ADVERTISEMENT

ಚೆಸ್‌: ಇಶಾ ಶರ್ಮಾಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:38 IST
Last Updated 25 ಮೇ 2017, 5:38 IST

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಇಶಾ ಶರ್ಮಾ ಅವರು ಏಷ್ಯಾ ಮಟ್ಟದ ಕಿರಿ ಯರ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

‘ಏಷಿಯನ್ ಜ್ಯೂನಿಯರ್ಸ್ ರ್‍್ಯಾಪಿಡ್‌ ಚಾಂಪಿಯನ್‌ಶಿಪ್‌ ಶೀರ್ಷಿಕೆ ಯಡಿ ಇರಾನ್‌ನಲ್ಲಿ ಮೇ 1ರಿಂದ 11ರವರೆಗೆ ನಡೆದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಮನ್ನಣೆಯೊಂದಿಗೆ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ’ ಎಂದು ಎಸ್.ಡಿ.ಎಂ.ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಧ್ಯಯನನಿರತವಾಗಿದ್ದಾಗಲೇ ಅಂತರರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕದ ಮನ್ನಣೆ ಪಡೆದ ಮೊದಲ ಪ್ರತಿಭಾನ್ವಿತ ವಿದ್ಯಾರ್ಥಿನಿ. ಇದಕ್ಕೂ ಮುಂಚೆ ಈಕೆ ಹೈದ್ರಾಬಾದ್‌ನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಚೆಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಚೆಸ್ ಮಾತ್ರವಲ್ಲದೆ ಇಶಾ ಶರ್ಮಾಳ ಶೈಕ್ಷಣಿಕ ಸಾಧನೆಯೂ ಅತ್ತುತ್ತಮವಾಗಿದೆ’ ಎಂದರು.

‘ಶಾರ್ಜಾ, ದುಬೈ, ಮಲೇಷಿಯಾ ಮತ್ತು ಬಾಂದ್ರಾದಲ್ಲಿ ನಡೆದ ಅಂತರ ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಾಗತಿಕ ಮನ್ನಣೆ ಪಡೆ ದಿದ್ದಾರೆ. ಜೊತೆಗೆ ರಾಜ ಮಂಡ್ರಿ, ಚೆನ್ನೈ, ಪಶ್ಚಿಮ ಬಂಗಾಳ, ದೆಹಲಿ, ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಚೆಸ್ ಕ್ರೀಡಾಕೂ ಟಗಳಲ್ಲೂ ಮಿಂಚಿದ್ದಾರೆ.

ಕಲಬುರ್ಗಿ, ಶಿವಮೊಗ್ಗ ಮತ್ತು ಮಂಡ್ಯದಲ್ಲಿ ನಡೆದ ರಾಜ್ಯಮ ಟ್ಟದ ಚೆಸ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಗಮನ ಸೆಳೆದಿದ್ದಾರೆ. ಇಶಾ ಶರ್ಮಾ ಗಮನಾರ್ಹ ಸಾಧನೆಯಲ್ಲಿ  ಅವರ ತಂದೆ ಶ್ರೀಹರಿ ದಂಪತಿಗಳ ಪ್ರೋತ್ಸಾಹ ಮಹತ್ವ ದ್ದಾಗಿದೆ’ ಎಂದರು.

ಚೆಸ್ ಪ್ರವೀಣೆ ಇಶಾ ಶರ್ಮಾ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಎಂದರು.

ಉಜಿರೆ ಎಸ್.ಡಿ.ಎಂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪ್ರೊ. ಬಾಲಭಾಸ್ಕರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ, ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಮತ್ತು ಸಂದೇಶ್, ಚೆಸ್ ಪ್ರವೀಣೆ ಇಶಾ ಶರ್ಮಾ, ತಂದೆ ಡಾ. ಶ್ರೀಹರಿ ಮತ್ತು ತಾಯಿ ಡಾ. ಶ್ರೀಮತಿ ಶ್ರೀಹರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT