ADVERTISEMENT

ನೀಗಲಿದೆ ಆಕಾಶಕಾಯಗಳ ಕುತೂಹಲ

ಚಿದಂಬರ ಪ್ರಸಾದ್
Published 26 ಮೇ 2017, 5:59 IST
Last Updated 26 ಮೇ 2017, 5:59 IST
ಪಿಲಿಕುಳ ನಿಸರ್ಗಧಾಮದಲ್ಲಿ ನಿರ್ಮಿಸಲಾಗುತ್ತಿರುವ 3ಡಿ ತಾರಾಲಯದ ನೀಲನಕ್ಷೆ.
ಪಿಲಿಕುಳ ನಿಸರ್ಗಧಾಮದಲ್ಲಿ ನಿರ್ಮಿಸಲಾಗುತ್ತಿರುವ 3ಡಿ ತಾರಾಲಯದ ನೀಲನಕ್ಷೆ.   

ಮಂಗಳೂರು:  ಬಾಹ್ಯಾಕಾಶ ವಿಜ್ಞಾನದ ಅಚ್ಚರಿ ಹಾಗೂ ಆಕಾಶ ಕಾಯಗಳ ವಿಸ್ಮಯಗಳನ್ನು ಜನರಿಗೆ ಪರಿಚಯಿಸುವ ದೇಶದ ಮೊದಲ 3ಡಿ ತಾರಾಲಯದ ಕಾಮಗಾರಿಗೆ ಪಿಲಿಕುಳದಲ್ಲಿ ವೇಗ ದೊರೆ ತಿದ್ದು, ರಾಜ್ಯ ವಿಜ್ಞಾನ ಹಾಗೂ ತಂತ್ರ ಜ್ಞಾನ ಇಲಾಖೆ ಅನುದಾನದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರ ಣದಲ್ಲಿ ‘ಸ್ವಾಮಿ ವಿವೇಕಾನಂದ ತಾರಾ ಲಯ’ 3ಡಿ ಪ್ಲಾನೆಟೋರಿಯಂ ನಿರ್ಮಾ ಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ.

ಈಗಾಗಲೇ ತಾರಾಲಯದ ಸಿವಿಲ್‌ ಕಾಮಗಾರಿಗಳು ಅಂತಿಮ ಹಂತದ ಲ್ಲಿದ್ದು, ಯಂತ್ರೋಪಕರಣ ಅಳವಡಿಕೆ ಪ್ರಕ್ರಿಯೆಗಳಿಗೆ ಚಾಲನೆ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಿಲಿಕುಳ ಅತ್ಯಾಧುನಿಕ ಹೈಬ್ರಿಡ್‌ ಪ್ರೊಜೆ ಕ್ಷನ್‌ ಸಿಸ್ಟಮ್‌ನ ತಾರಾಲಯಕ್ಕೆ ₹35.69 ಕೋಟಿ ಬಿಡುಗಡೆ ಮಾಡಲು ಆಡಳಿ ತಾತ್ಮಕ ಅನುಮೋದನೆ ನೀಡಲಾಗಿದೆ. ಈ ಮೂಲಕ ತಾರಾಲಯದ ಕಾಮಗಾ ರಿಗೆ ಇನ್ನಷ್ಟು ಬಲ ಬಂದಂತಾಗಿದೆ.

2014ರ ಫೆಬ್ರುವರಿ 13ರಂದು ‘ಸ್ವಾಮಿ ವಿವೇಕಾನಂದ ತಾರಾಲಯ’ಕ್ಕೆ  ಶಾಸಕ ಜೆ.ಆರ್‌.ಲೋಬೋ ಭೂಮಿ ಪೂಜೆ ನೆರವೇರಿಸಿದ್ದರು. ₹24.5 ಕೋಟಿ ವೆಚ್ಚದಲ್ಲಿ ತಾರಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ಈಗಾಗಲೇ ತಾರಾಲಯ ಕಟ್ಟಡದೊಳಗೆ 18 ಮೀಟ ರ್‌ನ ಗುಮ್ಮಟವನ್ನು ನಿರ್ಮಿಸಲಾಗಿದೆ.

