ADVERTISEMENT

‘ಕಡಲ್ಕೊರೆತ: ಮುಂಗಾರು ಬಳಿಕ ಕಾಮಗಾರಿ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:28 IST
Last Updated 8 ಮಾರ್ಚ್ 2017, 10:28 IST

ಉಳ್ಳಾಲ: ‘ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ತಡೆ ಯೋಜನೆಗೆ ಪರಿಣತ ಸಮಿತಿಯಿಂದ ಸಲಹೆ ಪಡೆದು ಟೆಂಡರ್ ಕರೆಯಲಾಗಿದ್ದು, ಮುಂಗಾರು ಮುಗಿದ ತಕ್ಷಣ ಕಾಮಗಾರಿಯನ್ನು ಆರಂಭಿಸಲಾ ಗುವುದು’ ಎಂದು  ಲೋಕೋಪಯೋಗಿ ಇಲಾಖೆ ಸಚಿವ  ಎಚ್.ಸಿ  ಮಹದೇವಪ್ಪ ಹೇಳಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮುದ್ರ ತೀರದ ಪ್ರದೇಶ ಗಳಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸೋಮೇಶ್ವರ ಉಚ್ಚಿಲ ಸಮುದ್ರ ತೀರಕ್ಕೆ ಅವರು ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು.

ಉಳ್ಳಾಲ ಭಾಗದಲ್ಲಿ ಬ್ರೇಕ್ ವಾಟರ್ ಕಾಮಗಾರಿ ಕೈಗೊಂಡ ಬಳಿಕ ಸೋಮೇ ಶ್ವರ ಉಚ್ಚಿಲ ತೀರದಲ್ಲಿ  ಅನೇಕ ಮನೆ ಗಳು ಸಮುದ್ರ ಪಾಲಾಗಿವೆ.  ಇಲ್ಲಿನ ಸಮುದ್ರ ತಡೆ ಯೋಜನೆ ರೂಪಿಸಲು ಪರಿಣತ  ತಂಡದಿಂದ ಸಲಹೆಯನ್ನು ಪಡೆಯಲಾಗಿದೆ.

ಅದಕ್ಕಾಗಿ ಹೆಚ್ಚುವರಿ ₹ 4 ಕೋಟಿ ಅನುದಾನವನ್ನು ಬಿಡುಗಡೆ ಗೊಳಿಸಲಾಗಿದ್ದು, ಟೆಂಡರ್ ಕರೆಯಲಾ ಗಿದೆ. ತಾಂತ್ರಿಕತೆ, ಹಣಕಾಸು ವ್ಯವಸ್ಥೆ ಸಿದ್ಧಗೊಳ್ಳುತ್ತಿದ್ದಂತೆ  ಮುಂಗಾರು ಕಳೆದ ತಕ್ಷಣ ಕಾಮಗಾರಿ ಆರಂಭಿಸಲಾಗು ವುದು’ ಎಂದು ಹೇಳಿದರು.

ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ನಗರಸಭೆ ಸದ ಸ್ಯರು, ಸೋಮೇಶ್ವರ ಪಂಚಾಯಿತಿ ಸದ ಸ್ಯರು ಹಾಗೂ  ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT