ADVERTISEMENT

ಕೊಲ್ಲೂರಿನಲ್ಲಿ ಯೇಸುದಾಸ್‌ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 10:28 IST
Last Updated 11 ಜನವರಿ 2017, 10:28 IST

ಕುಂದಾಪುರ:  ಕೊಲ್ಲೂರಿನ ಮೂಕಾಂ ಬಿಕಾ ದೇವಸ್ಥಾನದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕ ಕೆ.ಜೆ. ಯೇಸು ದಾಸ್‌ ಅವರು ಪತ್ನಿ ಪ್ರಭಾವತಿ ಯೇಸು ದಾಸ್‌ ಅವರೊಂದಿಗೆ ಅರ್ಚಕರ ಮೂಲಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ 77ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ಮಂಗಳವಾರ ಆಚರಿಸಿ ಕೊಂಡರು.

ಕೊಲ್ಲೂರಿನ ಮೂಕಾಂಬಿಕಾ ದೇವಿ ಯ ಅನನ್ಯ ಭಕ್ತರಾಗಿರುವ ಯೇಸು ದಾಸ್‌, 1972ರಿಂದ ನಿರಂತರವಾಗಿ ಜ.10 ರಂದು ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಮೂಕಾಂಬಿಕೆಯ ಸನ್ನಿಧಾನದಲ್ಲಿ ಆಚರಿಸಿಕೊಳ್ಳುವ ಪರಿ ಪಾಠವನ್ನು ಬೆಳೆಸಿಕೊಂಡಿದ್ದಾರೆ. ಸೋಮವಾರ ರಾತ್ರಿ ಕೊಲ್ಲೂರಿಗೆ ಬಂದು ರಾತ್ರಿ ದೇವರ ದರ್ಶನ ಪಡೆದ ಬಳಿಕ ಸ್ಥಳೀಯ ಖಾಸಗಿ ವಸತಿ ಗೃಹದಲ್ಲಿ ತಂಗಿದ್ದರು.

ಮಂಗಳವಾರ ಬೆಳಿಗ್ಗೆ ಕ್ಷೇತ್ರದ ಹಿರಿಯ ಋತ್ವಿಜರ ನೇತೃತ್ವದಲ್ಲಿ ಚಂ ಡಿಕಾ ಹೋಮ ಹಾಗೂ ಇತರ ಪೂಜೆಗ ಳನ್ನು ಸಲ್ಲಿಸಿದ ಅವರು, ಮಧ್ಯಾಹ್ನ ಸ್ವರ್ಣ ಮುಖಿ ಮಂಟಪದಲ್ಲಿ ದೇವಿಗೆ ಭಕ್ತಿ ಸುಧೆಯ ಅರ್ಪಣೆ ಮಾಡಿದರು.

ಕೇರಳ ಸೇರಿದಂತೆ ದೇಶ ಹಾಗೂ ವಿದೇಶದಿಂದ ಬಂದಿದ್ದ ಯೇಸುದಾಸ್‌ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕನ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಕಾಂಞಂಗಾಡು ರಾಮ ಚಂದ್ರನ್‌ ಹಾಗೂ ಇತರ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಸ್ವರ್ಣಮುಖಿ ಮಂಟ ಪದಲ್ಲಿ ಗಾನ ಸುಧೆಯನ್ನು ಹರಿಸುವ ಮೂಲಕ ತಮ್ಮ ನೆಚ್ಚಿನ ಸಂಗೀತ ಗುರು ವಿಗೆ ಅಭಿಮಾನ ತೋರಿದರು.

ಯೇಸುದಾಸ್‌ ದಂಪತಿಯನ್ನು ದೇವ ಸ್ಥಾನದ ಸಹಾಯಕ ಕಾರ್ಯನಿರ್ವಹಣಾ ಧಿಕಾರಿ ಎಚ್.ಕೃಷ್ಣಮೂರ್ತಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.