ADVERTISEMENT

ಕಲ್ಲಡ್ಕದಲ್ಲಿ ಕಂಗಾಲಾಗಿದ್ದಾರೆ ದುಡಿಯುವ ಜನ

ವಿ.ಎಸ್.ಸುಬ್ರಹ್ಮಣ್ಯ
Published 24 ಜೂನ್ 2017, 9:39 IST
Last Updated 24 ಜೂನ್ 2017, 9:39 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣ ದಲ್ಲಿ 25 ದಿನಗಳ ಹಿಂದೆ ಹೊತ್ತಿಕೊಂಡ ಕೋಮು ಘರ್ಷಣೆಯ ಬೆಂಕಿ ಇನ್ನೂ ಆರಿಲ್ಲ. ಅಲ್ಲಿನ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಆಗಾಗ ಸ್ಫೋಟಗೊ ಳ್ಳುತ್ತಿದೆ. ಅಹಿತಕರ ಘಟನೆಗಳ ಸರ ಮಾಲೆಯಿಂದ ಪಟ್ಟಣದ ಜನಜೀವನ ದಿಕ್ಕು ತಪ್ಪಿದೆ. ವ್ಯಾಪಾರಿಗಳು, ಹೋ ಟೆಲ್‌ ಮಾಲೀಕರು, ಆಟೊ ಚಾಲಕರು ಸೇರಿದಂತೆ ದುಡಿಯುವ ವರ್ಗದ ಜನರು ಇದರಿಂದ ಕಂಗಾಲಾಗಿ ಹೋಗಿದ್ದಾರೆ.

1971ರಲ್ಲಿ ನಡೆದ ಮೊದಲ ಕೋಮು ಘರ್ಷಣೆಯಿಂದ ಈವರೆಗೆ ಹಲವು ಬಾರಿ ಹಿಂದೂ– ಮುಸ್ಲಿಮರ ನಡುವೆ ದ್ವೇಷದ ಜ್ವಾಲೆ ಸ್ಫೋಟಗೊಂಡಿದೆ. ಸಣ್ಣ ಸಣ್ಣ ಕಾರಣಗಳು ಬೃಹದಾ ಕಾರವಾಗಿ ಬೆಳೆದು ಎರಡೂ ಧರ್ಮದ ಜನರು ದೂರ ದೂರ ಸರಿದು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ.

ಪ್ರತಿ ಬಾರಿಯೂ ಕೋಮು ಘರ್ಷಣೆಗಳು ನಡೆದರೆ ಮೂರರಿಂದ ನಾಲ್ಕು ತಿಂಗಳ ಕಾಲ ಪಟ್ಟಣದಲ್ಲಿ ಬೀದಿ ಗಿಳಿಯಲು ಜನ ಹೆದರುತ್ತಾರೆ. ಸುತ್ತ ಮುತ್ತಲ ಹಳ್ಳಿಗಳಿಂದ ಇಲ್ಲಿಗೆ ಬರುತ್ತಿ ದ್ದವರು ಮಂಗಳೂರಿನ ಹಾದಿ ಹಿಡಿ ಯುತ್ತಾರೆ. ಹೀಗೆಯೇ ಪದೇ ಪದೇ ಗಲಭೆಗಳು ನಡೆಯುತ್ತಿದ್ದರೆ ತಮ್ಮ ಗತಿ ಏನು ಎಂಬ ಆತಂಕದ ನೆರಿಗೆಗಳು ದುಡಿಯುವ ವರ್ಗದ ಜನರ ಮುಖದಲ್ಲಿ ಎದ್ದು ಕಾಣತೊಡಗಿವೆ.

ADVERTISEMENT

ಗುರುವಾರ ಕಲ್ಲಡ್ಕಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಜತೆ ಮಾತನಾಡಿದ ಪ್ಲೈವುಡ್‌ ಅಂಗಡಿ ಮಾಲೀಕ ಗೋಳ್ತಮಜಲು ನಿವಾಸಿ ಹಮೀದ್‌, ‘ಪ್ರತಿ ಬಾರಿಯೂ ಇದೇ ಸ್ಥಿತಿ. ಒಮ್ಮೆ ಗಲಭೆ ನಡೆದರೆ ನಾಲ್ಕು ತಿಂಗಳವರೆಗೂ ನಮಗೆ ಕಷ್ಟದ ದಿನಗಳು. ಮಳಿಗೆಯ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಕೆಲಸದ ನಿಮಿತ್ತ ರಸ್ತೆಗೆ ಹೋದವರು, ಖರೀದಿ ಗಾಗಿ ಅಂಗಡಿಗೆ ಬಂದವರ ಮೇಲೂ ಪೊಲೀಸರು ಪ್ರಕರಣ ದಾಖಲು ಮಾಡು ತ್ತಾರೆ. ಇದರಿಂದಾಗಿ ಕಲ್ಲಡ್ಕದಲ್ಲಿ ವ್ಯವ ಹಾರ ನಡೆಸುವುದೇ ಬೇಡ ಎಂಬಂತಾ ಗಿದೆ’ ಎಂದು ಬೇಸರ ಹೊರಹಾಕಿದರು.

