ADVERTISEMENT

ಮುಚ್ಚಿದ ಶಾಲೆಗೆ ಹೆತ್ತವರೊಂದಿಗೆ ಮಕ್ಕಳು ಹಾಜರ್

ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿನ ಶಾಲೆಗೆ ಬೀಗ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:50 IST
Last Updated 8 ಫೆಬ್ರುವರಿ 2017, 6:50 IST

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಠಾ ರದಲ್ಲಿ ಹಲವಾರು ವರ್ಷಗಳಿಂದ ನಡೆ ದುಕೊಂಡು ಬಂದಿದ್ದ ` ದೇವರ ಶಾಲೆ' ಎಂದೇ ಗುರುತಿಸಿಕೊಂಡಿದ್ದ  ಜಿಲ್ಲಾ ಪಂಚಾಯಿತಿ ಕಿರಿಯ ಪ್ರಾಥಮಿಕ ಶಾಲೆ ಯನ್ನು ಪರೀಕ್ಷಾ ಅವಧಿ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮುಚ್ಚಿರುವ ಕುರಿತು ಕೆಲ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು,ತಮ್ಮ ಮಕ್ಕ ಳೊಂದಿಗೆ ಮತ್ತೆ ಶಾಲೆಗೆ ಬಂದು ಇಲ್ಲಿ ಯೇ ತರಗತಿ ಆರಂಭಿಸುವಂತೆ ಒತ್ತಾಯಿಸಿದ ಘಟನೆ ಮಂಗಳವಾರ ನಡೆದಿದೆ.

ಮೂಲ ಸೌಕರ್ಯದ ಕೊರತೆಯ ಕಾರಣದಿಂದಾಗಿ ದೇವಾಲಯದ ವಠಾ ರದ ಸರ್ಕಾರಿ ಶಾಲೆಯನ್ನು  ಫೆ.1ರಿಂದ ಮುಚ್ಚಲಾಗಿತ್ತು. ಈ ಶಾಲೆಯಲ್ಲಿ ಕಲಿಯು ತ್ತಿದ್ದ 21 ಮಂದಿ ಮಕ್ಕಳನ್ನು ನೆಲ್ಲಿಕಟ್ಟೆ, ಹಾರಾಡಿ, ಸಾಲ್ಮರ, ರಾಗಿಮುಮೇರು ಹಾಗೂ ಬೊಳ್ವಾರು ಸರ್ಕಾರಿ ಶಾಖೆಗಳಿಗೆ ದಾಖಲಿಸಲಾಗಿತ್ತು. ಆದರೆ ಬೇರೆ ಶಾಲೆ ಗಳಿಗೆ ಸೇರಿಸುವ ಮೂಲಕ ಚದುರಿ ಹೋದ ಮಕ್ಕಳ ಪೈಕಿ 8 ಮಂದಿ ಮಂಗ ಳವಾರ ಮತ್ತೆ ತಮ್ಮ ಹೆತ್ತವರೊಂದಿಗೆ ಶಾಲೆಗೆ ಬಂದು ಇಲ್ಲಿಯೇ ತರಗತಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

ನೆಲ್ಲಿಕಟ್ಟೆ ಶಾಲೆಯಲ್ಲಿ ಪ್ರತ್ಯೇಕ ಕೊಠ ಡಿಯಲ್ಲಿ ಇಲ್ಲಿನ ಶಾಲಾ ಮಕ್ಕಳಿಗೆ ತರಗತಿ ಆರಂಭಿಸುವುದಾಗಿ ಹೇಳಲಾಗಿದೆ.  ಬರುವ ಜೂನ್‌ನಿಂದ ಮತ್ತೆ ಇದೇ ಶಾಲೆ ಯಲ್ಲಿ ತರಗತಿ ಆರಂಭಿಸುವುದಾಗಿ ಶಿಕ್ಷ ಕರು ತಿಳಿಸಿದ ಕಾರಣ ನಾವು ನಮ್ಮ ಮಕ್ಕ ಳನ್ನು ಬೇರೆ ಶಾಲೆಗಳಿಗೆ ದಾಖಲಿಸಲು ಒಪ್ಪಿಕೊಂಡಿದ್ದೆವು. 

