಿಸಬಹುದಾದ ಹೊಸ ಮಾರ್ಗೋಪಾಯಗಳನ್ನು ಪರಿಚಯಿಸಿ, ಕೃಷಿಯ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸುವ, ಬದುಕಿನ ಬಗ್ಗೆ ಸಕಾರಾತ್ಮಕ ಚಿಂತನೆ ಬಲಗೊಳಿಸಬೇಕಾದ ಈವರೆಗಿನ ಸರ್ಕಾ ರಗಳು ಗಟ್ಟಿ ನಿರ್ಧಾ ರ ಕೈಗೊಳ್ಳಲು ವಿಫಲವಾಗಿವೆ.

ಬೇಸಾಯದಲ್ಲಿ ಇಸ್ರೇಲ್ ಮಾದರಿ ತಾಂತ್ರಿಕತೆ, ನೀರಿನ ಸಂರಕ್ಷಣೆ, ಅಗತ್ಯ ದಷ್ಟು ಮಾತ್ರ ಬಳಕೆ ಸೇರಿದಂತೆ ಕೃಷಿ ಯಲ್ಲಿ ಕಡಿಮೆ ಖರ್ಚು-ಹೆಚ್ಚಿನ ಲಾಭ ಪಡೆಯಬಹುದಾದ ಪದ್ಧತಿಗಳನ್ನು ಪರಿ ಚಯಿಸಬೇಕು.

ಈ ನಿಟ್ಟಿನಲ್ಲಿ 2020ನ್ನು ರೈತರ ವರ್ಷ ಎಂದು ಘೋಷಿಸಬೇಕು. ಇದಕ್ಕಾಗಿ ಇನ್ನೂ 3 ವರ್ಷದ ಸುದೀರ್ಘ ಕಾಲಾವಕಾಶ ಇದ್ದು, ರೈತರ ಪರವಾಗಿ ಹೊಸ ಯೋಜನೆಗಳನ್ನು ಅನು ಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಶ್ವದ ಆಹಾರ ಧಾನ್ಯ ಉತ್ಫಾದನಾ ರಾಷ್ಟ್ರಗಳ ಪೈಕಿ ಭಾರತ ಅಗ್ರಸ್ಥಾನ ಹೊಂದುವಂತಾಗಬೇಕು. ಅದಕ್ಕಾಗಿ ಮತ್ತೊಂದು ಹಸಿರು ಕ್ರಾಂತಿ ಆಗತ್ಯವಾಗಿದ್ದು, ಈ ಮಹಾನ್ ಕಾರ್ಯಕ್ಕೆ ತಾವೇ ಮುನ್ನುಡಿಯನ್ನು ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.