ADVERTISEMENT

ನಕ್ಷತ್ರ, ಸೂರ್ಯ, ಚಂದ್ರ, ಧೂಮ ಕೇತು, ಗ್ರಹ ಹೀಗೆ ಆಕಾಶಕಾಯಗಳಿಗೆ ಸಂಬಂಧಪಟ್ಟ ವಿಷಯಗಳು ಚಿಣ್ಣರಿಗೆ ಕುತೂಹಲ ಮೂಡಿಸುತ್ತಿದ್ದು, ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುತ್ತದೆ. ಇಂತಹ ಕುತೂಹಲವನ್ನು ನೀಡುವ ಮೂಲಕ, ರಾತ್ರಿ ವೇಳೆ ಆಕಾಶದಲ್ಲಿ ಕಾಣುವ ಗ್ರಹಗಳು, ನಕ್ಷತ್ರ ಪುಂಜಗಳ ಪರಿಚಯ ಈ ತಾರಾಲಯದಲ್ಲಿ ಆಗಲಿದೆ.

ಬಾಹ್ಯಾಕಾಶದಲ್ಲಿ ದೊರೆಯುವ ಮಾಹಿತಿಗಳ ವಿವರ, ಸೂರ್ಯ ಹಾಗೂ ಸೌರವ್ಯೂಹದ ಉಗಮ ಕುರಿತ ಕ್ಲಿಷ್ಟಕರ ಅಂಶಗಳನ್ನು ಅರ್ಥವಾಗುವಂತೆ ವಿವರಿಸಲಾಗುತ್ತದೆ. ಖಗೋಳ ಕ್ಷೇತ್ರದ ಎಲ್ಲ ವಿಸ್ಮಯಗಳು, ಎಲ್ಲ ಗ್ರಹಗಳ ಮಾಹಿ ತಿಯನ್ನು ಒಂದು ಥಿಯೇಟರ್‌ ಒಳಗೆ ತ್ರಿಡಿ ತಂತ್ರಜ್ಞಾನದಲ್ಲಿ ತೋರಿಸಲಾ ಗುತ್ತದೆ.

ಹೊರದೇಶದಿಂದ ಯಂತ್ರೋಪ ಕರಣ: ಈಗಾಗಲೇ ತಾರಾಲಯದ ಸಿವಿಲ್‌ ಕಾಮಗಾರಿಗಳು ಪೂರ್ಣಗೊಳ್ಳು ತ್ತಿದ್ದು, ಇನ್ನು ಯಂತ್ರೋಪಕರಣಗಳು ಬರಬೇಕಿದೆ. ಅತ್ಯಾಧುನಿಕ ಹೈಬ್ರಿಡ್‌ ಪ್ರೊಜೆಕ್ಷನ್‌ ವ್ಯವಸ್ಥೆ ಇರುವ ಆಪ್ಟೋ-ಮೆಕ್ಯಾನಿಕಲ್‌ ಹಾಗೂ 3ಡಿ ಡಿಜಿಟಲ್‌ ಪ್ರೊಜೆಕ್ಷನ್‌ ವ್ಯವಸ್ಥೆಯ ತಾರಾಲಯ ಇದಾಗಿರುವುದರಿಂದ, ಯಂತ್ರೋಪ ಕರಣಗಳು ಹೊರದೇಶದಿಂದ ಬರಲಿವೆ. ಅಂತರ ರಾಷ್ಟ್ರೀಯ ಗುಣಮಟ್ಟದ ಯಂತ್ರಗಳಾಗಿದ್ದು, ಜನರ ಆಕಾಶಕಾಯಗಳ ಬಗೆಗಿನ ಕುತೂಹಲ ನೀಗಲಿದೆ.

₹8 ಕೋಟಿಯಿಂದ ₹35 ಕೋಟಿ
ತಾರಾಲಯ ನಿರ್ಮಾಣಕ್ಕೆ ಪಿಲಿಕುಳ ನಿಸರ್ಗಧಾಮದ ವತಿಯಿಂದ ಮೊದಲಿಗೆ ₹8 ಕೋಟಿ ಯೋಜನಾ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆಗ ತಾರಾಲಯ ನಿರ್ಮಾಣದ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ವಿವರ ಕಲೆ ಹಾಕಿಕೊಂಡಾಗ 3 ಡಿ ತಾರಾಲಯ ನಿರ್ಮಾಣಕ್ಕೆ ಸುಮಾರು ₹15.50 ಕೋಟಿ ವೆಚ್ಚಕ್ಕೆ ಯೋಜನಾ ವರದಿಯನ್ನು ಪರಿಷ್ಕರಿಸಲಾಯಿತು.

