ADVERTISEMENT

‘ಆಡಳಿತಾತ್ಮಕ ಪ್ರಯತ್ನದಿಂದ ತುಳು ಉಳಿವು’

ತುಳು ತುಲಿಪು ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:21 IST
Last Updated 6 ಫೆಬ್ರುವರಿ 2017, 5:21 IST

ಮಂಗಳೂರು: ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪ್ರಯತ್ನಗ ಳಿಂದಷ್ಟೇ ತುಳು ಭಾಷೆ ಉಳಿಯಲು ಸಾಧ್ಯ ಎಂದು ಮಂಗಳೂರು ವಿಶ್ವವಿ ದ್ಯಾಲಯದ ಎಸ್‌.ವಿ.ಪಿ. ಕನ್ನಡ ಅಧ್ಯ ಯನ ಕೇಂದ್ರದ ಸಂಯೋಜಕ ಡಾ.ಬಿ.ಶಿವರಾಮ ಶೆಟ್ಟಿ ಹೇಳಿದರು.

ಅವರು ನಗರದ ಶರವು ಮಹಾಗ ಣಪತಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ತುಳುಕೂಟದ ವತಿಯಿಂದ ನಡೆದ ಪುಸ್ತಕ ಭಂಡಾರ ಅನಾವರಣ ಹಾಗೂ ‘ತುಳು ತುಲಿಪು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ತುಳು ಒಂದು ಜಾತಿ, ವ್ಯಕ್ತಿ ಹಾಗೂ ಸ್ಥಳಗಳಿಗೆ ಸಂಬಂಧಪಟ್ಟದ್ದಲ್ಲ. ನಮ್ಮ ನಂಬಿಕೆ, ಆಚಾರ–ವಿಚಾರಗಳನ್ನು ನೆನಪಿ ಟ್ಟುಕೊಳ್ಳದಿದ್ದರೆ ತುಳು ಭಾಷೆ ಶಕ್ತಿ ಕಳೆದುಕೊಳ್ಳುತ್ತದೆ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೆದಕ್ಕೆ ಸೇರದೇ ಇರುವುದು ಬೇಸರದ ಸಂಗತಿ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಬೇಕಿದೆ. ಭಾಷೆಯನ್ನು ಗಟ್ಟಿಗೊಳಿಸುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ ಎಂದರು.

ತುಳು ಪುಸ್ತಕ ಭಂಡಾರವನ್ನು ಅನಾ ವರಣಗೊಳಿಸಿ ಮಾತನಾಡಿದ ಮಂಗ ಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಭಾಷೆ ಸಂಸ್ಕೃತಿ ಆಚಾರ–ವಿಚಾರಗಳ ಪ್ರಶ್ನೆ ಬಂದಾಗ ತುಳುವರು ಒಂದಾಗ ಬೇಕು. ತುಳುವಿನಲ್ಲಿ ದಾಖಲಾತಿ ಮತ್ತು ಜಾಗೃತಿ ಮೂಡಿಸುವ ಕಾರ್ಯಗಳಾಗ ಬೇಕು ಎಂದರು.

ಶರವು ಮಹಾಗಣಪತಿ ದೇವಸ್ಥಾ ನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.  ರಾಮಕೃಷ್ಣ ಪದವಿಪೂರ್ವ ಕಾಲೇ ಜಿನ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ತುಳು ತುಲಿಪು ಪುಸ್ತಕದ ಪರಿಚಯ ಮಾಡಿದ ರು. ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾಸ್ಕರ್ ಕುಲಾಲ್ ಬರ್ಕೆ ಅವರನ್ನು ಸನ್ಮಾನಿಸ ಲಾಯಿತು. ಸಂಜೀವ ಅಡ್ಯಾರ್ ಸ್ವಾಗತಿ ಸಿದರು. ವಿಜಿ ಪಾಲ್ ನಿರೂಪಿಸಿದರು.

ತುಳು ತುಲಿಪು
ತುಳುಕೂಟ ಹೊರತಂದಿರುವ ತುಳು ತುಲಿಪು ಪುಸ್ತಕದಲ್ಲಿ 14 ಲೇಖನಗಳಿವೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಇಲ್ಲಿವರೆಗೆ ಆಗಿರುವ ಪ್ರಯತ್ನಗಳು ಹಾಗೂ ಇನ್ನು ಮಾಡಬೇಕಿರುವ ಕೆಲಸಗಳ ಬಗ್ಗೆ ಪುಸ್ತಕದಲ್ಲಿ ಚರ್ಚಿಸಲಾಗಿದೆ. ತುಳು ಭಾಷೆಯ ನ್ನು 8ನೆ ಪರಿಚ್ಛೇದಕ್ಕ ಸೇರಿಸುವ ನಿಟ್ಟಿನಲ್ಲಿ ತುಳುಕೂಟದ

ವತಿಯಿಂದ ಹಂಪನಕಟ್ಟೆಯ ವಿಶ್ವವಿ ದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 2014ರಲ್ಲಿ  ನಡೆದ ‘ಸಂವಿಧಾನದ 8ನೇ ಪರಿಚ್ಚೇದಗ್ ತುಳು: ತುಳು– ತುಲಿಪು’ ಕೂಟದಲ್ಲಿ ಭಾಷಾ ಪಂಡಿತರು, ಶಿಕ್ಷಣ ತಜ್ಞರು, ಸಾಹಿ ತಿಗಳು, ವಕೀಲರು ಮಂಡಿಸಿದ ವಿಚಾರಗಳನ್ನು ತುಳು ತುಲಿಪು ಪುಸ್ತಕದ ಮೂಲಕ ಹೊರತರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.