ADVERTISEMENT

ನಿವೇಶನಕ್ಕೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:37 IST
Last Updated 24 ಮೇ 2017, 8:37 IST

ಉಳ್ಳಾಲ:  ಬಡವರಿಗೆ ನಿವೇಶನ ನೀಡು ವಂತೆ ಒತ್ತಾಯಿಸಿ ಕೋಟೆಕಾರ್ ಸರ್ಕಲ್ ಕರ್ನಾಟಕ ಪ್ರಾಂತ ರೈತಸಂಘ ಅಂಬ್ಲ ಮೊಗರು ಗ್ರಾಮ ಸಮಿತಿ ವತಿಯಿಂದ ಅಂಬ್ಲಮೊಗರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ  ಪ್ರತಿಭಟನೆ ನಡೆಯಿತು.

“ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ಇಂದಿಗೂ ಮನೆ, ನಿವೇಶನವಿಲ್ಲದ ಬಡ ಕುಟುಂಬಗಳು ಸಾಕಷ್ಟಿದ್ದು, ಬಡವರಿಗೆ ನಿವೇಶನ ಒದಗಿಸುವುದು ಗ್ರಾಮ ಪಂಚಾಯಿತಿ ಕರ್ತವ್ಯ. ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ನಿವೇಶನ ರಹಿತರ ಪಟ್ಟಿ ನೀಡಬೇಕಿದ್ದು, ಸರ್ಕಾ ರವೇ ಖಾಸಗಿ ಜಮೀನು ಖರೀದಿಸಿ ವಿತರಿಸುತ್ತದೆ, ಆದರೆ ಅಂಬ್ಲಮೊಗರು ಗ್ರಾಮದಿಂದ ಜಿಲ್ಲಾಧಿಕಾರಿಗೆ ಪಟ್ಟಿಯೇ ಹೋಗಿಲ್ಲ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ  ಆರೋಪಿಸಿದರು.

ರೈತ ಸಂಘ ಗ್ರಾಮ ಸಮಿತಿಯ ಕಾರ್ಯದರ್ಶಿ ಇಬ್ರಾಹಿಂ ಮದಕ ಮಾತ ನಾಡಿ, ‘ಅಂಬ್ಲಮೊಗರುವಿನಲ್ಲಿ 5 ಎಕರೆ ಸರ್ಕಾರಿ ಜಮೀನು ಇದ್ದರೂ ನಿವೇಶನ ರಹಿತರಿಗೆ ನೀಡಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ 7 ತಿಂಗಳಿಂದ ಮುಗಿದಿಲ್ಲ, ಎಲ್ಲೋ ಒಂದು ಮೂಲೆಯಲ್ಲಿ ಘಟಕ ನಿರ್ಮಿಸಿ ದ್ದಾರೆ. ಗ್ರಾಮ ಪಂಚಾಯಿ ತಿಯಲ್ಲಿ ಅಧ್ಯಕ್ಷ, ಪಿಡಿಒ ಮಧ್ಯೆ ಇರುವ ವೈಮನಸ್ಸಿ ನಿಂದ ಗ್ರಾಮಸಭೆಯೂ ರದ್ದಾಗಿದೆ. ಇಬ್ಬರ ಜಗಳಕ್ಕೆ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ದೂರಿದರು.

ADVERTISEMENT

ಪಿಡಿಒ ಭರವಸೆ:  ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟ ಉತ್ತರ ನೀಡದೆ ಕದಲುವುದಿಲ್ಲ ಎಂದು ಪ್ರತಿಭಟನಾ ಕಾರರು ಪಟ್ಟು ಹಿಡಿದರು. ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ‘ಗ್ರಾಮದಲ್ಲಿ ರುವ 380 ಬಡವರ ಪಟ್ಟಿ ತಯಾರಿ ಸಲಾಗಿದ್ದು, ಅತ್ಯಂತ ಬಡತನದ ಲ್ಲಿರುವ 80 ಮಂದಿ ಪಟ್ಟಿಯನ್ನು ನಿವೇಶನಕ್ಕಾಗಿ ತಹಶೀಲ್ದಾರ್‌ಗೆ ನೀಡಲಾಗಿದೆ. ಸರ್ವೇ ನಂಬ್ರ 67ರಲ್ಲಿ ಮೂರು ಎಕರೆ ಜಮೀನಿದ್ದರೂ 50-60 ಮಂದಿಗೆ ಮಾತ್ರವೇ ನಿವೇಶನ ನೀಡಲು ಸಾಧ್ಯ ಎಂದು ಎಂಜಿನಿಯರ್ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಸಂಘ ಗ್ರಾಮ ಸಮಿತಿ ಅಧ್ಯಕ್ಷ ಕಮಲಾಕ್ಷ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ್ ನಾಯಕ್, ಜಯಂತ ಪೂಜಾರಿ, ಉಪಾಧ್ಯಕ್ಷ ಉಮೇಶ್, ಕಾರ್ಮಿಕರ ಸಂಘದ ಕಾರ್ಯದರ್ಶಿ ಲತೀಫ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.