ADVERTISEMENT

ಆರು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯವಿಲ್ಲದ ಹೈಮಾಸ್ಟ್‌ ದೀಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 8:48 IST
Last Updated 21 ಸೆಪ್ಟೆಂಬರ್ 2017, 8:48 IST

ಹಿರಿಯೂರು: ತಾಲ್ಲೂಕಿನ ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಕರಿಯಾಲ ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ ಸಂಸದರ  ₹ 5 ಲಕ್ಷ ಅನುದಾನದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಆರು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ಪಾಂಡುರಂಗಪ್ಪ, ಕರಿಯಪ್ಪ ಹಾಗೂ ಎಸ್. ಚಂದ್ರಪ್ಪ ಆರೋಪಿಸಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಈ ವೃತ್ತದ ಸಮೀಪ ಇರುವ ಬೀದಿ ದೀಪಗಳಿಗೆ ಗ್ರಾಮ ಪಂಚಾಯ್ತಿಯವರು ಬಲ್ಬ್ ಹಾಕಿಲ್ಲ. ಹೀಗಾಗಿ ದಿನನಿತ್ಯ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಆಡಳಿತವನ್ನು ಶಪಿಸುತ್ತಿದ್ದಾರೆ. ಸಂಸ‌ದರು ಬಿಡುವು ಮಾಡಿಕೊಂಡು ಹೈಮಾಸ್ಟ್‌ ದೀಪ ಬೆಳಗುವಂತೆ ಮಾಡಬೇಕು ಎಂದು ಸದಸ್ಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT