ADVERTISEMENT

ಸಿದ್ಧಕಟ್ಟೆ: ಅಂಗಡಿ ಬಂದ್, ಪ್ರತಿಭಟನೆ

ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಆರೋಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 9:07 IST
Last Updated 2 ಅಕ್ಟೋಬರ್ 2014, 9:07 IST

ಬಂಟ್ವಾಳ: ಜಿಲ್ಲೆಯಾದ್ಯಂತ ಹಿಂದೂ ವಿದ್ಯಾರ್ಥಿನಿಯರು ಮತ್ತು ಯುವತಿಯರ ಮೇಲೆ ಕೆಲವೊಂದು ಮತಾಂಧರು ಅತ್ಯಾಚಾರ ಮತ್ತು ಲವ್‌ ಜಿಹಾದ್‌ಗೆ ಮುಂದಾಗಿದ್ದು, ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ಮತ್ತಿತರ ದುಸ್ಕೃತ್ಯಕ್ಕೆ ಇಲ್ಲಿನ ಕಾಂಗ್ರೆಸ್ ಮುಖಂಡರು ರಕ್ಷಣೆ ನೀಡುವ ಮತ್ತೆ ‘ನೈತಿಕ ಪೊಲೀಸ್‌ಗಿರಿ’ಗೆ ಪರೋಕ್ಷವಾಗಿ ಪ್ರೇರಣೆ ನೀಡುತ್ತಿ ದ್ದಾರೆ ಎಂದು ಜಿಲ್ಲಾ ಬಜರಂಗದಳ ಮುಖಂಡ ಜಿತೇಂದ್ರ ಎಸ್.ಕೊಟ್ಟಾರಿ ಆರೋಪಿಸಿದ್ದಾರೆ.

ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಕೈ ಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿ ಆಗ್ರಹಿಸಿ ಇಲ್ಲಿನ ಎಬಿವಿಪಿ ಮತ್ತು ವಿವಿಧ ಹಿಂದೂ ಸಂಘಟನೆ ವತಿಯಿಂದ ಬುಧವಾರ ಮಧ್ಯಾಹ್ನ ಸಿದ್ಧಕಟ್ಟೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಳೆದ ಸೋಮವಾರ ಸಂಜೆ ಬಂಟ್ವಾಳ ಎಸ್‍ವಿಎಸ್ ಕಾಲೇಜಿನಿಂದ ಬಸ್ಸಿನಲ್ಲಿ ಬಂದು ರಸ್ತೆ ಬದಿ ಏಕಾಂಗಿ ಯಾಗಿ ಮನೆಗೆ ತೆರಳುತ್ತಿದ್ದ ಹಿಂದೂ ವಿದ್ಯಾರ್ಥಿನಿ ಯೊಬ್ಬರಿಗೆ ಸ್ಥಳೀಯ ಪುಚ್ಚಮೊಗರು ನಿವಾಸಿ ಎರಡು ಮಕ್ಕಳ ತಂದೆ ಸಿರಾಜ್ ಎಂಬಾತನು ಕೈ ಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತಕ್ಷಣವೇ ದೂರು ಸಲ್ಲಿಸಿದ್ದರೂ ಆರೋಪಿಯನ್ನು ಮಂಗಳವಾರ ಬಂಧಿಸಿ ಕೂಡಲೇ ಬಿಡುಗಡೆಗೊಳಿಸಲು ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತಿತರ ಕಾಂಗ್ರೆಸ್ ಮುಖಂಡರು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡರಾದ ಜಿ.ಆನಂದ, ಉಳಿಪಾಡಿಗುತ್ತು ರಾಜೇಶ ನಾಯ್ಕ್, ಎಂ.ತುಂಗಪ್ಪ ಬಂಗೇರ, ಕೆ.ಪಿ.ಜಗದೀಶ ಅಧಿಕಾರಿ, ರತ್ನಕುಮಾರ್ ಚೌಟ, ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ, ತಾ.ಪಂ.ಸದಸ್ಯರಾದ ವಸಂತ ಕುಮಾರ್, ರೇವತಿ ಆರ್.ಪೂಜಾರಿ, ಹಿಂದೂ ಸಂಘಟನೆ ಮುಖಂಡರಾದ ರವಿರಾಜ್ ಬಿ.ಸಿ.ರೋಡ್, ಧನರಾಜ್‌ ಭಟ್ ಕೆದಿಲ, ದಲಿತ ಸಂಘಟನೆ ಮುಖಂಡ ಶ್ರೀನಿವಾಸ ಮೂಡುಬಿದ್ರೆ, ಎಬಿವಿಪಿ ಮುಖಂಡ ವಾಸುದೇವ ಭಟ್ ಮತ್ತಿತರರು ಮಾತನಾಡಿದರು.

ಇನ್‌ಸ್ಪೆೆಕ್ಟರ್ ಕೆ.ಯು.ಬೆಳ್ಳಿಯಪ್ಪ ಮಾತನಾಡಿ, ಆರೋಪಿ ಪಿಕಪ್ ವಾಹನ ಚಾಲಕ ಸಿರಾಜ್ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿ, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಘೋಷಿಸಿದರು.

ಸಿದ್ಧಕಟ್ಟೆ, ಬಂಟ್ವಾಳ, ವಾಮದಪದವು ಮತ್ತಿತರ ಕಡೆಗಳಿಂದ ವಿವಿಧ ಕಾಲೇಜು ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿ ಸಿರಾಜ್ ರಕ್ಷಣೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಮುಂದಾಗಿದ್ದಾರೆ ಎಂದು ಆರೋ ಪಿಸಿ, ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ವರ್ತಕರು ಸ್ವಯಂಪ್ರೇರಿತವಾಗಿ ಸಿದ್ಧಕಟ್ಟೆ ಪೇಟೆ ಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.   ಎಎಸ್ಪಿ ರಾಹುಲ್ ಕುಮಾರ್, ನಗರ ಠಾಣಾಧಿಕಾರಿ ನಂದ ಕುಮಾರ್ ಮತ್ತಿತರರು ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.