ಅಹಿತಕರ ಘಟನೆಗಳು ನಡೆದಾಗ ಹೆಚ್ಚು ಸಂಕಷ್ಟ ಅನುಭವಿಸುವುದೇ ವ್ಯಾಪಾರಿ ವರ್ಗ. ಹೆಚ್ಚು ಮಂದಿ ವರ್ತ ಕರಿಗೆ ಯಾವ ಗುಂಪಿನ ಇರಾದೆಯೂ ಬೇಕಿಲ್ಲ. ಆದರೆ, ಪ್ರತಿ ಬಾರಿಯೂ ಅಂಗ ಡಿಗಳ ಮೇಲೆ ಕಲ್ಲು ತೂರಲಾಗುತ್ತದೆ. ಅಂಗಡಿಯ ನೌಕರರನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತದೆ. ಇದರಿಂದ ಹೊರ ಬರುವಾಗ ಸಾಕು ಸಾಕಾಗಿ ಹೋಗುತ್ತದೆ. ಗಲಭೆಗೆ ಯುವಕರನ್ನು ಎತ್ತಿ ಕಟ್ಟುವವ ರು ಆರಾಮವಾಗಿ ಇರುತ್ತಾರೆ ಎಂದರು.

‘ಕಲ್ಲಡ್ಕಕ್ಕೆ ಬರಲು ಜನ ಹೆದರುತ್ತಾರೆ. ಪರಿಸ್ಥಿತಿ ಸುಧಾರಿಸುವವರೆಗೂ ಇಲ್ಲಿ ಜನರು ಕಾಣುವುದೇ ವಿರಳ. ಕಲ್ಲಡ್ಕ ಪೇಟೆಯನ್ನು ನೆಚ್ಚಿಕೊಂಡವರು ಹೆದರಿ ಕೊಂಡು ಮೆಲ್ಕಾರ್‌, ವಿಟ್ಲ, ಮಂಗಳೂರಿಗೆ ಹೋಗುತ್ತಾರೆ. ಬಸ್ಸಿನಲ್ಲಿ ಇಲ್ಲಿಗೆ ಬಂದವರು ಇಳಿಯದೇ ಮುಂದಕ್ಕೆ ಹೋಗುತ್ತಾರೆ. ಹೀಗೆಯೇ ಆದರೆ ಮುಂದೇನೋ’ ಎಂದು ಆತಂಕಪಡುತ್ತಾರೆ ಪಟ್ಟಣದಲ್ಲಿ ಸ್ಟುಡಿಯೋ ನಡೆಸುತ್ತಿರುವ ಛಾಯಾಗ್ರಾಹಕ ಜಯಣ್ಣ.

ಒಳ್ಳೆಯವರಿಗಷ್ಟೇ ತೊಂದರೆ: ಪಟ್ಟಣದ ವಿಟ್ಲ ರಸ್ತೆಯಲ್ಲಿ ಅಂಗಡಿ ಹೊಂದಿರುವ ಜಿ.ಸುಲೇಮಾನ್‌, 40 ವರ್ಷಗಳಿಂದ ಕಲ್ಲಡ್ಕದಲ್ಲಿನ ಬೆಳವಣಿ ಗೆಗಳನ್ನು ಕಣ್ಣಾರೆ ಕಂಡವರು. ಪದೇ ಪದೇ ಸಣ್ಣ ಕಾರಣಗಳು ಹೆಮ್ಮರವಾಗಿ ಬೆಳೆದು ವಿಭಿನ್ನ ಧರ್ಮದ ಜನರು ಹೊಡೆದಾಡಿದ್ದನ್ನು ನೆನಪಿಸಿಕೊಳ್ಳುವ ಅವರು, ‘ಇಲ್ಲಿ ಕೆಟ್ಟವರು ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸುತ್ತಾರೆ. ತೆರೆಯ ಹಿಂದೆ ನಿಂತು ಎಲ್ಲವನ್ನೂ ನೋಡುತ್ತಿರುತ್ತಾರೆ. ಅವರ ಮಾತು ನಂಬಿ ಬೀದಿಗಿಳಿದ ಅಮಾಯಕ ಯುವ ಕರು ಜೈಲು ಪಾಲಾಗುತ್ತಾರೆ. ಕಲ್ಲಡ್ಕದ ಸಹವಾಸವೇ ಬೇಡ ಎಂಬಂತಾಗಿದೆ’ ಎಂದರು.

‘ಇಡೀ ದಿನ ಆಟೊ ನಿಲ್ಲಿಸಿಕೊಂಡು ಕಾಯುವುದೇ ಆಗಿದೆ. ಪೇಟೆಗೆ ಜನರು ಬರುವುದೇ ಇಲ್ಲ. ಹೀಗಾಗಿ ಆಟೊ ಚಾಲಕರಿಗೆ ದುಡಿಮೆಯೇ ಇಲ್ಲ. ಈ ಪರಿಸ್ಥಿತಿ ಸುಧಾರಿಸುವುದು ಯಾವಾಗ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ’ ಎಂದು ಆಟೊ ಚಾಲಕ ಗೋಪಾಲ್‌ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.