ADVERTISEMENT

ಜ್ಞಾನದ ವಿಸ್ತಾರಕ್ಕೆ ಮಿತಿ ಇಲ್ಲ

ಪದವಿ ಪ್ರದಾನ ಸಮಾರಂಭ: ವಿಟಿಯು ಕುಲಸಚಿವ ರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:35 IST
Last Updated 9 ಜನವರಿ 2017, 9:35 IST
ಮುಡಿಪು: ಶಿಕ್ಷಣ ಹಾಗೂ ಜ್ಞಾನದ ವಿಸ್ತಾರಕ್ಕೆ ಯಾವುದೇ ಮೀತಿ ಇಲ್ಲ. ಅದು ವಿಶಾಲವಾದುದ್ದು, ಜ್ಞಾನ ಹಾಗೂ ತಂತ್ರಜ್ಞಾನದ ಜತೆಗೆ ಕಠಿಣ ಪರಿಶ್ರಮದ ಮೂಲಕ ಸಾಗಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಬೆಳ ಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಚ್. ಎನ್.ಜಗನ್ನಾಥ ರೆಡ್ಡಿ ಹೇಳಿದರು.
 
ಮಂಗಳೂರು ಕೊಣಾಜೆ ನಡುಪದ ವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿ ನಲ್ಲಿ ಶನಿವಾರ ನಡೆದ 2016 ನೇ ಸಾಲಿನ ಪದವಿ ಪ್ರದಾನ ಸಮಾರಂಭ ದಲ್ಲಿ ಮಾತನಾಡಿ, ವಿದ್ಯಾರ್ಜನೆ ಎಂಬು ದು ಒಂದು ನಿರಂತರ ಪ್ರಕ್ರಿಯೆ. ಇವತ್ತು ಜಗತ್ತು ತಂತ್ರಜ್ಞಾನದ ಯುಗವಾಗಿದೆ.  ಸಂಶೋಧನೆ ಮತ್ತು ನೂತನ ಅವಿಷ್ಕಾರದೊಂದಿಗೆ ಸಮಾಜಕ್ಕೆ ಉಪ ಯುಕ್ತ ಕೊಡುಗೆ ನೀಡುವಂತೆ ಆಗ ಬೇಕು. ಯಾರೊಬ್ಬರ ಜೀವನದಲ್ಲೂ ಯಶಸ್ಸು ಎಂಬುದು ಕೇವಲ ಆಲೋಚನೆ ಯಿಂದ ಅಥವಾ ಚಿಂತನೆಯಿಂದ ಮಾತ್ರ ಬರುವಂತಹ ವಿಷಯವಲ್ಲ. ಅದಕ್ಕೆ ಕಠಿಣವಾದ ಶ್ರಮ ಬೇಕು ಎಂದು ಅವರು ಹೇಳಿದರು.
 
ಸಚಿವ ರಮಾನಾಥ ರೈ ಅವರು ಮಾತನಾಡಿ, ನಾವು ವಿದ್ಯಾರ್ಥಿ ಜೀವನ ದಲ್ಲಿ ಪಡೆಯುವ ಜ್ಞಾನ ಮತ್ತು ಕೌಶಲ ನಮ್ಮ ಭವಿಷ್ಯಕ್ಕೆ ರೂಪ ನೀಡುವುದರ ಜತೆಗೆ ಉದ್ದೇಶಿತ ಗುರಿ ಈಡೇರಿಸಲು ಸಹಕಾರಿ. ಆದ್ದರಿಂದ ವಿದ್ಯಾರ್ಥಿ ದೆಸೆ ಯಲ್ಲೆ ಉತ್ತಮ ವಿದ್ಯಾಭ್ಯಾಸವನ್ನು ಪಡೆಯುವ ಜತೆಗೆ ಪೋಷಕರ ಆಶಯ ವನ್ನು ಈಡೇರಿಸಬೇಕು ಎಂದು ಅವರು ಹೇಳಿದರು.
 
 ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್,  ಪದವಿ ಪಡೆದ ಕೂಡಲೇ ಸಮಾಜದಲ್ಲಿ ದೊಡ್ಡ ಹುದ್ದೆ ಅಲಂಕ ರಿಸಲು ಸಾಧ್ಯವಿಲ್ಲ. ನಾವು ಆ ಉನ್ನತ ಹುದ್ದೆ ಪಡೆಯಬೇಕಾದರೆ ಪರಿಶ್ರಮವೂ ಅಗತ್ಯ. ಇಂತಹ ಪರಿಶ್ರಮದ ಪ್ರಯತ್ನ ನಮ್ಮನ್ನು ಉತ್ತಮ ಭವಿಷ್ಯದೊಂದಿಗೆ ಉದ್ದೇಶವನ್ನು ಈಡೇರಿಸಲು ಸಹಕಾರಿ ಎಂದು ಅವರು ಹೇಳಿದರು. 
 
ಪಿ.ಎ.ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಡಾ.ಪಿ.ಎ. ಇಬ್ರಾಹಿಂ ಹಾಜಿ ಅವರು ಸಮಾರಂಭದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. 
 
ದೇರಳಕಟ್ಟೆ ಯೇನೆಪೋಯ ವಿಶ್ವವಿ ದ್ಯಾಲಯದ ನಿವೃತ್ತ ಕುಲಪತಿ ಡಾ. ಸಯೀದ್ ಅಖೀಲ್ ಅಹ್ಮದ್, ಮಂಗ ಳೂರು ವಿವಿ ಪರಿಕ್ಷಾಂಗ ವಿಭಾಗದ ಕುಲ ಸಚಿವ ಪ್ರೊ. ಎ.ಎಂ. ಖಾನ್, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲ ಯದ ನಿವೃತ್ತ ಕುಲಸಚಿವ ಡಾ. ಪ್ರಕಾಶ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಡೀನ್‌ಗಳು ಇದ್ದರು. 
 
ಆಡಳಿತ ನಿರ್ದೇಶಕ ಕೆ.ಎಂ. ಹನೀಫ್, ಹಣಕಾಸು ನಿರ್ದೇಶಕ ಅಹ್ಮದ್ ಕುಟ್ಟಿ, ಅಕಾಡೆಮಿಕ್ ನಿರ್ದೇಶಕ ಪ್ರೊ. ಸರ್ಫರಾಜ್ ಹಾಸಿಂ ಜೆ. , ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ. ಎ.ಜೆ. ಆ್ಯಂಟನಿ, ಸಂಶೋಧನಾ ವಿಭಾಗ ಮುಖ್ಯಸ್ಥ ಡಾ. ಝಹೀದ್ ಅನ್ಸಾರಿ, ಎಂಬಿಎ ವಿಭಾಗದ ಡಾ. ಬೀರಮ್ ಮೊವೈದಿನ್ ಬಿ. ಎಂ. , ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಪಾಲಾಕ್ಷಪ್ಪ, ಕಂಪ್ಯೂಟರ್‌ ಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ. ಶರ್ಮಿಳಾ ಕುಮಾರಿ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಪ್ರೊ. ಅಬ್ದುಲ್ಲ ಗುಬ್ಬಿ, ಪ್ರೊ. ಜಾನ್ ವಾಲ್ಡರ್, ಬಯೋ ಟೆಕ್ನಾಲಜಿ ವಿಭಾಗದ ಡಾ. ಕೃಷ್ಣಪ್ರಸಾದ್ ಎನ್., ಫಿಸಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ. ಇಸ್ಮಾಯಿಲ್ ಶಾಫಿ ಎ.ಎಂ., ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಮುಸ್ತಫಾ ಖಲೀಲ್ ಇದ್ದರು.   
 
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲ ಇಬ್ರಾಹಿಂ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ವರದಿ ವಾಚಿಸಿದರು. ಪ್ರೊ. ನಬೀಲ್ ಅಹ್ಮದ್ ಹಾಗೂ ಪ್ರೊ. ಫಾತಿಮತ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲ ಡಾ. ರಮೀಝ್ ಎಂ.ಕೆ ವಂದಿಸಿದರು.
 
***
ಶಿಕ್ಷಣವು ಕೇವಲ ಪದವಿಗಷ್ಟೇ ಸೀಮಿತವಾಗಿರದೆ, ನಮ್ಮ ಸಂಸ್ಕಾರಯುತ ಜೀವನಕ್ಕೆ ದಾರಿದೀಪ ಆಗಬೇಕು. ಈ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿಯೂ ಮುಖ್ಯ.
-ಬಿ. ರಮಾನಾಥ ರೈ
ಅರಣ್ಯ ಸಚಿವ  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.