ಇದನ್ನು ಮಂಜೂರು ಮಾಡಿದ ಕರ್ನಾಟಕ ಸರ್ಕಾರ, ತಾಂತ್ರಿಕ ಅಧ್ಯಯನ ಹಾಗೂ ಸರಿಯಾದ ಯೋಜನಾ ವೆಚ್ಚ ಅಂತಿಮಗೊಳಿಸಲು, ಬೆಂಗಳೂರಿನ ತಾರಾಲಯ ನಿರ್ದೇಶಕ ಡಾ. ಶುಕ್ರೆಯವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ನೇಮಿಸಿತು.

ಸಮಿತಿಯು ದೇಶದ ಹಲವು ತಾರಾಲಯಗಳನ್ನು ನೋಡಿ, ತಜ್ಞರೊಂದಿಗೆ ಚರ್ಚಿಸಿ, ಪಿಲಿಕುಳದಲ್ಲಿ ರಾಷ್ಟ್ರದ ಮೊತ್ತ ಮೊದಲಿನ ತಾರಾಲಯ ನಿರ್ಮಿಸಬೇಕೆಂದು ಶಿಫಾರಸು ಮಾಡಿ, ಇದಕ್ಕೆ ಅಂದಾಜು ₹24.50 ಕೋಟಿ ವೆಚ್ಚ ತಗಲಬಹುದೆಂದು ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯ ಆಧಾರದ ಮೇಲೆ ಸರ್ಕಾರ ₹24.50 ಕೋಟಿ ಮಂಜೂರು ಮಾಡಿ, ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದ ತಾರಾಲಯ ಎಂದು ಹೆಸರಿಟ್ಟು ಆದೇಶಿಸಿತು.

ಅಂತರ ರಾಷ್ಟ್ರೀಯ ಮಟ್ಟದ ಟೆಂಡರ್‌ ಕರೆದ ನಂತರ, ಇದರ ವೆಚ್ಚ ₹35. 60 ಕೋಟಿಗೆ ಏರಿದ್ದು, ಇದರಲ್ಲಿ 5 ವರ್ಷದ ವಾರಂಟಿ ಕೂಡಾ ಸೇರಿತು. ಈ ಹೆಚ್ಚುವರಿ ಯೋಜನಾ ವೆಚ್ಚವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ.

ದೇಶದ ಪ್ರಥಮ ನಗರ
3ಡಿ, 8ಏ ಡಿಜಿಟಲ್ ಪ್ಲಾನೆಟೋರಿಯಂನ್ನು ಪಡೆದ ಮಂಗಳೂರು, ದೇಶದ ಪ್ರಥಮ ನಗರವಾಗಲಿದೆ. ಸಿಂಗಪುರ, ಚೀನಾದ ಶಾಂಘೈ-ಚೀನಾ, ಅಮೆರಿಕದ ರಿಚ್‍ಮಂಡ್, ಕೊರಿಯಾದ ಆ್ಯನ್‌ಸ್‍ಯೊಂಗ್, ಕೆನಡಾದ ಕಾಲ್‍ಗೇರಿ, ಇಂಗ್ಲೆಂಡ್‌ನ ಬ್ರಿಸ್ಪಾಲ್, ಜರ್ಮನಿಯ ಹ್ಯಾಮ್‌ಬರ್ಗ್‌, ಜಪಾನಿನ ಟೋಕಿಯೋ, ಪೋಲಂಡ್‌ನ ಲೋಡ್ಜ್ ಮುಂತಾದ ಅಂತರ ರಾಷ್ಟ್ರೀಯ ಮಟ್ಟದ ತಾರಾಲಯಗಳಿಗೆ ಸಮಾನವಾದ ತಾರಾಲಯ ಇದಾಗಿದೆ.

* * 

ಮಕ್ಕಳು, ಸಾರ್ವಜನಿಕರಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಕುರಿತಂತೆ ಆಸಕ್ತಿ ಮೂಡಿಸುವ ಕೇಂದ್ರವಾಗಿ 3ಡಿ ತಾರಾಲಯ ಮೂಡಿಬರಲಿದೆ.
ಡಾ. ಕೆ.ವಿ.ರಾವ್‌
ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ

* * 

ಪಿಲಿಕುಳದಲ್ಲಿ ನಿರ್ಮಾಣವಾಗುತ್ತಿರುವ 3ಡಿ ಡಿಜಿಟಲ್ ಸ್ವಾಮಿ ವಿವೇಕಾನಂದ ತಾರಾಲಯ ಅಕ್ಟೋಬರ್ ಕೊನೆಯಲ್ಲಿ ಉದ್ಘಾಟನೆ ಆಗಲಿದೆ. 
ಜೆ.ಆರ್‌. ಲೋಬೊ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.