ADVERTISEMENT

ಕುಕ್ಕೆ: ಇಂದು ನಾಗರ ಪಂಚಮಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 7:06 IST
Last Updated 27 ಜುಲೈ 2017, 7:06 IST

ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ಪೂರ್ವ ಶಿಷ್ಠ ಸಂಪ್ರದಾ ಯದಂತೆ ನಾಗರ ಪಂಚಮಿ ಆಚರಿಸಲಾ ಗುವುದು. ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗ ಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ಶ್ರದ್ಧಾ ಭಕ್ತಿಯಿಂದ ನೆರವೇರಲಿದೆ. ಪ್ರತಿ ವರ್ಷ ಭಕ್ತರು ಶ್ರೀ ಕ್ಷೇತ್ರದಲ್ಲಿ ನಾಗರಾ ಜನಿಗೆ ತನು ಎರೆಯುತ್ತಾರೆ.  ಅಲ್ಲದೆ ಈ ದಿನ ಶ್ರೀ ದೇವಳದಲ್ಲಿ ವಿಶೇಷ ಪಂಚಾ ಮೃತ ಮಹಾಭಿಷೇಕ ನೆರವೇರಲಿದೆ.

ನಾಗರ ಪಂಚಮಿಯಂದು ಮಹಾ ಪೂಜೆಯ ನಂತರ ನಾಗಪ್ರತಿಷ್ಠಾ ಮಂಟ ಪದಲ್ಲಿನ ನಾಗರಾಜನಿಗೆ ವಿಶೇಷ ನೈವೇದ್ಯ ಸಮರ್ಪಣೆ ನೆರವೇರಲಿದೆ. ಬಳಿಕ ಗಂಧ ಪ್ರಸಾದದೊಂದಿಗೆ ಹಾಲಿನ ಅಭಿಷೇಕದ ಹಾಲು ಮತ್ತು ವಿಶೇಷವಾಗಿ ನಾಗ ಪ್ರಿಯವಾದ  ಅರಿಶಿನ ಪ್ರಸಾದ ಹಾಗೂ ಕಂಡಸಾರಿ ಕೆಂಪು ಕಲ್ಲು ಸಕ್ಕರೆ ಒಳಗೊಂಡ ಪಂಚಕಜ್ಜಾಯ ವಿತರಿಸಲಾಗುತ್ತದೆ. ಈ ದಿನ ನಾಗರಾಜನಿಗೆ ಪ್ರಿಯ ವಾದ ಅಕ್ಕಿ ಮತ್ತು ಹಾಲಿನ ಪಾಯಸದ ಭೋಜನ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ವಳಲಂಬೆ ಶ್ರೀ ಶಂಖಪಾಲ ಸುಬ್ರ ಹ್ಮಣ್ಯ ದೇವಸ್ಥಾನದಲ್ಲಿ  ನಾಗರಪಂಚಮಿ ಪ್ರಯುಕ್ತ ದೇವಸ್ಥಾನದ ನಾಗನ ಕಟ್ಟೆ ಯಲ್ಲಿ  ನಾಗದೇವರಿಗೆ ಹಾಲಿನ ಅಭಿ ಷೇಕ ನಾಗ ತಂಬಿಲ ನೆರವೇರಲಿದೆ. 

ADVERTISEMENT

ಅಲ್ಲದೆ ಶ್ರೀ ದೇವಳದಲ್ಲಿ ನಾಗರ ಪಂಚಮಿ ಪ್ರಯುಕ್ತ ಹೋಮ ಸಹಿತ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಲಿದೆ. ಏನೆಕಲ್ ಶಂಖಪಾಲ ದೇವಸ್ಥಾನ ಮತ್ತು ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಗ್ರಾಮೀಣ ಪ್ರದೇಶದ ದೇವಾಲಯಗಳಲ್ಲಿ ಮತ್ತು ನಾಗಬನದಲ್ಲಿ ತನು ಸಮರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.