ಆದರೆ ಇದೀಗ ಈ ಶಾಲೆಯನ್ನು ಶಾಶ್ವತವಾಗಿ ಮುಚ್ಚಲಾಗು ತ್ತಿದೆ.  ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮನ್ನು ಮಾತನಾಡಲು ಕೂಡ ಬಿಟ್ಟಿಲ್ಲ ಎಂದು ಮಂಗಳವಾರ ತಮ್ಮ ಮಕ್ಕಳೊಂದಿಗೆ ಶಾಲೆಗೆ ಬಂದಿದ್ದ ಪದ್ಮಜಾ, ಸುನಿತಾ, ಚೆನ್ನಮ್ಮ ಮತ್ತು ನಾಗಮ್ಮ ಅವರು ಆರೋಪಿಸಿದ್ದಾರೆ.

ಪರೀಕ್ಷೆಗಳು ಹತ್ತಿರುವ ಬರುತ್ತಿರುವ ಸಮಯದಲ್ಲಿ ಮಕ್ಕಳನ್ನು ಬೇರೆ ಶಾಲೆ ಗಳಿಗೆ ಕಳುಹಿಸಿರುವುದು ಸರಿಯಲ್ಲ, ತಮ್ಮ ಮಕ್ಕಳು ಕೂಡ ಬೇರೆ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದು, ಇದರಿಂ ದಾಗಿ ನಮ್ಮ ಮಕ್ಕಳ ಶಿಕ್ಷಣ ಭವಿಷ್ಯ ಹಾಳಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನೀರಿನ ಸಮಸ್ಯೆ ,ಶೌಚ ಸಮಸ್ಯೆ ಮೊದಲಾದ ಮೂಲ ಸೌಕರ್ಯಗಳ ಕೊರತೆ ಹಾಗೂ ಇಲ್ಲಿನ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಮಕ್ಕಳಿಗೆ ಅಪಾ ಯವಾಗಬಾರದೆಂಬ ಉದ್ದೇಶದಿಂದ ಶಾಲೆಯನ್ನು ಮುಚ್ಚಿ ಇಲ್ಲಿರುವ ಮಕ್ಕ ಳನ್ನು ಬೇರೆ ಶಾಲೆಗೆ ಸೇರಿಸಲಾಗಿದೆ. ಎಲ್ಲಾ ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ಸೇರ್ಪಡೆಗೊಂಡಿರುವ ಕುರಿತು ಆಯಾ ಶಾಲೆಗಳಿಂದ ದಾಖಲಾತಿ ಮಾಹಿತಿ ಬಂ ದಿದೆ ಎಂದಿರುವ ಅಲ್ಲಿನ ಶಿಕ್ಷಕರು ಇಲಾಖೆ ಹೇಳಿದಂತೆ ನಾವು ಮಾಡು ತ್ತೇವೆ ಎಂದು ತಿಳಿಸಿದ್ದಾರೆ.

‘ಫೆ.1ರಂದು ಶಾಲೆಯನ್ನು ಮುಚ್ಚಿ ದರೂ ಅಲ್ಲಿನ ಶಿಕ್ಷಕರಿಬ್ಬರು ಅದೇ ಶಾಲೆ ಯಲ್ಲಿ ಹಾಜರಾತಿ ಹಾಕುತ್ತಿದ್ದಾರೆ . ಕಳೆದ ಆರು ದಿನಗಳಿಂದ ಇಬ್ಬರು ಶಿಕ್ಷರು ಮುಚ್ಚಲ್ಪಟ್ಟ ಶಾಲೆಯಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದರೂ ಶಿಕ್ಷಣಾಧಿಕಾ ರಿಗಳು ಗಮನಹರಿಸಿಲ್ಲ ’ ಎಂದು ಆರೋ ಪಿಸಿರುವ ಮಕ್ಕಳ ಹಕ್ಕುಗಳ ಹೋರಾ ಟಗಾರ ಲೋಕೇಶ್ ಅಲುಂಬುಡ ಅವರು ಬೆದರಿಸಿ ಖಾಲಿ ಪೇಪರ್ಗೆ ಸಹಿ ಪಡೆ ದುಕೊಂಡು ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸಿರುವ ಕುರಿತು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.